ಸದ್ಯದಲ್ಲಿಯೇ ಆರಂಭವಾಗಲಿವೆ 8,000 ಹೊಸ ಸಿಬಿಎಸ್‌ಸಿ ಶಾಲೆಗಳು

0
534

ಸದ್ಯದಲ್ಲಿಯೇ 8,000 ಹೊಸ ಸಿಬಿಎಸ್‌ಸಿ ಶಾಲೆಗಳು ಆರಂಭವಾಗುವ ಸಾಧ್ಯತೆಗಳಿವೆ. ಪರಿಷ್ಕೃತ ನಿಯಮಗಳ ಮೂಲಕ ಅನುಮತಿ ಪ್ರಕ್ರಿಯೆಯನ್ನು ಸರಳ ಮತ್ತು ಕಾಗದ ರಹಿತಗೊಳಿಸಲಾಗಿದ್ದು, 2007ಕ್ಕಿಂತ ಹಿಂದೆ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ (ಸಿಬಿಎಸ್ಇ) ಮಂಜೂರು ಮಾಡಿದೆ.

 ಹೊಸದಿಲ್ಲಿ: ಸದ್ಯದಲ್ಲಿಯೇ 8,000 ಹೊಸ ಸಿಬಿಎಸ್‌ಸಿ  ಶಾಲೆಗಳು ಆರಂಭವಾಗುವ ಸಾಧ್ಯತೆಗಳಿವೆ. ಪರಿಷ್ಕೃತ ನಿಯಮಗಳ ಮೂಲಕ ಅನುಮತಿ ಪ್ರಕ್ರಿಯೆಯನ್ನು ಸರಳ ಮತ್ತು ಕಾಗದ ರಹಿತಗೊಳಿಸಲಾಗಿದ್ದು, 2007ಕ್ಕಿಂತ ಹಿಂದೆ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ (ಸಿಬಿಎಸ್ಇ) ಮಂಜೂರು ಮಾಡಿದೆ. 

ಹೊಸ ನಿಯಮಗಳ ಅನ್ವಯ ಶಾಲೆಗಳು ಕೇವಲ 2 ದಾಖಲೆ ನೀಡಿದರೆ ಸಾಕಾಗಿದ್ದರಿಂದ ಮತ್ತು ಸಲ್ಲಿಕೆಯಾದ ಅರ್ಜಿಗಳನ್ನು ಅದೇ ವರ್ಷ ವಿಲೇವಾರಿ ಮಾಡಬೇಕಾದ ನಿಯಮ ಜಾರಿಯಾಗಿದ್ದರಿಂದ ದೊಡ್ಡ ಸಂಖ್ಯೆಯ ಅರ್ಜಿಗಳಿಗೆ ಮುಕ್ತಿ ಕೊಡಲಾಗಿದೆ. 

ಗುರುವಾರ ಪರಿಷ್ಕೃತ ನಿಯಮಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವ್ಡೇಕರ್ ಅವರು ಪಾರದರ್ಶಕ ಮತ್ತು ಕಿರಿಕಿರಿ ಮುಕ್ತ ಪ್ರಕ್ರಿಯೆಯ ಮೇಲೆ ಗಮನ ನೀಡಲಾಗಿದೆ ಎಂದಿದ್ದಾರೆ.