ಶ್ರೀಶಾಂತ್‌ಗೆ ಜೀವದಾನ; ಆಜೀವ ನಿಷೇಧ ತೆರವು

0
633

ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಶಿಸ್ತು ಸಮಿತಿಯು ಕೇರಳ ಕ್ರಿಕೆಟಿಗ ಎಸ್ ಶ್ರೀಶಾಂತ್ ಮೇಲೆ ವಿಧಿಸಿರುವ ಆಜೀವ ನಿಷೇಧವನ್ನು ದೇಶದ ಸರ್ವೋಚ್ಚ ನ್ಯಾಯಾಲಯ ಸುಪ್ರೀಂ ಕೋರ್ಟ್ ತೆರವುಗೊಳಿಸಿದೆ.

ಹೊಸದಿಲ್ಲಿ:ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಶಿಸ್ತು ಸಮಿತಿಯು ಕೇರಳ ಕ್ರಿಕೆಟಿಗ ಎಸ್ ಶ್ರೀಶಾಂತ್ ಮೇಲೆ ವಿಧಿಸಿರುವ ಆಜೀವ ನಿಷೇಧವನ್ನು ದೇಶದ ಸರ್ವೋಚ್ಚ ನ್ಯಾಯಾಲಯ ಸುಪ್ರೀಂ ಕೋರ್ಟ್ ತೆರವುಗೊಳಿಸಿದೆ. 
 
2019 ಮಾರ್ಚ್ 16  ಶುಕ್ರವಾರದಂದು ಮಹತ್ತರ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್, ಶ್ರೀಶಾಂತ್ ಮೇಲಿನ ಆಜೀವ ನಿಷೇಧವನ್ನು ತೆರವುಗೊಳಿಸಿ ಶಿಕ್ಷೆಯ ಪರಿಮಾಣವನ್ನು ಮೂರು ತಿಂಗಳೊಳಗೆ ಪ್ರಕಟಿಸುವಂತೆ ಬಿಸಿಸಿಐಗೆ ಆದೇಶ ಹೊರಡಿಸಿದೆ. 
 
ಇದರೊಂದಿಗೆ ಕೇರಳ ಸ್ಪೀಡ್‌ಸ್ಟಾರ್‌ಗೆ ಜೀವದಾನ ಲಭಿಸಿದಂತಾಗಿದೆ. ನ್ಯಾಯಮೂರ್ತಿ ಅಶೋಕ್ ಭೂಷನ್ ಹಾಗೂ ಕೆಎಂ ಜೋಸೆಫ್ ಸೇರಿದ ಸದಸ್ಯ ಪೀಠವು ಈ ಮಹತ್ತರ ತೀರ್ಪು ನೀಡಿದೆ. 

ಶ್ರೀಶಾಂತ್‌ಗೆ ಶಿಕ್ಷೆಯ ಪರಿಮಾಣವನ್ನು ಪ್ರಶ್ನಿಸುವ ಹಕ್ಕು ಕೂಡಾ ಇರಲಿದೆ ಎಂಬುದನ್ನು ಬೆಂಚ್ ಸ್ಪಷ್ಟಪಡಿಸಿದೆ. ಹಾಗಿದ್ದರೂ ಈ ತೀರ್ಪು ದಿಲ್ಲಿ ಹೈ ಕೋರ್ಟ್‌ನಲ್ಲಿ ಮಾಜಿ ಕ್ರಿಕೆಟಿನ ಮೇಲೆ ಬಾಕಿ ಉಳಿದಿರುವ ಕ್ರಿಮಿನಲ್ ಮೊಕದ್ದಮೆಗಳ ವಿಚಾರಣೆಗಳ ಮೇಲೆ ಯಾವುದೇ ಪ್ರಭಾವವನ್ನು ಬೀರುವುದಿಲ್ಲ ಎಂಬುದನ್ನು ಖಚಿತಪಡಿಸಿದೆ. 

2013ರಲ್ಲಿ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಬಿಸಿಸಿಐ ಅಜೀವ ನಿಷೇಧವನ್ನು ಕೇರಳ ಹೈಕೋರ್ಟ್ ಎತ್ತಿ ಹಿಡಿದಿತ್ತು. ಇದನ್ನು ಪ್ರಶ್ನಿಸಿ ಶ್ರೀಶಾಂತ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.