ಶ್ರೀಲಂಕಾ ಸಂಸತ್ ರಕ್ಷಣೆಗೆ ಚೀನಾ ನೆರವು

0
12

ಶ್ರೀಲಂಕಾ ತನ್ನ ಸಂಸತ್ ಭವನದ ರಕ್ಷಣಾ ವ್ಯವಸ್ಥೆ ಬಲಪಡಿಸಿಕೊಳ್ಳಲು ಚೀನಾ ನೆರವು ನೀಡಿದೆ.

ಕೊಲಂಬೊ (ಪಿಟಿಐ): ಶ್ರೀಲಂಕಾ ತನ್ನ ಸಂಸತ್ ಭವನದ ರಕ್ಷಣಾ ವ್ಯವಸ್ಥೆ ಬಲಪಡಿಸಿಕೊಳ್ಳಲು ಚೀನಾ ನೆರವು ನೀಡಿದೆ. 

ಶ್ರೀಲಂಕಾದಲ್ಲಿನ ಚೀನಾ ರಾಯಭಾರಿ ಚೆಂಗ್ ಕ್ಷವಾನ್ ಅವರು 1.30 ಕೋಟಿ ಮೌಲ್ಯದ ರಕ್ಷಣಾ ಉಪಕರಣಗಳನ್ನು ಸಂಸತ್ ಸ್ಪೀಕರ್ ಕರು ಜಯಸೂರ್ಯ ಅವರಿಗೆ ಹಸ್ತಾಂತರಿಸಿದ್ದಾರೆ. ಎಕ್ಸ್‌–ರೇ ಉಪಕರಣ, ಐದು ಲೋಹ ಶೋಧಕ ಪ್ರವೇಶ ದ್ವಾರಗಳು ಇದರಲ್ಲಿ ಸೇರಿವೆ. 

ಚೀನಾ ಸರ್ಕಾರಕ್ಕೆ ಧನ್ಯವಾದ ಸಲ್ಲಿಸಿರುವ ಜಯಸೂರ್ಯ ಅವರು, ‘ಈಸ್ಟರ್ ಭಾನುವಾರ ನಡೆದ ಆತ್ಮಾಹುತಿ ಬಾಂಬ್ ದಾಳಿಯಿಂದ ತತ್ತರಿಸಿದ್ದ ಹಿನ್ನೆಲೆಯಲ್ಲಿ ಇದು ಅತ್ಯಂತ ಮೌಲ್ಯಯುತ ನೆರವು. ಯಾವುದೇ ರಾಷ್ಟ್ರೀಯ ವಿಪತ್ತು ಅಥವಾ ದುರಂತ ಉಂಟಾದಾಗ ಮೊದಲು ಸಹಾಯಕ್ಕೆ ಧಾವಿಸುವ ರಾಷ್ಟ್ರಗಳಲ್ಲಿ ಚೀನಾ ಸಹ ಒಂದು’ ಎಂದು ತಿಳಿಸಿದ್ದಾರೆ.  
 
‘ರಾವಣ–1’ ಉಪಗ್ರಹ ಉಡಾವಣೆ
 
ಕೊಲಂಬೊ: ಶ್ರೀಲಂಕಾ ತನ್ನ ಮೊದಲ ಉಪಗ್ರಹ ‘ರಾವಣ–1’ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. 
 
ಜಪಾನ್‌ನ ಕ್ಯುಶು ತಂತ್ರಜ್ಞಾನ ಸಂಸ್ಥೆಯಲ್ಲಿ ಬಾಹ್ಯಾಕಾಶ ಎಂಜಿನಿಯರಿಂಗ್ ಅಧ್ಯಯನ ಮಾಡುತ್ತಿರುವ ಇಬ್ಬರು ಸ್ಥಳೀಯ ಎಂಜಿನಿಯರ್‌ಗಳು ಇದನ್ನು ಅಭಿವೃದ್ಧಿಪಡಿಸಿದ್ದಾರೆ.
 
‘ಜಪಾನ್ ಬಾಹ್ಯಾಕಾಶ ಮತ್ತು ಅನ್ವೇಷಣಾ ಸಂಸ್ಥೆ (ಜೆಎಎಕ್ಸ್‌ಎ) ನೆರವಿನೊಂದಿಗೆ, ಇಲ್ಲಿನ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಉಪಗ್ರಹ ಉಡಾಯಿಸಲಾಗಿದೆ’ ಎಂದು ಕೊಲಂಬೊ ಪೇಜ್ ಪತ್ರಿಕೆ ವರದಿ