ಶೇ 52ರಷ್ಟು ನಗರವಾಸಿ ಯುವಕರು ದ್ವಿಭಾಷಿಕರು… ಶೇ 18 ಮಂದಿ 3 ಭಾಷೆ ಬಲ್ಲರು!

0
248

ದೇಶದಲ್ಲಿರುವ ಸುಮಾರು ಅರ್ಧಕ್ಕೂ ಅಧಿಕ ಯುವಕರು ಒಂದಕ್ಕಿಂತ ಹೆಚ್ಚು ಭಾಷೆ ಬಲ್ಲವರಾಗಿದ್ದಾರೆ. ಅದರಲ್ಲೂ ನಗರದಲ್ಲಿ ವಾಸಿಸುವ ಯುವ ಜನರು ಕನಿಷ್ಠ 2 ಭಾಷೆಯನ್ನು ಚೆನ್ನಾಗಿ ಬಲ್ಲವರಾಗಿದ್ದಾರೆ. ಇನ್ನು ಶೇ.18ರಷ್ಟು ಯುವ ಸಮುದಾಯ ಮೂರು ಭಾಷೆಗಳನ್ನು ತಿಳಿದುಕೊಂಡಿದ್ದಾರೆ ಎಂದು ಗೊತ್ತಾಗಿದೆ. ಯುವ ಪೀಳಿಗೆ

ಹೊಸದಿಲ್ಲಿ: ದೇಶದಲ್ಲಿರುವ ಸುಮಾರು ಅರ್ಧಕ್ಕೂ ಅಧಿಕ ಯುವಕರು ಒಂದಕ್ಕಿಂತ ಹೆಚ್ಚು ಭಾಷೆ ಬಲ್ಲವರಾಗಿದ್ದಾರೆ. ಅದರಲ್ಲೂ ನಗರದಲ್ಲಿ ವಾಸಿಸುವ ಯುವ ಜನರು ಕನಿಷ್ಠ 2 ಭಾಷೆಯನ್ನು ಚೆನ್ನಾಗಿ ಬಲ್ಲವರಾಗಿದ್ದಾರೆ. ಇನ್ನು ಶೇ.18ರಷ್ಟು ಯುವ ಸಮುದಾಯ ಮೂರು ಭಾಷೆಗಳನ್ನು ತಿಳಿದುಕೊಂಡಿದ್ದಾರೆ ಎಂದು ಗೊತ್ತಾಗಿದೆ. 

ಇತ್ತೀಚೆಗೆ ನಡೆದ ಸಮೀಕ್ಷೆಯಲ್ಲಿ ಇಂದಿನ ಪೀಳಿಗೆ ಭಾಷಾ ವಿಚಾರದಲ್ಲಿ ಹೆಚ್ಚು ತಿಳಿದುಕೊಳ್ಳುತ್ತಿದ್ದು, 15-49 ವರ್ಷದೊಳಗಿನ ವರ್ಗದ ನಗರವಾಸಿಗಳು ಕನಿಷ್ಠ 2 ಭಾಷೆಗಳನ್ನು ನಿರರ್ಗಳವಾಗಿ ಮಾತನಾಡಲು, ಬರೆಯಲು ಶಕ್ತರಾಗಿದ್ದಾರೆ ಎಂಬುದು ತಿಳಿದು ಬಂದಿದೆ. 

ಗ್ರಾಮೀಣ ಭಾಗದಲ್ಲೂ ಒಂದಕ್ಕಿಂತ ಹೆಚ್ಚು ಭಾಷೆ ತಿಳಿದಿರುವವರ ಸಂಖ್ಯೆ ಹೆಚ್ಚಿತ್ತಿದೆ. ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಯುವ ಪೀಳಿಗೆ ಭಾಷಾ ಜ್ಞಾನಕ್ಕೆ ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂದು ಸಮೀಕ್ಷೆಯಲ್ಲಿ ತಿಳಿದುಕೊಳ್ಳಲಾಗಿದೆ. 

ದತ್ತಾಂಶಗಳ ಪ್ರಕಾರ, ದೇಶದ ಅರ್ಧಕ್ಕಿಂತಲೂ ಹೆಚ್ಚು ಮಂದಿ 2 ಭಾಷೆ ಬಲ್ಲವರಾದರೆ, ಶೇ.7 ಮಂದಿಗೆ ಮೂರು ಭಾಷೆಯ ಬಗ್ಗೆ ಜ್ಞಾನವಿದೆ. ಆದರೆ ಗ್ರಾಮೀಣ ಭಾಗದಲ್ಲಿ ಶೇ.22 ಮಂದಿಯಷ್ಟೇ 2 ಭಾಷೆ ಬಲ್ಲವರಾದರೆ, ಶೇ.5 ರಷ್ಟು ಜನರು ಮೂರು ಭಾಷೆ ತಿಳಿದಿರುತ್ತಾರೆ. ನಗರ ಪ್ರದೇಶದಲ್ಲಿ ಶೇ.44ರಷ್ಟು ಜನ ಎರಡು ಭಾಷೆ ಹಾಗೂ ಶೇ.15 ರಷ್ಟು ಜನ ಮೂರು ಭಾಷೆ ತಿಳಿದುಕೊಂಡಿದ್ದಾರೆ ಎಂದು ಅಧ್ಯಯನ ತಿಳಿಸಿದೆ. 

ಪ್ರಮುಖವಾಗಿ ಉದ್ಯೋಗದ ನಿಮಿತ್ತ ತಮ್ಮ ರಾಜ್ಯದಿಂದ ಬೇರೊಂದು ರಾಜ್ಯಕ್ಕೆ ಹೋಗಬೇಕಾಗಿರುವುದರಿಂದ ಬೇರೊಂದು ಭಾಷಾ ಜ್ಞಾನವನ್ನು ಯುವಕರು ಪಡೆಯುತ್ತಿದ್ದಾರೆ. 14 ವರ್ಷದ ವರೆಗಿನ ಯುವ ಸಮುದಾಯಕ್ಕೆ ಮಾತೃಭಾಷೆಗ ಪ್ರಾಮುಖ್ಯತೆ ಕೊಟ್ಟಿದ್ದರೆ, 15 ವರ್ಷದ ಮೇಲ್ಪಟ್ಟವರಲ್ಲಿ ಒಂದುಕ್ಕಿಂತ ಹೆಚ್ಚು ಭಾಷೆ ತಿಳಿದುಕೊಂಡಿದ್ದಾರೆ. 

ಇದಲ್ಲದೆ ಯುವತಿಯರಿಗಿಂತ ಯುವಕರಲ್ಲೇ ಬಹುಭಾಷೆಯ ಜ್ಞಾನ ಹೆಚ್ಚಿರುತ್ತದೆ. 20-24 ಪ್ರಾಯದ ವಿಭಾಗದಲ್ಲಿ ಶೇ.25 ರಷ್ಟು ಯುವಕರಿಗೆ ಹಾಗೂ ಶೇ.16ರಷ್ಟು ಮಹಿಳೆಯರಿಗೆ ಕನಿಷ್ಠ ಎರಡು ಭಾಷಾ ಜ್ಞಾನ ಉಳ್ಳವರಾಗಿರುತ್ತಾರೆ. ಒಟ್ಟಾರೆ ಈ ವಿಭಾಗದಲ್ಲಿ ದೇಶದ ಶೇ.52ರಷ್ಟು ಜನರಿಗೆ ಕನಿಷ್ಠ 2 ಭಾಷೆಗಳ ಜ್ಞಾನವಿರುವುದಾಗಿ ಸಮೀಕ್ಷೆಯಲ್ಲಿ ತಿಳಿಯಲಾಗಿದೆ.