ಸಮಾಜವಾದಿ ನಾಯಕ “ಸ್ಯಾಂಚೆಜ್‌” ಸ್ಪೇನ್‌ನ ನೂತನ ಪ್ರಧಾನಿ

0
15

ಹಿಂದಿನ ಸ್ಪೇನ್‌ನ ಪ್ರಧಾನಿ ಮರಿಯಾನೊ ರಜೋಯ್‌ ಪ್ರತಿನಿಧಿಸುವ ಕನ್ಸರ್ವೇಟಿವ್‌ ಪಕ್ಷದ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿ ಬಂದಿತ್ತಲ್ಲದೇ, ಅವರ ವಿರುದ್ಧ ಅವಿಶ್ವಾಸಮತ ನಿರ್ಣಯ ಮಂಡನೆಗೆ ಸಭೆ ಕರೆಯಲಾಗಿತ್ತು. ಆದರೆ, ಅವಿಶ್ವಾಸಮತ ನಿರ್ಣಯ ಮಂಡನೆಗೂ ಮುನ್ನವೇ ರಜೋಯ್‌ ಪದತ್ಯಾಗ ಮಾಡಿದ್ದರು.
ಸಮಾಜವಾದಿ ನಾಯಕ ಪೆಡ್ರೊ ಸ್ಯಾಂಚೆಜ್‌ ಸ್ಪೇನ್‌ನ ನೂತನ ಪ್ರಧಾನಿಯಾಗಿ 2018 ಜೂನ್ ಶನಿವಾರ 2 ರಂದು ಅಧಿಕಾರ ಸ್ವೀಕರಿಸಿದರು.

ಮ್ಯಾಡ್ರಿಡ್: ಸಮಾಜವಾದಿ ನಾಯಕ ಪೆಡ್ರೊ ಸ್ಯಾಂಚೆಜ್‌ ಸ್ಪೇನ್‌ನ ನೂತನ ಪ್ರಧಾನಿಯಾಗಿ ಶನಿವಾರ ಅಧಿಕಾರ ಸ್ವೀಕರಿಸಿದರು.

ಹಿಂದಿನ ಪ್ರಧಾನಿ ಮರಿಯಾನೊ ರಜೋಯ್‌ ಪ್ರತಿನಿಧಿಸುವ ಕನ್ಸರ್ವೇಟಿವ್‌ ಪಕ್ಷದ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿ ಬಂದಿತ್ತಲ್ಲದೇ, ಅವರ ವಿರುದ್ಧ ಅವಿಶ್ವಾಸಮತ ನಿರ್ಣಯ ಮಂಡನೆಗೆ ಸಭೆ ಕರೆಯಲಾಗಿತ್ತು. ಆದರೆ, ಅವಿಶ್ವಾಸಮತ ನಿರ್ಣಯ ಮಂಡನೆಗೂ ಮುನ್ನವೇ ರಜೋಯ್‌ ಪದತ್ಯಾಗ ಮಾಡಿದ್ದರು.

‘ಪ್ರಧಾನಿ ಹುದ್ದೆಯ ಕರ್ತವ್ಯಗಳನ್ನು ಆತ್ಮಸಾಕ್ಷಿಯಿಂದ ಹಾಗೂ ಗೌರವಯುತವಾಗಿ ನಿರ್ವಹಿಸುತ್ತೇನೆ. ರಾಜನಿಗೆ ನಿಷ್ಠೆಯಿಂದ ಇರುತ್ತೇನೆ ಮತ್ತು ದೇಶದ ಕಾನೂನುಗಳನ್ನು ಗೌರವಿಸುತ್ತೇನೆ’ ಎಂದು ಪೆಡ್ರೊ ಹೇಳಿದ್ದಾರೆ.

ನೂತನ ಪ್ರಧಾನಿ ತಮ್ಮ ಸಂಪುಟದ ಸದಸ್ಯರ ಹೆಸರುಗಳನ್ನು ಇನ್ನಷ್ಟೆ ಸೂಚಿಸಬೇಕಾಗಿದೆ. ನಿರ್ಗಮಿತ ಪ್ರಧಾನಿ ಮರಿಯಾನೊ ರಜೋಯ್‌ 2011ರಿಂದ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ್ದರು.

ಜಾರ್ಜುವೆಲಾ ಅರಮನೆಯಲ್ಲಿ ಆರನೇ ರಾಜ ಫಿಲಿಪ್‌ ಸಮ್ಮುಖದಲ್ಲಿ ಪೆಡ್ರೊ ಸ್ಯಾಂಚೆಜ್‌ ಪ್ರಮಾಣವಚನ ಸ್ವೀಕರಿಸಿದ್ದಾರೆ. 46 ವರ್ಷದ ಪೆಡ್ರೊ ಅರ್ಥಶಾಸ್ತ್ರಜ್ಞರಾಗಿದ್ದಾರೆ.