ಶ್ರೀಲಂಕಾ ಸೇನಾ ಮುಖ್ಯಸ್ಥರ ಬಂಧನಕ್ಕೆ ಕೋರ್ಟ್‌ ಆದೇಶ

0
250

ಎಲ್‌ಟಿಟಿಇಯೊಂದಿಗಿನ ಸಂಘರ್ಷದ ಸಮಯದಲ್ಲಿ ಅಲ್ಪಸಂಖ್ಯಾತ ತಮಿಳರು ಸೇರಿದಂತೆ 11 ಯುವಕರ ಅಪಹರಣ ಮತ್ತು ನಾಪತ್ತೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ಶ್ರೀಲಂಕಾ ಸೇನಾ ಮುಖ್ಯಸ್ಥ ಅಡ್ಮಿರಲ್‌ ರವೀಂದ್ರ.ಸಿ. ವಿಜೆಗುಣರತ್ನೆ ಅವರನ್ನು ಬಂಧಿಸುವಂತೆ ಕೊಲೊಂಬೊ ಮ್ಯಾಜಿಸ್ಪ್ರೇಟ್‌ ನ್ಯಾಯಾಲಯ ನವೆಂಬರ್ 2 ರ ಶುಕ್ರವಾರ ಆದೇಶಿಸಿದೆ.

ಕೊಲಂಬೊ: ಎಲ್‌ಟಿಟಿಇಯೊಂದಿಗಿನ ಸಂಘರ್ಷದ ಸಮಯದಲ್ಲಿ ಅಲ್ಪಸಂಖ್ಯಾತ ತಮಿಳರು ಸೇರಿದಂತೆ 11 ಯುವಕರ ಅಪಹರಣ ಮತ್ತು ನಾಪತ್ತೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ಶ್ರೀಲಂಕಾ ಸೇನಾ ಮುಖ್ಯಸ್ಥ ಅಡ್ಮಿರಲ್‌  ರವೀಂದ್ರ.ಸಿ. ವಿಜೆಗುಣರತ್ನೆ ಅವರನ್ನು ಬಂಧಿಸುವಂತೆ ಕೊಲೊಂಬೊ ಮ್ಯಾಜಿಸ್ಪ್ರೇಟ್‌ ನ್ಯಾಯಾಲಯ ನವೆಂಬರ್ 2 ರ ಶುಕ್ರವಾರ ಆದೇಶಿಸಿದೆ. 

2008 ಮತ್ತು 2009ರ ನಡುವೆ 11 ಯುವಕರ ಕಣ್ಮರೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಆರೋಪಿಯ ರಕ್ಷಣೆ ಮತ್ತು ಆತ ದೇಶದಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡಿದ ಆರೋಪ ವಿಜೆಗುಣರತ್ನೆ ಅವರ ಮೇಲಿದೆ. ನಾಪತ್ತೆಯಾಗಿರುವ ಯುವಕರು ಹತ್ಯೆಯಾಗಿರಬಹುದು ಎಂದು ನಂಬಲಾಗಿದೆ. ”ನವೆಂಬರ್‌ 9ರೊಳಗೆ ವಿಜೆಗುಣರತ್ನೆ ಅವರನ್ನು ಬಂಧಿಸಬೇಕು. ಬಂಧಿಸಲು ವಿಫಲವಾದರೆ ಕ್ರಮ ಎದುರಿಸಲು ಸಿದ್ಧರಾಗಬೇಕು,” ಎಂದು ನ್ಯಾಯಾಲಯ ಪೊಲೀಸರಿಗೆ ಎಚ್ಚರಿಸಿದೆ. 

ತಮಿಳರ ನಾಪತ್ತೆಯ ಹಿಂದೆ ಶ್ರೀಲಂಕಾ ಸರಕಾರ ಅದರಲ್ಲೂ ಮುಖ್ಯವಾಗಿ ಭೂಸೇನೆ, ವಾಯು ಸೇನೆ ಮತ್ತು ಪೊಲೀಸರ ಕೈವಾಡವಿದೆ ಎಂದು ನಾಪತ್ತೆಯಾದವರ ಸಂಬಂಧಿಕರು ಆರೋಪಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಯು ಸೇನೆಯ ಅನೇಕ ಅಧಿಕಾರಿಗಳು ಜಾಮೀನು ಪಡೆದಿದ್ದಾರೆ.