ಸತತ 126 ಗಂಟೆ ನೃತ್ಯ ಮಾಡುವ ಮೂಲಕ ವಿಶ್ವ ದಾಖಲೆ ಬರೆದ ನೇಪಾಳದ “ಬಂದನಾ”

0
30

ನೇಪಾಳದ ಯುವತಿಯೋರ್ವಳು ಸತತ 126 ಗಂಟೆ ನೃತ್ಯ ಮಾಡುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾಳೆ. ಈ ದಾಖಲೆ ಮೊದಲು ಭಾರತೀಯರೊಬ್ಬರ ಮೇಲಿತ್ತು.

ಕಠ್ಮಂಡು: ನೇಪಾಳದ ಯುವತಿಯೋರ್ವಳು ಸತತ 126 ಗಂಟೆ ನೃತ್ಯ ಮಾಡುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾಳೆ. ಈ ದಾಖಲೆ ಮೊದಲು ಭಾರತೀಯರೊಬ್ಬರ ಮೇಲಿತ್ತು. 

ಈ ದಾಖಲೆ ಮೂಲಕ ದೇಶಕ್ಕೆ ಕೀರ್ತಿ ತಂದು ಕೊಟ್ಟ 18 ವರ್ಷದ ಕಿಶೋರಿ ಬಂದನಾಗೆ ನೇಪಾಳದಾದ್ಯಂತ ಪ್ರಶಂಸೆಗಳ ಮಹಾಪೂರ ಹರಿದುಬರುತ್ತಿದೆ. ಪ್ರಧಾನಿ ಕೆ.ಪಿ. ಶರ್ಮ ಒಲಿ ಆಕೆಯನ್ನು ಸನ್ಮಾನಿಸಿ ಗೌರವಿಸಿದ್ದಾರೆ. 

18 ವಯಸ್ಸಿನ ಬಂದನಾ  ನೇಪಾಳಿ ಈ ವಿಶ್ವದಾಖಲೆ  ನಿರ್ಮಿಸಿರುವುದಕ್ಕೆ ನೇಪಾಳ ಪ್ರಧಾನಿ ಕೆ.ಪಿ. ಶರ್ಮ ಒಲಿ ತಮ್ಮ ಅಧಿಕೃತ ನಿವಾಸದಲ್ಲಿ ಆಕೆಯನ್ನು ಸನ್ಮಾನಿಸಿ ಗೌರವಿಸಿದ್ದಾರೆ. ಈ ಹಿಂದೆ ಭಾರತದ ಕಾಲಮಂಡಳಂ ಹೇಮಲತಾ ಸತತ 123 ಗಂಟೆ 15 ನಿಮಿಷ ನೃತ್ಯ ಮಾಡಿ ದಾಖಲೆ ಬರೆದಿದ್ದರು. ಆದರೆ ಈಗ ಬಂದನಾ ನೇಪಾಳಿ 126 ಗಂಟೆ ನೃತ್ಯ ಮಾಡುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. ಆಕೆ ಪೂರ್ವ ನೇಪಾಳದ ಧನಕುಟಾದ ನಿವಾಸಿಯಾಗಿದ್ದಾರೆ. 

ಈ ದಾಖಲೆ ಮೂಲಕ ದೇಶಕ್ಕೆ ಕೀರ್ತಿ ತಂದು ಕೊಟ್ಟ 18 ವರ್ಷದ ಕಿಶೋರಿ ಬಂದನಾಗೆ ನೇಪಾಳದಾದ್ಯಂತ ಪ್ರಶಂಸೆಗಳ ಮಹಾಪೂರ ಹರಿದುಬರುತ್ತಿದೆ. ಪ್ರಧಾನಿ ಕೆ.ಪಿ. ಶರ್ಮ ಒಲಿ ಆಕೆಯನ್ನು ಸನ್ಮಾನಿಸಿ ಗೌರವಿಸಿದ್ದಾರೆ. 

ಶುಕ್ರವಾರ ನೃತ್ಯ ಆರಂಭಿಸಿದ್ದ ಆಕೆ ಬುಧವಾರ ಮಧ್ಯಾಹ್ನದವರೆಗೂ ನಿರಂತರವಾಗಿ ನೃತ್ಯ ಮಾಡಿದಳು. ಕಠ್ಮಂಡುವಿನ ಬಿಗ್ ಫುಡ್‌ಲ್ಯಾಂಡ್ ರೆಸ್ಟೋರೆಂಟ್‌ನಲ್ಲಿ ಈ ದಾಖಲೆಯ ನೃತ್ಯವನ್ನು ಪ್ರದರ್ಶಿಸಲಾಗಿತ್ತು. 

 
ಭಾರತದ ಹೇಮಲತಾ ಎಂಬುವವರು 123 ಗಂಟೆ 15 ನಿಮಿಷ ನೃತ್ಯ ಮಾಡಿದ್ದು ಈ ಹಿಂದಿನ ದಾಖಲೆಯಾಗಿತ್ತು.