ಶ್ವೇತಭವನದ ಮಾಧ್ಯಮ ಕಚೇರಿಯ ಪ್ರಮುಖ ಹುದ್ದೆಯಲ್ಲಿ ಭಾರತಸಂಜಾತ

0
17

ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರ ಅಧಿಕೃತ ವಿಮಾನ ‘ಏರ್‌ಫೋರ್ಸ್‌ ಒನ್‌’ನಲ್ಲಿ ವರದಿಗಾರರ ತಂಡಕ್ಕೆ ಪತ್ರಿಕಾಗೋಷ್ಠಿ ನಡೆಸುವ ಅವಕಾಶವನ್ನು ಭಾರತ ಸಂಜಾತ ಅಮೆರಿಕದ ಪ್ರಜೆ ರಾಜ್‌ ಷಾ ಪಡೆದಿದ್ದಾರೆ.

ಶ್ವೇತಭವನದ ಮಾಧ್ಯಮ ತಂಡದಲ್ಲಿ ಪ್ರಮುಖ ಹುದ್ದೆಯಲ್ಲಿರುವ ಅವರು, ಪ್ರಮುಖ ಭಾಷಣ ನೀಡಲು ಇತ್ತೀಚೆಗೆ ಮಿಸ್ಸೌರಿಗೆ ತೆರಳಿದ್ದ ಟ್ರಂಪ್‌ ಅವರ ಜೊತೆಗೆ ಪ್ರಯಾಣಿಸಿದ್ದರು. ಈ ಮೂಲಕ ಷಾ, ಅಮೆರಿಕದ ಅಧ್ಯಕ್ಷರ ವಿಮಾನದಲ್ಲಿ ಇಂತಹ ಕಾರ್ಯ ನಿರ್ವಹಿಸಿದ ಮೊದಲ ಭಾರತ ಸಂಜಾತ ಎನಿಸಿಕೊಂಡಿದ್ದಾರೆ.

ಸೆಪ್ಟೆಂಬರ್‌ನಲ್ಲಿ ತಮ್ಮ ಪತ್ರಿಕಾ ಕಚೇರಿಯನ್ನು ಪುನರ್‌ರಚಿಸುವ ಸಂದರ್ಭದಲ್ಲಿ, 33 ವರ್ಷದ ಷಾ ಅವರನ್ನು ಪ್ರಧಾನ ಉಪ ಪತ್ರಿಕಾ ಕಾರ್ಯದರ್ಶಿಯಾಗಿ ಹಾಗೂ ಹೋಪ್‌ ಹಿಕ್ಸ್‌ ಅವರನ್ನು ಸಂವಹನ ನಿರ್ದೇಶಕರನ್ನಾಗಿ ಟ್ರಂಪ್ ನೇಮಕ ಮಾಡಿದ್ದರು. ಷಾ ಅವರ ತಂದೆ ತಾಯಿ 1970ರಲ್ಲಿ ಗುಜರಾತಿನಿಂದ ಇಲ್ಲಿಗೆ ಬಂದು ನೆಲೆಸಿದ್ದು, ಷಾ 1984ರಲ್ಲಿ ಜನಿಸಿದ್ದರು.