ಸಂಸತ್ತಿನ ಕಲಾಪದಲ್ಲಿ 175 ಸಂಸದರ ಪ್ರದರ್ಶನ ಕಳಪೆ

0
638

ಲೋಕಸಭೆ ಅಧಿವೇಶನದಲ್ಲಿ 175 (ಶೇ. 30) ಸಂಸದರ ಪ್ರದರ್ಶನ ಕಳಪೆಯಾಗಿದ್ದು, 2014ರಿಂದ ಈವರೆಗೆ 20ಕ್ಕಿಂತಲೂ ಕಡಿಮೆ ಚರ್ಚೆಯಲ್ಲಷ್ಟೆ ಇವರು ಮಾತನಾಡಿದ್ದಾರೆ. 25 ಸಂಸದರಂತೂ ಬಾಯಿ ತೆರೆದೇ ಇಲ್ಲ ಎಂದು ಲೋಕಸಭಾ ವೆಬ್​ಸೈಟ್ ಮತ್ತು ಪಿಆರ್​ಎಸ್ ಲೆಜಿಸ್ಲೇಟಿವ್ ರಿಸರ್ಚ್ ಬಹಿರಂಗಪಡಿಸಿದೆ. 2014ರ ಬಳಿಕ ಸಂಸತ್ತಿಗೆ ಆಯ್ಕೆಯಾದವರನ್ನು ಮಾತ್ರ ಪರಿಗಣಿಸಲಾಗಿದೆ.

ಚೆನ್ನೈ: ಲೋಕಸಭೆ ಅಧಿವೇಶನದಲ್ಲಿ 175 (ಶೇ. 30) ಸಂಸದರ ಪ್ರದರ್ಶನ ಕಳಪೆಯಾಗಿದ್ದು, 2014ರಿಂದ ಈವರೆಗೆ 20ಕ್ಕಿಂತಲೂ ಕಡಿಮೆ ಚರ್ಚೆಯಲ್ಲಷ್ಟೆ ಇವರು ಮಾತನಾಡಿದ್ದಾರೆ. 25 ಸಂಸದರಂತೂ ಬಾಯಿ ತೆರೆದೇ ಇಲ್ಲ ಎಂದು ಲೋಕಸಭಾ ವೆಬ್​ಸೈಟ್ ಮತ್ತು ಪಿಆರ್​ಎಸ್ ಲೆಜಿಸ್ಲೇಟಿವ್ ರಿಸರ್ಚ್ ಬಹಿರಂಗಪಡಿಸಿದೆ. 2014ರ ಬಳಿಕ ಸಂಸತ್ತಿಗೆ ಆಯ್ಕೆಯಾದವರನ್ನು ಮಾತ್ರ ಪರಿಗಣಿಸಲಾಗಿದೆ.

ಸಂಸದರ ಸಾಧನೆ ಅಳೆಯಲು ಅಧಿವೇಶನದಲ್ಲಿ ಭಾಗಿಯಾಗುವುದು ಮಾತ್ರ ಪ್ರಧಾನ ಮಾನದಂಡ ವಲ್ಲ. ಅಧಿವೇಶನದಲ್ಲಿ ಸಕ್ರಿಯವಾಗಿರದಿದ್ದರೂ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿರಬಹುದು ಎಂದು ವೆಬ್​ಸೈಟ್ ಮಾಹಿತಿಗೆ ಪ್ರತಿ ಕ್ರಿಯಿಸಿರುವ ಅಸೋಸಿಯೇಷನ್ ಆಫ್ ಡೆಮಾಕ್ರೆಟಿಕ್ ರಿಫಾಮ್್ಸರ್ ಸಂಸ್ಥಾಪಕ ಜಗ್​ದೀಪ್ ಚೊಕ್ಕಾರ್ ಅಭಿಪ್ರಾಯಪಟ್ಟಿದ್ದಾರೆ.

ಗುಜರಾತ್​ನ ಪೋರ್​ಬಂದರ್ ಕ್ಷೇತ್ರದ ಬಿಜೆಪಿ ಸಂಸದ ವಿಠ್ಠಲ್​ಭಾಯ್ ಹನ್ಸರಾಜಭಾಯ್ ರದಾದಿಯಾ ಒಂದು ಪ್ರಶ್ನೆಯನ್ನೂ ಕೇಳಿಲ್ಲ. ಕಲಾಪದಲ್ಲಿ ಭಾಗವಹಿಸಿರುವಿಕೆ ಶೇ. 15. ಒಡಿಶಾ ಕಂಧಮಾಲ್ ಕ್ಷೇತ್ರದ ಪ್ರತಿನಿಧಿ ಬಿಜೆಡಿ ಮುಖಂಡ ಹೇಮೇಂದ್ರ ಚಂದ್ರ ಸಿಂಗ್ ಶೇ. 97ರಷ್ಟು ಹಾಜರಾತಿ ಹೊಂದಿದ್ದಾರೆ. ಆದರೆ, ಒಮ್ಮೆಯೂ ಚರ್ಚೆಯಲ್ಲಿ ಭಾಗವಹಿಸಿಲ್ಲ ಅಥವಾ ಪ್ರಶ್ನೆ ಕೇಳಿಲ್ಲ. ಈ ರೀತಿ ಚರ್ಚೆಯಲ್ಲೂ ಭಾಗವಹಿಸಿದ, ಪ್ರಶ್ನೆಯನ್ನೂ ಕೇಳದ 175 ಸಂಸದರಲ್ಲಿ ಬಹುತೇಕರು ಸ್ನಾತಕೋತ್ತರ ಪದವೀಧರ ರಾಗಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಬಿಜೆಪಿ ಹಿರಿಯ ಮುಖಂಡರಾದ ಎಲ್.ಕೆ.ಆಡ್ವಾಣಿ, ಮುರಳಿ ಮನೋಹರ ಜೋಷಿ ಮತ್ತು ಇನ್ನಿತರ ಮುಖಂಡರು ಕೆಲವು ಚರ್ಚೆಗಳಲ್ಲಷ್ಟೆ ಭಾಗವಹಿಸಿದ್ದಾರೆ.