ಸರ್ದಾರ್‌ ಪಟೇಲ್‌ ಪುಣ್ಯತಿಥಿ: ಗೌರವ ಸಲ್ಲಿಸಿದ ಪ್ರಧಾನಿ ಮೋದಿ

0
27

ಮೊದಲ ಉಪಪ್ರಧಾನಿಯೂ ಆಗಿದ್ದ ಪಟೇಲ್‌ ಅವರು 1950ರ ಡಿಸೆಂಬರ್‌ 15ರಂದು ಸಾವಿಗೀಡಾಗಿದ್ದರು. ‘ಭಾರತದ ಉಕ್ಕಿನ ಮನುಷ್ಯ’ ಎಂದೇ ಖ್ಯಾತವಾಗಿದ್ದ ಅವರು, ದೇಶದ ಎಲ್ಲಾ ರಾಜ್ಯಗಳನ್ನು ಒಂದುಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಸ್ವಾತಂತ್ರ್ಯ ಹೋರಾಟಗಾರ ಹಾಗೂ ದೇಶದ ಮೊದಲ ಗೃಹ ಸಚಿವ ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ಅವರ ಪುಣ್ಯ ತಿಥಿ ಪ್ರಯುಕ್ತ ಗೌರವ ಸಲ್ಲಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ದೇಶದ ಪ್ರತಿಯೊಬ್ಬರು ಪಟೇಲರಿಗೆ ಋಣಿಯಾಗಿರಬೇಕು ಎಂದು ತಿಳಿಸಿದ್ದಾರೆ.

ಮೊದಲ ಉಪಪ್ರಧಾನಿಯೂ ಆಗಿದ್ದ ಪಟೇಲ್‌ ಅವರು 1950ರ ಡಿಸೆಂಬರ್‌ 15ರಂದು ಸಾವಿಗೀಡಾಗಿದ್ದರು. ‘ಭಾರತದ ಉಕ್ಕಿನ ಮನುಷ್ಯ’ ಎಂದೇ ಖ್ಯಾತವಾಗಿದ್ದ ಅವರು, ದೇಶದ ಎಲ್ಲಾ ರಾಜ್ಯಗಳನ್ನು ಒಂದುಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

‘ದೇಶಕ್ಕೆ ಪಟೇಲರು ಸಲ್ಲಿಸಿರುವ ಸೇವೆ ಸ್ಮರಣೀಯವಾಗಿದ್ದು, ಪ್ರತಿಯೊಬ್ಬರೂ ಅವರಿಗೆ ಋಣಿಯಾಗಿರಬೇಕು’ ಎಂದು ಮೋದಿ ಟ್ವೀಟ್‌ ಮಾಡಿದ್ದಾರೆ.