ಸರ್ಕಾರಿ ಸ್ವಾಮ್ಯದ 19 ಬ್ಯಾಂಕ್‌ಗಳ ನಷ್ಟ ₹ 87 ಸಾವಿರ ಕೋಟಿ

0
20

2017–18ನೇ ಹಣಕಾಸು ವರ್ಷದಲ್ಲಿ ಪ್ರಮುಖ 19 ಬ್ಯಾಂಕ್‌ಗಳ ಒಟ್ಟು ನಷ್ಟವು ₹ 87,357 ಕೋಟಿಗೆ ತಲುಪಿದೆ ಹಣಕಾಸು ಇಲಾಖೆ ಪ್ರಕಟಿಸಿದೆ.

ನವದೆಹಲಿ:  2017–18ನೇ ಹಣಕಾಸು ವರ್ಷದಲ್ಲಿ ಪ್ರಮುಖ 19 ಬ್ಯಾಂಕ್‌ಗಳ ಒಟ್ಟು ನಷ್ಟವು 87,357 ಕೋಟಿಗೆ ತಲುಪಿದೆ ಹಣಕಾಸು ಇಲಾಖೆ ಪ್ರಕಟಿಸಿದೆ.

ಪಂಜಾಬ್‌ ಬ್ಯಾಷನಲ್‌ ಬ್ಯಾಂಕ್‌  ಅತಿ ಹೆಚ್ಚು ನಷ್ಟದಲ್ಲಿರುವ ಬ್ಯಾಂಕ್ ಆಗಿದೆ. ಐಡಿಬಿಐ ಮತ್ತು ಎಸ್‌ಬಿಐ ಬ್ಯಾಂಕ್‌ಗಳು ಸಹ ನಷ್ಟದಲ್ಲಿವೆ.

ಹಗರಣದಲ್ಲಿ ಸಿಲುಕಿರುವ ಪಂಜಾಬ್‌ ಬ್ಯಾಷನಲ್‌ ಬ್ಯಾಂಕ್‌ (ಪಿಎನ್‌ಬಿ) ಒಂದರ ನಷ್ಟದ ಮೊತ್ತವೇ  12,283 ಕೋಟಿ ಇದ್ದು, ಮೊದಲ ಸ್ಥಾನದಲ್ಲಿದೆ. ಐಡಿಬಿಐ ಎರಡನೇ ಸ್ಥಾನದಲ್ಲಿದೆ.

ವಿಜಯ ಬ್ಯಾಂಕ್‌ ( 727 ಕೋಟಿ) ಮತ್ತು ಇಂಡಿಯನ್‌ ಬ್ಯಾಂಕ್‌ಗಳು (1,259 ಕೋಟಿ) ಮಾತ್ರವೇ ಲಾಭ ಗಳಿಸಿವೆ.

ನಷ್ಟದಲ್ಲಿರುವ ಪ್ರಮುಖ ಬ್ಯಾಂಕ್‌ಗಳು: ಪಿಎನ್‌ಬಿ; 12,283 ಕೋಟಿ, ಐಡಿಬಿಐ ಬ್ಯಾಂಕ್‌; 8,238 ಕೋಟಿ ಮತ್ತು ಎಸ್‌ಬಿಐ; 6,547 ಕೋಟಿ ರೂ ನಷ್ಟದಲ್ಲಿವೆ.