ಶೂಟರ್‌ ಜಿತು ರೈ ಗುರಿಗೆ ಒಲಿದ ಚಿನ್ನದ ಪದಕ

0
23

ಗೋಲ್ಡ್‌ಕೋಸ್ಟ್‌ ನಡೆಯುತ್ತಿರುವ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಭಾರತಕ್ಕೆ ಸೋಮವಾರ ಮತ್ತೊಂದು ಚಿನ್ನದ ಪದಕ ಲಭಿಸಿದೆ.

ಪುರುಷರ 10 ಮೀ. ಏರ್‌ ಪಿಸ್ತೂಲ್‌ ಸ್ಪರ್ಧೆಯಲ್ಲಿ ಶೂಟರ್‌ ಜಿತು ರೈ ಇಟ್ಟ ಗುರಿಗೆ ಚಿನ್ನದ ಪದಕ ಸಿಕ್ಕಿದೆ. ಈ ಕ್ರೀಡಾಕೂಟದ ದಾಖಲೆಯ 235.1 ಪಾಯಿಂಟ್‌ ಗಳಿಸುವ ಮೂಲಕ ಜಿತು ಚಿನ್ನ ಗೆದ್ದರು.

233.5 ಪಾಯಿಂಗ್‌ ಗಳಿಸಿದ ಆಸ್ಟ್ರೇಲಿಯಾದ ಕೆರ್ರಿ ಬೆಲ್‌ ಬೆಳ್ಳಿ ಪದಕಕ್ಕೆ ಮತ್ತು 214.3 ಪಾಯಿಂಟ್‌ನಿಂದ ಭಾರತದವರೇ ಆದ ಓಂ ಮಿಥರ್‌ವಾಲ್‌ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು.