“ಸಕಾಲ” ವ್ಯಾಪ್ತಿಗೆ ಅಬಕಾರಿ ಇಲಾಖೆ

0
489

ಅಕ್ರಮ ತಡೆಗಟ್ಟಲು ಅಬಕಾರಿ ಇಲಾಖೆಯನ್ನು ಸಕಾಲ ವ್ಯಾಪ್ತಿಗೆ ತರಲಾಗಿದೆ. ಇಲಾಖೆಯ 38 ಸೇವೆಗಳನ್ನು ಪಡೆಯಲು ಇನ್ಮುಂದೆ ಸಕಾಲಕ್ಕೆ ಅರ್ಜಿ ಸಲ್ಲಿಸಬೇಕಿದೆ. 4 ತಿಂಗಳಷ್ಟೇ ಆನ್​ಲೈನ್ ಮದ್ಯದಂಗಡಿ ಪರವಾನಗಿ ನವೀಕರಣ ಯೋಜನೆ ಜಾರಿಗೆ ಬಂದ ಬಳಿಕ ಈಗ ವಿವಿಧ ಸೇವೆಗಳ ಶೀಘ್ರ ಸೌಲಭ್ಯ ಪಡೆಯಲು ಇಲಾಖೆಯ ಸೇವೆಗಳನ್ನು ಸಕಾಲಕ್ಕೆ ತರಲಾಗಿದೆ. ಯಾವ ಸೇವೆಗೆ ಯಾವ ಅಧಿಕಾರಿ, ಎಷ್ಟು ದಿನದೊಳಗೆ ಅರ್ಜಿ ವಿಲೇವಾರಿ ಸೇರಿ ಇತರ ಅಂಶಗಳನ್ನು ಸೇರಿಸಲಾಗಿದೆ.

ಬೆಂಗಳೂರು: ಅಕ್ರಮ ತಡೆಗಟ್ಟಲು ಅಬಕಾರಿ ಇಲಾಖೆಯನ್ನು ಸಕಾಲ ವ್ಯಾಪ್ತಿಗೆ ತರಲಾಗಿದೆ. ಇಲಾಖೆಯ 38 ಸೇವೆಗಳನ್ನು ಪಡೆಯಲು ಇನ್ಮುಂದೆ ಸಕಾಲಕ್ಕೆ ಅರ್ಜಿ ಸಲ್ಲಿಸಬೇಕಿದೆ. 4 ತಿಂಗಳಷ್ಟೇ ಆನ್​ಲೈನ್ ಮದ್ಯದಂಗಡಿ ಪರವಾನಗಿ ನವೀಕರಣ ಯೋಜನೆ ಜಾರಿಗೆ ಬಂದ ಬಳಿಕ ಈಗ ವಿವಿಧ ಸೇವೆಗಳ ಶೀಘ್ರ ಸೌಲಭ್ಯ ಪಡೆಯಲು ಇಲಾಖೆಯ ಸೇವೆಗಳನ್ನು ಸಕಾಲಕ್ಕೆ ತರಲಾಗಿದೆ. ಯಾವ ಸೇವೆಗೆ ಯಾವ ಅಧಿಕಾರಿ, ಎಷ್ಟು ದಿನದೊಳಗೆ ಅರ್ಜಿ ವಿಲೇವಾರಿ ಸೇರಿ ಇತರ ಅಂಶಗಳನ್ನು ಸೇರಿಸಲಾಗಿದೆ.

ಇಲಾಖೆಯ ಸೇವೆಗಳನ್ನು ಪಡೆಯಲು ಸಾಕಷ್ಟು ಬಾರಿ ಅಲೆದಾಡಿದ್ದರೂ ಲಂಚ ನೀಡದಿದ್ದರೆ ಕೆಲಸಗಳು ಆಗುತ್ತಿರಲಿಲ್ಲ. ಅಬಕಾರಿ ಇಲಾಖೆಯನ್ನು ಈಗ ಸಕಾಲ ವ್ಯಾಪ್ತಿಗೆ ತಂದಿದ್ದರಿಂದ ನಮಗೆ ತುಂಬ ಅನುಕೂಲವಾಗಲಿದ್ದು, ಲಂಚದ ಕಾಟ ತಪ್ಪಿದಂತಾಗುತ್ತದೆ ಎಂದು ಬಾರ್ ಮಾಲೀಕರೊಬ್ಬರು ತಿಳಿಸಿದ್ದಾರೆ.

ಏನೇನು ಸೇವೆಗಳು?: ಡಿಸ್ಟಿಲರಿ, ಬ್ರೆವರಿ, ಮೈಕ್ರೋಬ್ರೆವರಿ ಮತ್ತು ವೈನರಿ ಸನ್ನದುಗಳ ನವೀಕರಣ ಹಾಗೂ ವರ್ಗಾವಣೆ, ಮದ್ಯಸಾರ ಆಮದಿಗೆ, ರಫ್ತಿಗೆ ನಿರಾಕ್ಷೇಪಣಾ ಪತ್ರ, ಮದ್ಯ ರಫ್ತು (ಹೊರ ದೇಶಕ್ಕೆ) ಸಹಮತಿ ಪತ್ರ, ವೈನ್ ರಫ್ತು(ಹೊರ ದೇಶಕ್ಕೆ) ಸಹಮತಿ ಪತ್ರ, ಸ್ಥಳೀಯ ಲೇಬಲ್ ಅನುಮೋದನೆ, ಡಿಪಿ,ಎಂಆರ್​ಪಿ ಮತ್ತು ಆರ್​ಎಂಆರ್​ಪಿ, ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತದಿಂದ ಹೊರ ರಾಜ್ಯದ ಲೇಬಲ್ ಅನುಮೋದನೆ, ಕಾಕಂಬಿ ಸನ್ನದು, ರಾಜ್ಯದಲ್ಲಿ ಕಾಕಂಬಿ ಎತ್ತುವಳಿಗೆ ನಿರಾಕ್ಷೇಪಣಾ ಪ್ರಮಾಣಪತ್ರ, ಕಾಕಂಬಿ ಬ್ಯಾಂಕ್ ಅಳವಡಿಸುವ ಬಗ್ಗೆ, ಅಂತಾರಾಜ್ಯ ಕಾಕಂಬಿ ಎತ್ತುವಳಿಗೆ ನಿರಾಕ್ಷೇಪಣಾ ಪ್ರಮಾಣಪತ್ರ, ರಾಜ್ಯ ಪಾನೀಯ ನಿಗಮ ನಿಯಮಿತದಿಂದ ಸ್ವೀಕೃತವಾದ ಹೊರ ದೇಶದ ಲೇಬಲ್ ಅನುಮೋದನೆ, ಪ್ರಾಥಮಿಕ ಡಿಸ್ಟಿ್ಟರಿ, ಮದ್ಯ ಉತ್ಪಾದನಾ ಡಿಸ್ಟಿಲರಿ, ವೈನರಿಗೆ ಮದ್ಯಸಾರ ಹಂಚಿಕೆ, ಮದ್ಯ, ವೈನ್ ಮತ್ತು ಬಿಯರ್ ರಪ್ತುಗೆ ಸಹಮತಿ ಪತ್ರ, ಸ್ಥಗಿತಗೊಂಡ ಸನ್ನದುಗಳ ನವೀಕರಣ, ಸನ್ನದುಗಳ ಮಂಜೂರಾತಿ, ವಿಶೇಷ ಸಾಂರ್ದಭಿಕ ಸನ್ನದುಗಳ ಮಂಜೂರಾತಿ, ನೀಲಿನಕ್ಷೆ ಅನುಮೋದನೆ ಸೇರಿ 38 ಸೇವೆಗಳನ್ನು ಪಡೆಯಲು ಅರ್ಜಿದಾರರು ಸಕಾಲಕ್ಕೆ ಅರ್ಜಿ ಸಲ್ಲಿಸಬೇಕಿದೆ.