ಶ್ರೀಲಂಕಾ ಸಂಸತ್ ಅಮಾನತು!

0
478

ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ರಾಜಕೀಯ ಕಿತ್ತಾಟ ಮುಂದುವರಿದಿದ್ದು, ನೂತನ ಪ್ರಧಾನಿ ಆಯ್ಕೆ ಸಮರ್ಥಿಸಿಕೊಳ್ಳಲು ಸಂಸತ್​ನ್ನು ತಾತ್ಕಾಲಿಕವಾಗಿ ಅಮಾನತಿನಲ್ಲಿಡಲು ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ನಿರ್ಧರಿಸಿದ್ದಾರೆ.

ಕೊಲೊಂಬೊ: ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ರಾಜಕೀಯ ಕಿತ್ತಾಟ ಮುಂದುವರಿದಿದ್ದು, ನೂತನ ಪ್ರಧಾನಿ ಆಯ್ಕೆ ಸಮರ್ಥಿಸಿಕೊಳ್ಳಲು ಸಂಸತ್​ನ್ನು ತಾತ್ಕಾಲಿಕವಾಗಿ ಅಮಾನತಿನಲ್ಲಿಡಲು ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ನಿರ್ಧರಿಸಿದ್ದಾರೆ.

ಪ್ರಧಾನಿ ಹುದ್ದೆಯಿಂದ ರಾನಿಲ್ ವಿಕ್ರಮಸಿಂಘ ಅವರನ್ನು ಹಠಾತ್ ಪದಚ್ಯುತಗೊಳಿಸಿ, ಮಹಿಂದಾ ರಾಜಪಕ್ಸ ಅವರನ್ನು ನೇಮಕ ಮಾಡಿರುವುದು ಶ್ರೀಲಂಕಾದಲ್ಲಿ ರಾಜಕೀಯ ಅಸ್ಥಿರತೆಗೆ ಕಾರಣವಾಗಿದೆ. ನೂತನ ಪ್ರಧಾನಿ ರಾಜಪಕ್ಸ ಅವರ ಪಕ್ಷಕ್ಕೆ ಸಂಸತ್ತಿನಲ್ಲಿ ಬಹುಮತವಿಲ್ಲ. 225 ಸದಸ್ಯರ ಸಂಸತ್ತಿನಲ್ಲಿ ರಾಜಪಕ್ಸ ಹಾಗೂ ಸಿರಿಸೇನ ಮೈತ್ರಿಕೂಟಕ್ಕೆ 95 ಸದಸ್ಯರ ಬಲವಿದೆ. ಬಹುಮತ ಸಾಬೀತು ಪಡಿಸಲು ಇನ್ನೂ 18 ಸದಸ್ಯರ ಅಗತ್ಯವಿದೆ. ಬಹುಮತ ಸಾಬೀತಿಗೆ ಇನ್ನಷ್ಟು ಕಾಲಾವಕಾಶ ಪಡೆದುಕೊಂಡು, ನೂತನ ಪ್ರಧಾನಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ನ.16ರವರೆಗೆ ಸಂಸತ್​ನ್ನು ಅಮಾನತಿನಲ್ಲಿರಿಸಿ ಸಿರಿಸೇನ ಆದೇಶ ಹೊರಡಿಸಿದ್ದಾರೆ.

ನಾನೇ ಪ್ರಧಾನಿ: ಸಂವಿಧಾನ ಬದ್ಧವಾಗಿ ಆಯ್ಕೆಯಾಗಿರುವ ಕಾರಣ ಈಗಲೂ ತಾವೇ ಪ್ರಧಾನಿ ಎಂದು ರಾನಿಲ್ ವಿಕ್ರಮಸಿಂಘ ಹೇಳಿಕೊಂಡಿದ್ದಾರೆ.

ಚೀನಾಗೆ ಆಪ್ತ ರಾಜಪಕ್ಸ

ನೂತನ ಪ್ರಧಾನಿ ರಾಜಪಕ್ಸ ಚೀನಾ ಜತೆ ಆಪ್ತ ಸಂಬಂಧ ಹೊಂದಿದ್ದಾರೆ. ಅವರು ಅಧಿಕಾರದಲ್ಲಿದ್ದಾಗ ಶ್ರೀಲಂಕಾದ ಪ್ರಮುಖ ಬಂದರಿನಲ್ಲಿ ಚೀನಾಕ್ಕೆ ಸೇನಾನೆಲೆ ನಿರ್ವಿುಸಲು ಹಾಗೂ ಬಂದರು ಅಭಿವೃದ್ಧಿಗೆ ಅವಕಾಶ ನೀಡಿದ್ದರು. ಈಗ ಅವರು ಪ್ರಧಾನಿಯಾಗಿರುವುದು ಭಾರತಕ್ಕೆ ತಲೆನೋವು ತಂದಿದೆ.