ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ: ಚೊಚ್ಚಲ ಟ್ವೆಂಟಿ–20 ಪ್ರಶಸ್ತಿ ಗೆದ್ದ “ಕರ್ನಾಟಕ”

0
415

ರಾಜ್ಯದ ಭರವಸೆಯ ಆಟಗಾರ ಮಯಾಂಕ್​ ಅಗರ್ವಾಲ್​ (85*) ಆಕರ್ಷಕ ಅರ್ಧಶತಕದ ನೆರವಿನಿಂದ ಇಲ್ಲಿನ ಹೋಳ್ಕರ್​ ಕ್ರೀಡಾಂಗಣದಲ್ಲಿ ನಡೆದ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟ್ವೆಂಟಿ–20 ಟೂರ್ನಿಯ ಫೈನಲ್​ನಲ್ಲಿ ಮಹಾರಾಷ್ಟ್ರದ ವಿರುದ್ಧ ಕರ್ನಾಟಕ 8 ವಿಕೆಟ್​ಗಳ ಭರ್ಜರಿ ಜಯ ದಾಖಲಿಸಿದ್ದು, ಚೊಚ್ಚಲ ಬಾರಿಗೆ ಪ್ರಶಸ್ತಿಯನ್ನು ಎತ್ತಿ ಹಿಡಿದಿದೆ.

ಇಂದೋರ್​: ರಾಜ್ಯದ ಭರವಸೆಯ ಆಟಗಾರ ಮಯಾಂಕ್​ ಅಗರ್ವಾಲ್​ (85*) ಆಕರ್ಷಕ ಅರ್ಧಶತಕದ ನೆರವಿನಿಂದ ಇಲ್ಲಿನ ಹೋಳ್ಕರ್​ ಕ್ರೀಡಾಂಗಣದಲ್ಲಿ ನಡೆದ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟ್ವೆಂಟಿ–20 ಟೂರ್ನಿಯ ಫೈನಲ್​ನಲ್ಲಿ ಮಹಾರಾಷ್ಟ್ರದ ವಿರುದ್ಧ ಕರ್ನಾಟಕ 8 ವಿಕೆಟ್​ಗಳ ಭರ್ಜರಿ ಜಯ ದಾಖಲಿಸಿದ್ದು, ಚೊಚ್ಚಲ ಬಾರಿಗೆ ಪ್ರಶಸ್ತಿಯನ್ನು ಎತ್ತಿ ಹಿಡಿದಿದೆ.

ದೇಶೀಯ ಚುಟುಕು ಕ್ರಿಕೆಟ್​ ಟೂರ್ನಿಯುದ್ದಕ್ಕೂ ಅಜೇಯ ಸಾಧನೆ ಮಾಡಿದ್ದ ಕರ್ನಾಟಕ ತಂಡ ಫೈನಲ್​ನಲ್ಲೂ ಸ್ಥಿರ ಪ್ರದರ್ಶನವನ್ನು ಮುಂದುವರಿಸುವ ಮೂಲಕ ಚೊಚ್ಚಲ ಟ್ವೆಂಟಿ–20 ಪ್ರಶಸ್ತಿ ಕನಸನ್ನು ನನಸಾಗಿಸಿಕೊಂಡಿದೆ. ಮಹಾರಾಷ್ಟ್ರ ನೀಡಿದ 156 ರನ್​ ಗುರಿ ಬೆನ್ನತ್ತಿದ ಕರ್ನಾಟಕ ತಂಡ 18.3 ಓವರ್​ಗಳಲ್ಲಿ 2 ವಿಕೆಟ್​ ನಷ್ಟಕ್ಕೆ 159 ರನ್​ ಸಿಡಿಸಿ ಜಯದ ನಗೆ ಬೀರಿತು.

ಕರ್ನಾಟಕದ ಪರ ಮಯಾಂಕ್​ ಅಗರ್ವಾಲ್​ ಆಕರ್ಷಕ ಅರ್ಧ ಶತಕ ಗಳಿಸಿದರೆ, ಆರಂಭಿಕ ಆಟಗಾರ 60 ರನ್​ ಗಳಿಸಿ ಮಯಾಂಕ್​ಗೆ ಉತ್ತಮ ಸಾಥ್​ ನೀಡಿದರು.

ಇದಕ್ಕೂ ಮುನ್ನ ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಮಹಾರಾಷ್ಟ್ರ ತಂಡ ನೌಷಾದ್​ ಶೇಕ್​ (69*) ಗಳಿಸಿದ ಆಕರ್ಷಕ ಅರ್ಧಶತಕದ ನೆರವಿನಿಂದ 20 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 155 ರನ್​ ಕಲೆ ಹಾಕಿತು.