ಶ್ರೀಲಂಕಾದಲ್ಲಿ ಚೀನಾದಿಂದ ಮನೆ, ರಸ್ತೆ ನಿರ್ಮಾಣ

0
759

ಶ್ರೀಲಂಕಾದ ಉತ್ತರದ ಜಾಫ್ನಾದಲ್ಲಿ ಚೀನಾ ಮನೆ ಮತ್ತು ರಸ್ತೆ ಹಾಗು ಮೂಲಭೂತ ಸೌಕರ್ಯ ವ್ಯವಸ್ಥೆ ಕಲ್ಪಿಸುತ್ತಿದ್ದು, ಭಾರತದ ನೆರೆರಾಷ್ಟ್ರದಲ್ಲಿ ಅಧಿಪತ್ಯ ಸ್ಥಾಪನೆಗೆ ಮುಂದಾಗಿದೆ.

ಕೊಲಂಬೊ: ಶ್ರೀಲಂಕಾದ ಉತ್ತರದ ಜಾಫ್ನಾದಲ್ಲಿ ಚೀನಾ ಮನೆ ಮತ್ತು ರಸ್ತೆ ಹಾಗು ಮೂಲಭೂತ ಸೌಕರ್ಯ ವ್ಯವಸ್ಥೆ ಕಲ್ಪಿಸುತ್ತಿದ್ದು, ಭಾರತದ ನೆರೆರಾಷ್ಟ್ರದಲ್ಲಿ ಅಧಿಪತ್ಯ ಸ್ಥಾಪನೆಗೆ ಮುಂದಾಗಿದೆ. 

ಚೀನಾದ ಯೋಜನೆ ಪ್ರಕಾರ ಅಲ್ಲಿ ಕಾಂಕ್ರೀಟ್ ಕಟ್ಟಡ ನಿರ್ಮಿಸಲಾಗುತ್ತಿದ್ದು, ಸ್ಥಳೀಯರು ಇಟ್ಟಿಗೆ ಕಟ್ಟಡಕ್ಕೆ ಬೇಡಿಕೆ ವ್ಯಕ್ತಪಡಿಸಿದ್ದರಿಂದ ಕಾಮಗಾರಿ ಸದ್ಯಕ್ಕೆ ಸ್ಥಗಿತಗೊಂಡಿದೆ. 

ಶ್ರೀಲಂಕಾದಲ್ಲಿ ಕಟ್ಟಡ ಮತ್ತು ರಸ್ತೆ ನಿರ್ಮಾಣ ಕುರಿತಂತೆ ಭಾರತದ ನಿರ್ಮಾಣ ಸಂಸ್ಥೆಗಳಿಗೆ ಆಹ್ವಾನ ಬಂದಿತ್ತಾದರೂ ಮಾತುಕತೆ ಪೂರ್ಣಗೊಂಡಿರಲಿಲ್ಲ. 
ಆದರೆ ನಂತರದಲ್ಲಿ ಚೀನಾ ಅಲ್ಲಿ ಭಾರತಕ್ಕಿಂತಲೂ ಕಡಿಮೆ ವೆಚ್ಚದಲ್ಲಿ ಕಾಮಗಾರಿ ನಡೆಸಿಕೊಡುವುದಾಗಿ ಹೇಳಿತ್ತು. ಹೀಗಾಗಿ ಶ್ರೀಲಂಕಾ ಚೀನಾಗೆ ಮಣೆ ಹಾಕಿದೆ ಎನ್ನಲಾಗಿದೆ. 

ಚೀನಾ ಕಾಮಗಾರಿ ನಡೆಸುವ ಜತೆಗೆ ಶ್ರೀಲಂಕಾಗೆ ಆರ್ಥಿಕ ನೆರವು ಮತ್ತು ಇತರ ಕೊಡುಗೆಗಳ ಅಮಿಷ ಮೂಲಕ ಅಲ್ಲಿ ಅಧಿಪತ್ಯ ಸ್ಥಾಪಿಸಲು ಮುಂದಾಗುತ್ತಿದೆ. ಆದರೆ ಇದರಿಂದ ಅಲ್ಲಿನ ಜನತೆ ಮೇಲೆ ಸಾಲದ ಹೊರೆ ಬೀಳಲಿದೆ. 

ಚೀನಾದ ಜಾಫ್ನಾ ಪ್ರದೇಶದಲ್ಲಿ ತಮಿಳು ಪ್ರತ್ಯೇಕತಾವಾದಿ ಸಂಘಟನೆಯ ಸದಸ್ಯರು ಮತ್ತು ಸರಕಾರದ ಮಧ್ಯೆ ಕಳೆದ 26 ವರ್ಷಗಳಿಂದ ನಡೆಯುತ್ತಿದ್ದ ಶೀತಲ ಸಮರ ಕೊನೆಯಾಗಿದ್ದು, ಅಲ್ಲಿ ಮೂಲಭೂತ ವ್ಯವಸ್ಥೆ ಕಲ್ಪಿಸಲು ಸರಕಾರ ಮುಂದಾಗಿದೆ. ಚೀನಾದ ಸರಕಾರಿ ಸ್ವಾಮ್ಯದ ಚೀನಾ ರೈಲ್ವೆ ಬೀಜಿಂಗ್ ಇಂಜಿನಿಯರಿಂಗ್ ಗ್ರೂಪ್ ಲಿ. 40,000 ಮನೆಗಳ ನಿರ್ಮಾಣದ ಗುತ್ತಿಗೆ ಪಡೆದುಕೊಂಡಿದೆ. 

ಈ ಮೊದಲು ಭಾರತ ಶ್ರೀಲಂಕಾದಲ್ಲಿ ಇದೇ ರೀತಿಯಲ್ಲಿ ಮನೆ, ರಸ್ತೆ ಹಾಗು ಇತರ ಮೂಲಸೌಕರ್ಯ ಅಭಿವೃದ್ಧಿ ಕಾರ್ಯ ಮಾಡಿದ್ದರೂ, ಈ ಬಾರಿ ಮಾತ್ರ ಚೀನಾ ಗುತ್ತಿಗೆ ಪಡೆದುಕೊಂಡಿದ್ದು, ಭಾರತಕ್ಕೆ ಹಿನ್ನಡೆಯಾಗಿದೆ.