ಸಣ್ಣ ಉಳಿತಾಯ ಬಡ್ಡಿ ದರ ಯಥಾಸ್ಥಿತಿ

0
336

ಸರಕಾರ ಪಿಪಿಎಫ್‌, ಎನ್‌ಎಸ್‌ಸಿ ಮುಂತಾದ ಸಣ್ಣ ಉಳಿತಾಯಗಳ ಬಡ್ಡಿ ದರವನ್ನು ಏಪ್ರಿಲ್‌-ಜೂನ್‌ ಅವಧಿಗೆ ಯಥಾಸ್ಥಿತಿಯಲ್ಲಿ ಇರಿಸಿದೆ.

ಹೊಸದಿಲ್ಲಿ: ಸರಕಾರ ಪಿಪಿಎಫ್‌, ಎನ್‌ಎಸ್‌ಸಿ ಮುಂತಾದ ಸಣ್ಣ ಉಳಿತಾಯಗಳ ಬಡ್ಡಿ ದರವನ್ನು ಏಪ್ರಿಲ್‌-ಜೂನ್‌ ಅವಧಿಗೆ ಯಥಾಸ್ಥಿತಿಯಲ್ಲಿ ಇರಿಸಿದೆ. 

ಸಾರ್ವಜನಿಕ ಭವಿಷ್ಯ ನಿಧಿ( ಪಿಪಿಎಫ್‌) ಮತ್ತು ರಾಷ್ಟ್ರೀಯ ಉಳಿತಾಯ  ಪತ್ರಗಳ (ಎನ್‌ಎಸ್‌ಸಿ) ವಾರ್ಷಿಕ ಬಡ್ಡಿ ದರ ಶೇ.8ರಲ್ಲಿ ಮುಂದುವರಿಯಲಿದೆ. 112 ತಿಂಗಳಲ್ಲಿ ಮೆಚ್ಯೂರ್‌ ಆಗುವ ಕಿಸಾನ್‌ ವಿಕಾಸ್‌ ಪತ್ರ (ಕೆವಿಪಿ) ಶೇ.7.7 ಬಡ್ಡಿ ದರ ನೀಡಲಿದೆ. ಹಿರಿಯ ನಾಗರಿಕರ 5 ವರ್ಷಗಳ ಉಳಿತಾಯ ಯೋಜನೆಗಳ ಬಡ್ಡೊ ಶೇ.8.7 ಇರಲಿದೆ. ಸುಕನ್ಯಾ ಸಮೃದ್ಧಿ ಯೋಜನೆಯ ಬಡ್ಡಿ ಶೇ.8.5ರಲ್ಲಿ ಮುಂದುವರಿಯಲಿದೆ. 

ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳನ್ನು ತ್ರೈಮಾಸಿಕ ಆಧಾರದಲ್ಲಿ ಪರಿಷ್ಕರಿಸಲಾಗುತ್ತಿದೆ. ಏಪ್ರಿಲ್‌ 1ರಿಂದ ಜೂನ್‌ 30ರ ತನಕದ ತ್ರೈಮಾಸಿಕದಲ್ಲಿ ಬಡ್ಡಿ ದರಗಳು ಯಥಾಸ್ಥಿತಿ ಮುಂದುವರಿಯಲಿದೆ ಎಂದಿದೆ.