ಸಂಗೀತ ಸಾಮ್ರಾಟ ಇಮ್ರತ್‌ ಖಾನ್‌ ನಿಧನ

0
307

ಶಾಸ್ರ್ತೀಯ ಸಂಗೀತ ಸಾಮ್ರಾಟ ಉಸ್ತಾದ್‌ ಇಮ್ರತ್‌ ಖಾನ್‌ (83) ಅಮೆರಿಕದಲ್ಲಿ ನಿಧನರಾದರು.

ನವದೆಹಲಿ(ಪಿಟಿಐ): ಶಾಸ್ರ್ತೀಯ ಸಂಗೀತ ಸಾಮ್ರಾಟ ಉಸ್ತಾದ್‌ ಇಮ್ರತ್‌ ಖಾನ್‌ (83)  ಅಮೆರಿಕದಲ್ಲಿ ನವೆಂಬರ್ 22 ರ ಗುರುವಾರ ನಿಧನರಾದರು.

ಉಸ್ತಾದ್‌ ಇಮ್ರತ್‌ ಖಾನ್‌ ಅವರು ನವೆಂಬರ್ 17, 1935 ರಂದು ಕೋಲ್ಕತ್ತಾದಲ್ಲಿ ಜನಿಸಿದ್ದರು.

ನ್ಯುಮೋಮಿಯಾದಿಂದ ಬಳಲುತ್ತಿದ್ದ ಅವರನ್ನು ವಾರದ ಹಿಂದೆ ಸೇಂಟ್‌ ಲೂಯಿಸ್‌ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಗುರುವಾರ ಮೃತಪಟ್ಟಿದ್ದಾರೆ ಎಂದು ಪುತ್ರ ನಿಶಾತ್‌ ಖಾನ್‌ ತಿಳಿಸಿದ್ದಾರೆ. ನವೆಂಬರ್ 24 ರ ಶನಿವಾರ ಅಂತ್ಯಸಂಸ್ಕಾರ ನಡೆಯಲಿದೆ ಎಂದೂ ತಿಳಿಸಿದ್ದಾರೆ.

ಸುರ್‌ಬಹಾರ್‌ ಮತ್ತು ಸಿತಾರ್‌ ವಾದನದ ಮೂಲಕ ಇಮ್ರತ್‌ ಅವರು ಜಗತ್ಪ್ರಸಿದ್ಧರಾಗಿದ್ದರು. ಕಳೆದ ವರ್ಷ ಪದ್ಮಶ್ರೀ ಪ್ರಶಸ್ತಿಯನ್ನು ನಿರಾಕರಿಸುವ ಮೂಲಕ ಇಮ್ರತ್‌ ಅವರು ಗಮನ ಸೆಳೆದಿದ್ದರು.