ಸಂಝೋತಾ ಎಕ್ಸ್​ಪ್ರೆಸ್​ ರೈಲು ಸ್ಫೋಟ ಪ್ರಕರಣ: ಸ್ವಾಮಿ ಅಸೀಮಾನಂದ ಸೇರಿ ನಾಲ್ವರನ್ನು ಖುಲಾಸೆಗೊಳಿಸಿದ ನ್ಯಾಯಾಲಯ

0
560

ಸಂಝೋತಾ ಎಕ್ಸ್​ಪ್ರೆಸ್​ ರೈಲು ಸ್ಫೋಟ ಪ್ರಕರಣದಲ್ಲಿ ಆರೋಪಿಗಳೆನಿಸಿದ್ದ ಸ್ವಾಮಿ ಅಸೀಮಾನಂದ ಸೇರಿ ಒಟ್ಟು ನಾಲ್ವರನ್ನು ಹರಿಯಾಣಾದ ಪಂಚಕುಲಾ ವಿಶೇಷ ನ್ಯಾಯಾಲಯ ಮಾರ್ಚ್ 20 ರ ಬುಧವಾರ ಖುಲಾಸೆಗೊಳಿಸಿ ತೀರ್ಪು ನೀಡಿದೆ.

ನವದೆಹಲಿ: ಸಂಝೋತಾ ಎಕ್ಸ್​ಪ್ರೆಸ್​ ರೈಲು ಸ್ಫೋಟ ಪ್ರಕರಣದಲ್ಲಿ ಆರೋಪಿಗಳೆನಿಸಿದ್ದ ಸ್ವಾಮಿ ಅಸೀಮಾನಂದ ಸೇರಿ ಒಟ್ಟು ನಾಲ್ವರನ್ನು ಹರಿಯಾಣಾದ ಪಂಚಕುಲಾ ವಿಶೇಷ ನ್ಯಾಯಾಲಯ ಬುಧವಾರ ಖುಲಾಸೆಗೊಳಿಸಿ ತೀರ್ಪು ನೀಡಿದೆ.

2007ರ ಫೆಬ್ರವರಿ 18ರ ರಾತ್ರಿ ನಡೆದ ಈ ಸ್ಫೋಟದಿಂದ ರೈಲಿನಲ್ಲಿದ್ದ 68 ಪ್ರಯಾಣಿಕರು ಮೃತಪಟ್ಟಿದ್ದರು. ಅದರಲ್ಲಿ 42 ಜನರು ಪಾಕಿಸ್ತಾನದವರಾಗಿದ್ದರು.

ಹರಿಯಾಣಾದ ಪಾಣಿಪತ್​ನಲ್ಲಿ ನಡೆದ ಈ ರೈಲು ಸ್ಫೋಟಕ್ಕೆ ಕಾರಣ ಉಗ್ರರು. ಸುಧಾರಿತ ಸ್ಫೋಟಕಗಳನ್ನು ಬಳಸಿ ನಡೆಸಿದ್ದರು ಎಂದು ತನಿಖೆಯ ಬಳಿಕ ಗೊತ್ತಾಗಿತ್ತು. ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರೂ 2010ರಲ್ಲಿ ಇದರ ತನಿಖೆಯನ್ನು ರಾಷ್ಟ್ರೀಯ ತನಿಖಾದಳ ವಹಿಸಿಕೊಂಡಿತ್ತು. ಈ ದಾಳಿಯಲ್ಲಿ ಪಾತ್ರವಹಿಸಿದ್ದಾರೆ ಎಂಬ ಆರೋಪದಡಿ ಎಂಟು ಜನರ ವಿರುದ್ಧ ಚಾರ್ಜ್​ಶೀಟ್​ ಹಾಕಲಾಗಿತ್ತು.

ಗುಜರಾತ್​, ಜಮ್ಮು ಮತ್ತು ವಾರಾಣಸಿಯ ಹಿಂದು ದೇವಸ್ಥಾನಗಳ ಮೇಲೆ ನಡೆದ ಉಗ್ರದಾಳಿಗೆ ಪ್ರತಿಯಾಗಿ ಈ ರೈಲು ಸ್ಫೋಟ ನಡೆಸಲಾಗಿದೆ ಎಂಬ ಮಾಹಿತಿಯೂ ಸಿಕ್ಕಿತ್ತು.