ಸರ್ಕಾರದ ವರದಿ : ಸಗಟು ಹಣದುಬ್ಬರ ಶೇ 2.47ಕ್ಕೆ ಇಳಿಕೆ

0
13

ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಆಧರಿಸಿದ ಹಣದುಬ್ಬರವು ಮಾರ್ಚ್‌ನಲ್ಲಿ ಶೇ 2.47 ರಷ್ಟಿದೆ. ಫೆಬ್ರುವರಿ ತಿಂಗಳಿನಲ್ಲಿ ಡಬ್ಲ್ಯುಪಿಐ ಶೇ 5.11 ರಷ್ಟಿತ್ತು.

ನವದೆಹಲಿ: ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಆಧರಿಸಿದ ಹಣದುಬ್ಬರವು ಮಾರ್ಚ್‌ನಲ್ಲಿ ಶೇ 2.47 ರಷ್ಟಿದೆ. ಫೆಬ್ರುವರಿ ತಿಂಗಳಿನಲ್ಲಿ ಡಬ್ಲ್ಯುಪಿಐ ಶೇ 5.11 ರಷ್ಟಿತ್ತು.

ತರಕಾರಿ ಮತ್ತು ಬೇಳೆಕಾಳುಗಳ ಬೆಲೆಯಲ್ಲಿ ಇಳಿಕೆ ಆಗಿರುವುದರಿಂದ ಸಗಟು ಹಣದುಬ್ಬರದ ದರ ಕಡಿಮೆ ಆಗಿದೆ ಎಂದು ಸರ್ಕಾರದ ವರದಿ ತಿಳಿಸಿದೆ.

ಆಹಾರ ಪದಾರ್ಥಗಳ ಬೆಲೆ ಫೆಬ್ರುವರಿಯಲ್ಲಿ ಶೇ 0.88 ರಷ್ಟು ಏರಿಕೆ ಕಂಡಿತ್ತು. ಅದು ಮಾರ್ಚ್‌ನಲ್ಲಿ ಶೇ 0.29ಕ್ಕೆ ಇಳಿದಿದೆ.ಕಚ್ಚಾ ತೈಲ ಬೆಲೆಯಲ್ಲಿನ ಏರಿಕೆಯು ಇಂಧನ ಮತ್ತು ವಿದ್ಯುತ್‌ ಬೆಲೆಗಳಲ್ಲಿ ಕ್ರಮವಾಗಿ ಶೇ 4.70 ಮತ್ತು ಶೇ 3.81 ರಷ್ಟು ಹೆಚ್ಚಾಗಲು ಕಾರಣವಾಗಿದೆ.