ಸರ್ದಾರ್ ಸರೋವರ ಅಣೆಕಟ್ಟು ಲೋಕಾರ್ಪಣೆ

0
25

ನರ್ಮದಾ ನದಿಗೆ ಗುಜರಾತ್‌ನಲ್ಲಿ ಕಟ್ಟಲಾಗಿರುವ ಸರ್ದಾರ್ ಸರೋವರ ಅಣೆಕಟ್ಟನ್ನು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಉದ್ಘಾಟಿಸಿದರು. ‘ವಿಶ್ವದ ಇನ್ಯಾವುದೇ ಯೋಜನೆ ಎದುರಿಸದಷ್ಟು ಅಡೆತಡೆಗಳನ್ನು ಈ ಯೋಜನೆ ಎದುರಿಸಿದೆ. ಆದರೆ ನಾವು ಇದನ್ನು ಮಾಡಿಯೇ ತೀರುತ್ತೇವೆ ಎಂದು ದೃಢನಿಶ್ಚಯ ಮಾಡಿಕೊಂಡಿದ್ದೆವು. ಇದು ‘ನವ ಭಾರತ’ದ ಉದಯೋನ್ಮುಖ ಶಕ್ತಿ ಮತ್ತು ಈ ಭಾಗದ ಜನರ ಅಭಿವೃದ್ಧಿಯ ಸಂಕೇತವಾಗಲಿದೆ’ ಎಂದು ಮೋದಿ ಬಣ್ಣಿಸಿದ್ದರೆ.

ನರ್ಮದಾ ನದಿಗೆ ಗುಜರಾತ್‌ನಲ್ಲಿ ಕಟ್ಟಲಾಗಿರುವ ಸರ್ದಾರ್ ಸರೋವರ ಅಣೆಕಟ್ಟನ್ನು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಉದ್ಘಾಟಿಸಿದರು.

1961ರಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗಿದ್ದ ಈ ಅಣೆಕಟ್ಟನ್ನು ಬರೋಬ್ಬರಿ 56 ವರ್ಷಗಳ ನಂತರ ಲೋಕಾರ್ಪಣೆ ಮಾಡಲಾಗಿದೆ.

‘ವಿಶ್ವದ ಇನ್ಯಾವುದೇ ಯೋಜನೆ ಎದುರಿಸದಷ್ಟು ಅಡೆತಡೆಗಳನ್ನು ಈ ಯೋಜನೆ ಎದುರಿಸಿದೆ. ಆದರೆ ನಾವು ಇದನ್ನು ಮಾಡಿಯೇ ತೀರುತ್ತೇವೆ ಎಂದು ದೃಢನಿಶ್ಚಯ ಮಾಡಿಕೊಂಡಿದ್ದೆವು. ಇದು ‘ನವ ಭಾರತ’ದ ಉದಯೋನ್ಮುಖ ಶಕ್ತಿ ಮತ್ತು ಈ ಭಾಗದ ಜನರ ಅಭಿವೃದ್ಧಿಯ ಸಂಕೇತವಾಗಲಿದೆ’ ಎಂದು ಮೋದಿ ಬಣ್ಣಿಸಿದರು.

‘ಈ ಯೋಜನೆಗೆ ಸಂಬಂಧಿಸಿದಂತೆ ನಮ್ಮ ಮೇಲೆ ಹಲವು ಸುಳ್ಳು ಆರೋಪಗಳನ್ನು ಹೊರಿಸಲಾಗಿತ್ತು. ಯೋಜನೆಯನ್ನು ನಿಲ್ಲಿಸಲು ಸಾಕಷ್ಟು ಮಂದಿ ಸಂಚು ರೂಪಿಸಿದ್ದರು. ಆದರೆ ಇದನ್ನೊಂದು ರಾಜಕೀಯ ಸಂಘರ್ಷವನ್ನಾಗಿಸದೇ ಇರಲು ನಾವು ನಿರ್ಧರಿಸಿದ್ದೆವು’ ಎಂದು ಅವರು ಹೇಳಿದರು.

‘ಈ ಯೋಜನೆಯನ್ನು ಮುಗಿಸಲು ಯತ್ನಿಸಿದ ಎಲ್ಲರ ಬಗ್ಗೆಯೂ ನನಗೆ ಚೆನ್ನಾಗಿ ತಿಳಿದಿದೆ. ಅವರ ಹೆಸರನ್ನೂ ನಾನು ಇಲ್ಲಿ ಹೇಳುವುದಿಲ್ಲ. ಆ ರೀತಿ ಮಾಡಲು ನನಗೆ ಇಷ್ಟವೂ ಇಲ್ಲ. ಇಡೀ ಯೋಜನೆಯ ಬಗ್ಗೆ ತಪ್ಪು ಮಾಹಿತಿಯನ್ನು ಪ್ರಸಾರ ಮಾಡಲು ದೊಡ್ಡ ಅಭಿಯಾನವನ್ನೇ ನಡೆಸಲಾಯಿತು. ಯೋಜನೆಗೆ ಸಾಲ ನೀಡಲು ವಿಶ್ವ ಬ್ಯಾಂಕ್‌ ಒಪ್ಪಿತ್ತು. ಆದರೆ ಯೋಜನೆಯಿಂದ ಪರಿಸರಕ್ಕೆ ಹಾನಿಯಾಗುತ್ತದೆ ಎಂದು ಸಾಲ ನೀಡಲು ನಿರಾಕರಿಸಿತು. ವಿಶ್ವ ಬ್ಯಾಂಕ್‌ ನಮ್ಮ ಜತೆ ಇಲ್ಲದಿದ್ದರೂ ನಾವು ಈ ಯೋಜನೆಯನ್ನು ಪೂರ್ಣಗೊಳಿ
ಸಿದ್ದೇವೆ’ ಎಂದು ಅವರು ಹೇಳಿದರು.

‘ಅಭಿವೃದ್ಧಿಯನ್ನು ಕುಂಠಿತಗೊಳಿಸಲು ಪ್ರಮುಖ ಕಾರಣಗಳಲ್ಲಿ ನೀರಿನ ಕೊರತೆ ಮೊದಲನೆಯದು. ಈ ಅಣೆಕಟ್ಟೆಯಿಂದ ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ರಾಜಸ್ಥಾನದ ಕೆಲವು ಭಾಗಗಳಿಗೆ ನೀರು ದೊರೆಯುತ್ತದೆ. ಸರ್ದಾರ್ ಸರೋವರದ ನೀರನ್ನು ಪಾಕಿಸ್ತಾನ ಗಡಿಯವರೆಗೂ ಹರಿಸಲಾಗುತ್ತಿದೆ. ಅಲ್ಲಿ ಗಡಿ ಕಾಯುತ್ತಿರುವ ಬಿಎಸ್‌ಎಫ್ ಯೋಧರಿಗೆ ಈ ಯೋಜನೆ ಮೂಲಕ ಕುಡಿಯುವ ನೀರನ್ನು ಒದಗಿಸಲಾಗುತ್ತದೆ’ ಎಂದು ಮೋದಿ ವಿವರಿಸಿದರು.

 

‘ಎಂಜಿನಿಯರಿಂಗ್ ಪವಾಡ’

‘ಸರ್ದಾರ್ ಸರೋವರ ಅಣೆಕಟ್ಟು ಒಂದು ಎಂಜಿನಿಯರಿಂಗ್ ಪವಾಡ. ಪ್ರತಿ ಎಂಜಿನಿಯರಿಂಗ್‌ ವಿದ್ಯಾರ್ಥಿ ಈ ಯೋಜನೆಯನ್ನು ಕೂಲಂಕಷವಾಗಿ ಅಧ್ಯಯನ ಮಾಡಬೇಕು’ ಎಂದು ಮೋದಿ ಕರೆ ನೀಡಿದ್ದಾರೆ.

ಪ್ರಮುಖಾಂಶಗಳು

# 1961ರಲ್ಲಿ ಮಾಜಿ ಪ್ರಧಾನಿ ಜವಾಹರ ಲಾಲ್ ನೆಹರೂ ಅವರಿಂದ ಶಂಕುಸ್ಥಾಪನೆ

# 56 ವರ್ಷಗಳ ನಂತರ ನಿರ್ಮಾಣ ಪೂರ್ಣ, ಲೋಕಾರ್ಪಣೆ