ಸಂಪುಟ ಕಾರ್ಯದರ್ಶಿ ಸೇವಾ ಅವಧಿ ವಿಸ್ತರಣೆ: 60 ವರ್ಷ ಹಳೆ ನಿಯಮಕ್ಕೆ ತಿದ್ದುಪಡಿ

0
32

ಸಂಪುಟ ಕಾರ್ಯದರ್ಶಿ ಪ್ರದೀಪ್‌ ಕುಮಾರ್ ಸಿನ್ಹಾ ಅವರ ಸೇವಾ ಅವಧಿಯನ್ನು ಮೂರು ತಿಂಗಳಿಗೆ ವಿಸ್ತರಿಸುವ ಸಲುವಾಗಿ 60 ವರ್ಷ ಹಳೆಯ ನಿಯಮಕ್ಕೆ ಕೇಂದ್ರ ಸರ್ಕಾರ ತಿದ್ದುಪಡಿ ತಂದಿದೆ.

ನವದೆಹಲಿ (ಪಿಟಿಐ): ಸಂಪುಟ ಕಾರ್ಯದರ್ಶಿ ಪ್ರದೀಪ್‌ ಕುಮಾರ್ ಸಿನ್ಹಾ ಅವರ ಸೇವಾ ಅವಧಿಯನ್ನು ಮೂರು ತಿಂಗಳಿಗೆ ವಿಸ್ತರಿಸುವ ಸಲುವಾಗಿ 60 ವರ್ಷ ಹಳೆಯ ನಿಯಮಕ್ಕೆ ಕೇಂದ್ರ ಸರ್ಕಾರ ತಿದ್ದುಪಡಿ ತಂದಿದೆ. 

ಸಾಮಾನ್ಯವಾಗಿ ಸಂಪುಟ ಕಾರ್ಯದರ್ಶಿಯನ್ನು ಎರಡು ವರ್ಷ ಅವಧಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಅಖಿಲ ಭಾರತ ಸೇವೆ ನಿಯಮಗಳು 1958ರ ಪ್ರಕಾರ ಇವರ ಸೇವಾ ಅವಧಿಯನ್ನು ಒಟ್ಟಾರೆಯಾಗಿ ನಾಲ್ಕು ವರ್ಷಗಳಿಗೆ ಮೀರದಂತೆ ವಿಸ್ತರಿಸಲು ಅವಕಾಶವಿದೆ. 

ಇದೀಗ ತಿದ್ದುಪಡಿ ಮಾಡಿರುವ ನಿಯಮದ ಅನುಸಾರ, ಇದರ ಹೊರತಾಗಿ ಮೂರು ತಿಂಗಳಿಗೆ ಮೀರದಂತೆ ಸೇವಾ ಅವಧಿ ವಿಸ್ತರಿಸಬಹುದಾಗಿದೆ. ಜೂನ್ 7 ರ ಶುಕ್ರವಾರ ಈ ತಿದ್ದುಪಡಿ ಬಗ್ಗೆ ಅಧಿಸೂಚನೆ ಹೊರಡಿಸಲಾಗಿದೆ. ತಕ್ಷಣವೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ನೇಮಕಾತಿ ಸಮಿತಿ, ಸಿನ್ಹಾ ಅವರ ಸೇವೆಯನ್ನು ಜೂನ್ 12ರಿಂದ ಮೂರು ತಿಂಗಳ ಅವಧಿಗೆ ವಿಸ್ತರಿಸಲು ಅನುಮತಿ ನೀಡಿದೆ.

ಇದರಿಂದಾಗಿ ದೇಶದ ಈವರೆಗಿನ ಇತಿಹಾಸದಲ್ಲಿಯೇ ದೀರ್ಘಾವಧಿಗೆ ಸೇವೆ ಸಲ್ಲಿಸಿದ ಅಧಿಕಾರಿ ಸಿನ್ಹಾ ಆಗಲಿದ್ದಾರೆ. 2015ರ ಮೇ ತಿಂಗಳಲ್ಲಿ ಸಂಪುಟ ಕಾರ್ಯದರ್ಶಿಯಾಗಿ ನೇಮಕವಾಗಿದ್ದ ಸಿನ್ಹಾ ಅವರನ್ನು 2017 ಹಾಗೂ 2018ರಲ್ಲಿ ತಲಾ 1 ವರ್ಷ ಅವಧಿಗೆ ಹುದ್ದೆಯಲ್ಲಿ ಮುಂದುವರಿಸಲಾಗಿತ್ತು.