ಷರಿಯತ್ ಕೋರ್ಟ್‌ಗೆ ಪ್ರತಿಯಾಗಿ “ಹಿಂದೂ ನ್ಯಾಯಾಲಯ” ಸ್ಥಾಪನೆ

0
111

ಮುಸ್ಲಿಂ ವ್ಯಾಜ್ಯಗಳ ಪರಿಹಾರಕ್ಕೆ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಆರಂಭಿಸಿರುವ ಷರಿಯತ್‌ ಕೋರ್ಟ್‌ಗೆ ಪ್ರತಿಯಾಗಿ ಪ್ರತ್ಯೇಕ ಹಿಂದೂ ನ್ಯಾಯಾಲಯ ಸ್ಥಾಪನೆ ಮಾಡಲಾಗಿದೆ.

ಹೊಸದಿಲ್ಲಿ: ಮುಸ್ಲಿಂ ವ್ಯಾಜ್ಯಗಳ ಪರಿಹಾರಕ್ಕೆ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಆರಂಭಿಸಿರುವ ಷರಿಯತ್‌ ಕೋರ್ಟ್‌ಗೆ ಪ್ರತಿಯಾಗಿ ಪ್ರತ್ಯೇಕ ಹಿಂದೂ ನ್ಯಾಯಾಲಯ ಸ್ಥಾಪನೆ ಮಾಡಲಾಗಿದೆ. 

ಭಾರತದ 72ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಆಗಸ್ಟ್ 15 ರ  ಬುಧವಾರ ಅಖಿಲ ಭಾರತ ಹಿಂದೂ ಮಹಾಸಭಾ ಮೀರತ್‌ನಲ್ಲಿ ಇಂತಹ ಮೊದಲ ಹಿಂದೂ ಕೋರ್ಟ್‌ ಆರಂಭಿಸಲಾಗಿದೆ. ಸಂಘಟನೆಯ ರಾಷ್ಟ್ರೀಯ ಕಾರ್ಯದರ್ಶಿ ಪೂಜಾ ಪಾಂಡೆ ಅವರನ್ನು ಇದರ ಮೊದಲ ನ್ಯಾಯಾಧೀಶರನ್ನಾಗಿ ನೇಮಿಸಲಾಗಿದೆ. 

ಷರಿಯತ್‌ ಕೋರ್ಟ್‌ ಸ್ಥಾಪನೆಗೆ ಅವಕಾಶ ನೀಡಬಾರದೆಂಬ ಮನವಿಗೆ ಸರಕಾರ ಕಿವಿಗೊಡದ ಹಿನ್ನೆಲೆಯಲ್ಲಿ ಹಿಂದೂಗಳ ನ್ಯಾಯಾಲಯ ಸ್ಥಾಪಿಸಿದ್ದಾಗಿ ಸಂಘಟನೆ ಸಮರ್ಥಿಸಿಕೊಂಡಿದೆ.