ಸರಾಸರಿ ವೇತನದಲ್ಲಿ ಭಾರತದಲ್ಲೇ ಬೆಂಗಳೂರು ನಂಬರ್ 1

0
604

ಹಾರ್ಡ್‍ವೇರ್ ಮತ್ತು ನೆಟ್‍ವರ್ಕಿಂಗ್, ಸಾಫ್ಟ್‌ವೇರ್ ಮತ್ತು ಐಟಿ ಸೇವೆಗಳು ಹಾಗೂ ಗ್ರಾಹಕ ಕ್ಷೇತ್ರ ಭಾರತದಲ್ಲಿ ಅತಿ ಹೆಚ್ಚು ವೇತನ ನೀಡುತ್ತಿರುವ ಮೂರು ಪ್ರಮುಖ ಉದ್ದಿಮೆಗಳು ಎಂದು ವ್ಯಾಪಾರ ಮತ್ತು ಉದ್ಯೋಗ-ಆಧಾರಿತ ಸೇವಾ ಸಂಸ್ಥೆ ಲಿಂಕ್ಡ್‌ಇನ್ (LinkedIn) ತಿಳಿಸಿದೆ. ಇನ್ನೊಂದು ವಿಶೇಷ ಎಂದರೆ ಟೆಕ್ನಾಲಜಿ ಉದ್ದಿಮೆಗಳಲ್ಲಿ ಬೆಂಗಳೂರಿನಲ್ಲಿ ಅತಿ ಹೆಚ್ಚು ವೇತನ ನೀಡಲಾಗುತ್ತಿದ್ದು ನಂತರದ ಸ್ಥಾನಗಳನ್ನು ಮುಂಬೈ ಮತ್ತು ದಿಲ್ಲಿ ಅಲಂಕರಿಸಿವೆ.

ಬೆಂಗಳೂರು: ಹಾರ್ಡ್‍ವೇರ್ ಮತ್ತು ನೆಟ್‍ವರ್ಕಿಂಗ್, ಸಾಫ್ಟ್‌ವೇರ್ ಮತ್ತು ಐಟಿ ಸೇವೆಗಳು ಹಾಗೂ ಗ್ರಾಹಕ ಕ್ಷೇತ್ರ ಭಾರತದಲ್ಲಿ ಅತಿ ಹೆಚ್ಚು ವೇತನ ನೀಡುತ್ತಿರುವ ಮೂರು ಪ್ರಮುಖ ಉದ್ದಿಮೆಗಳು ಎಂದು ವ್ಯಾಪಾರ ಮತ್ತು ಉದ್ಯೋಗ-ಆಧಾರಿತ ಸೇವಾ ಸಂಸ್ಥೆ  ಲಿಂಕ್ಡ್‌ಇನ್ (LinkedIn) ತಿಳಿಸಿದೆ. ಇನ್ನೊಂದು ವಿಶೇಷ ಎಂದರೆ ಟೆಕ್ನಾಲಜಿ ಉದ್ದಿಮೆಗಳಲ್ಲಿ ಬೆಂಗಳೂರಿನಲ್ಲಿ ಅತಿ ಹೆಚ್ಚು ವೇತನ ನೀಡಲಾಗುತ್ತಿದ್ದು ನಂತರದ ಸ್ಥಾನಗಳನ್ನು ಮುಂಬೈ ಮತ್ತು ದಿಲ್ಲಿ ಅಲಂಕರಿಸಿವೆ. 

ಹಾರ್ಡ್‌ವೇರ್ ಮತ್ತು ನೆಟ್‌ವರ್ಕಿಂಗ್ ಉದ್ಯೋಗಗಳು ವಾರ್ಷಿಕ ಸರಾಸರಿ 15 ಲಕ್ಷ ರೂ. ವೇತನ ಇದ್ದರೆ, ಸಾಫ್ಟ್‌ವೇರ್ ಕ್ಷೇತ್ರದಲ್ಲಿ 12 ಲಕ್ಷ ರೂ. ಹಾಗೂ ಗ್ರಾಹಕ ಕ್ಷೇತ್ರದಲ್ಲಿ ವಾರ್ಷಿಕ ಸರಾಸರಿ ವೇತನ 9 ಲಕ್ಷ ರೂ.ಗಳು ಎಂದು ಲಿಂಕ್ಡ್‌ಇನ್ ಸಮೀಕ್ಷೆ ತಿಳಿಸಿದೆ. 

ಹಾರ್ಡ್‌ವೇರ್ ಕ್ಷೇತ್ರದಲ್ಲಿ ಪ್ರಮುಖವಾಗಿ ಚಿಪ್ ಡಿಸೈನ್, ನೆಟ್‌ವರ್ಕಿಂಗ್‌ನಲ್ಲಿ ಅತ್ಯಧಿಕ ವೇತನ ನೀಡಲಾಗುತ್ತಿದೆ. ಚಿಪ್ ಡಿಸೈನ್ ಕಾರ್ಯವಿಧಾನ ಭಾರತಕ್ಕೆ ಸ್ಥಳಾಂತರವಾದ ಬಳಿಕ ಮುಖ್ಯವಾಗಿ ವಿಎಲ್‍ಎಸ್‍ಐ (very-large-scale integration) ವಿಭಾಗದಲ್ಲಿ ವೇತನಗಳು ಒಮ್ಮಿಂದೊಮ್ಮೆಲೆ ಏರಿಕೆಯಾಗಿವೆ ಎನ್ನುತ್ತಾರೆ ಸೆಮಿಕಂಡಕ್ಟರ್ ಟೂಲ್ಸ್ ಕಂಪೆನಿ ಸಿನಾಪ್ಸಿಸ್ ಇಂಡಿಯಾದ ಡಿಸೈನ್ ಮತ್ತು ಆ‍ರ್‌ ಅಂಡ್ ಡಿ ಮುಖ್ಯಸ್ಥ ಶಿವಾನಂದ ಕೋಟೇಶ್ವರ್. 

ಇಂಜಿನಿಯರಿಂಗ್ ನಿರ್ದೇಶಕ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಕಾರ್ಯನಿರ್ವಾಹಕ ನಿರ್ದೇಶಕ, ಸೇಲ್ಸ್ ಉಪಾಧ್ಯಕ್ಷ ಹಾಗೂ ಹಿರಿಯ ಪ್ರೋಗ್ರಾಮ್ ಮ್ಯಾನೇಜರ್ ಹುದ್ದೆಗಳಿಗೆ ಅತ್ಯಧಿಕ ವೇತನ ನೀಡಲಾಗುತ್ತಿದೆ. 

ಈ ಹುದ್ದೆಗಳಿಗೆ ಬೆಂಗಳೂರಿನಲ್ಲಿ ಸರಾಸರಿ ವೇತನ 12 ಲಕ್ಷಗಳಿದ್ದರೆ ಮುಂಬೈ ಮತ್ತು ದಿಲ್ಲಿ-ಎನ್‍ಸಿಆರ್‌‍ಗಳಲ್ಲಿ ತಲಾ 9 ಲಕ್ಷ ರೂ.ಗಳು. ಹೈದರಾಬಾದ್‌ನಲ್ಲಿ 8.5 ಲಕ್ಷ, ಚೈನ್ನೈನಲ್ಲಿ 6.3 ಲಕ್ಷಗಳಷ್ಟಿದೆ ಎಂದು ಲಿಂಕ್ಡ್‌ಇನ್ ವರದಿ ತಿಳಿಸಿದೆ. ಭಾರತದಲ್ಲಿ ಲಿಂಕ್ಡ್‌ಇನ್ ಬಳಕೆದಾರರ ಸಂಖ್ಯೆ 5 ಕೋಟಿಗೂ ಅಧಿಕ ಇದ್ದು ಯುಎಸ್ ಬಳಿಕ ಭಾರತ ಎರಡನೇ ಸ್ಥಾನದಲ್ಲಿದೆ.