ಸರಕಾರಿ ಸೌಲಭ್ಯ ಬೇಡವೆಂದ ವಾಜಪೇಯಿ ಕುಟುಂಬ

0
331

ದೇಶದ ಎಲ್ಲಾ ಮಾಜಿ ಪ್ರಧಾನಮಂತ್ರಿಗಳ ಕುಟುಂಬಕ್ಕೆ ನೀಡಲಾಗುವ ಭದ್ರತೆ, ವಸತಿ ಸೇರಿದಂತೆ ಹಲವು ಸರಕಾರಿ ಸೇವೆಗಳನ್ನು ಪಡೆಯಲು ದಿವಂಗತ ಮಾಜಿ ಪ್ರಧಾನಿ ವಾಜಪೇಯಿ ಕುಟುಂಬಸ್ಥರು ನಿರಾಕರಿಸಿದ್ದಾರೆ.

ಹೊಸದಿಲ್ಲಿ: ದೇಶದ ಎಲ್ಲಾ ಮಾಜಿ ಪ್ರಧಾನಮಂತ್ರಿಗಳ ಕುಟುಂಬಕ್ಕೆ ನೀಡಲಾಗುವ ಭದ್ರತೆ, ವಸತಿ ಸೇರಿದಂತೆ ಹಲವು ಸರಕಾರಿ ಸೇವೆಗಳನ್ನು ಪಡೆಯಲು ದಿವಂಗತ ಮಾಜಿ ಪ್ರಧಾನಿ ವಾಜಪೇಯಿಕುಟುಂಬಸ್ಥರು ನಿರಾಕರಿಸಿದ್ದಾರೆ.

ಈ ಕುರಿತು ಪ್ರಧಾನಿ ಕಾರ್ಯಾಲಯಕ್ಕೆ ಪತ್ರ ಬರೆದಿರುವ ವಾಜಪೇಯಿ ಅವರ ದತ್ತು ಪುತ್ರಿ ನಮಿತಾ ಭಟ್ಟಾಚಾರ್ಯ  ಅವರು, ತಮಗೆ ಯಾವುದೇ ಸೌಲಭ್ಯಗಳು ಬೇಡ ಎಂದಿದ್ದಾರೆ. ಅಲ್ಲದೆ, ವಾಜಪೇಯಿ ಅವರೊಂದಿಗೆ ತಾವು ನೆಲೆಸಿದ್ದ ದಿಲ್ಲಿಯ ಕೃಷ್ಣ ಮೆನನ್‌ ಮಾರ್ಗದಲ್ಲಿರುವ ಸರಕಾರಿ ಬಂಗಲೆಯನ್ನು ತೊರೆಯುವುದಾಗಿ ಅವರು ತಿಳಿಸಿದ್ದಾರೆ.

ವಾಜಪೇಯಿ ಬದುಕಿದ್ದಾಗ ನಮಿತಾ ಅವರು ತಮ್ಮ ಪತಿ ರಂಜನ್‌ ಭಟ್ಟಾಚಾರ್ಯ ಹಾಗೂ ಪುತ್ರಿ ನಿಹಾರಿಕಾ ಜತೆ ಇದೇ ಬಂಗಲೆಯಲ್ಲಿ ತಂಗಿದ್ದರು. 

ಕುಟುಂಬ ನಿರ್ವಹಣೆಯ ಖರ್ಚನ್ನು ಭರಿಸುವ ಶಕ್ತಿ ತಮಗಿದ್ದು, ಸರಕಾರದ ಬೊಕ್ಕಸಕ್ಕೆ ಹೊರೆಯಾಗುವುದು ಇಷ್ಟವಿಲ್ಲ ಎಂದು ನಮಿತಾ ಪತ್ರದಲ್ಲಿ ತಿಳಿಸಿದ್ದಾರೆ. 

93 ವರ್ಷದ ವಾಜಪೇಯಿ ಅವರು 2018ರ ಆಗಸ್ಟ್‌ 16ರಂದು ಸುದೀರ್ಘ ಅನಾರೋಗ್ಯದ ಬಳಿಕ ದಿಲ್ಲಿಯ ಏಮ್ಸ್‌ ಆಸ್ಪತ್ರೆಯಲ್ಲಿ ಕೊನೆಯುಸಿರೆಳದರು.