ಶುದ್ಧಗಾಳಿ ಕಾರ್ಯಕ್ರಮ ರಾಜ್ಯದ 4 ನಗರ ಆಯ್ಕೆ(ದೇಶದ 102 ನಗರಗಳಲ್ಲಿ ಗಾಳಿಯ ಗುಣಮಟ್ಟ ಸುಧಾರಿಸುವ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರ ಚಾಲನೆ ನೀಡಿದೆ.)

0
609

ಕರ್ನಾಟಕದ ನಾಲ್ಕು ನಗರಗಳೂ ಸೇರಿ ದೇಶದ 102 ನಗರಗಳಲ್ಲಿ ಗಾಳಿಯ ಗುಣಮಟ್ಟ ಸುಧಾರಿಸುವ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರ 2019 ಜನೇವರಿ 10 ರ ಗುರುವಾರ ಚಾಲನೆ ನೀಡಿದೆ.

ನವದೆಹಲಿ: ಕರ್ನಾಟಕದ ನಾಲ್ಕು ನಗರಗಳೂ ಸೇರಿ ದೇಶದ 102 ನಗರಗಳಲ್ಲಿ ಗಾಳಿಯ ಗುಣಮಟ್ಟ ಸುಧಾರಿಸುವ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರ 2019 ಜನೇವರಿ 10 ರ  ಗುರುವಾರ ಚಾಲನೆ ನೀಡಿದೆ.

ಬೆಂಗಳೂರು, ದಾವಣಗೆರೆ, ಕಲಬುರ್ಗಿ ಮತ್ತು ಹುಬ್ಬಳ್ಳಿ–ಧಾರವಾಡ ಈ ಕಾರ್ಯಕ್ರಮಕ್ಕೆ ಆಯ್ಕೆಯಾಗಿವೆ.

102 ನಗರಗಳಲ್ಲಿ 43 ‘ಸ್ಮಾರ್ಟ್‌ ಸಿಟಿ’ಗಳೂ ಸೇರಿವೆ. 2017ರಲ್ಲಿ ಈ ನಗರಗಳಲ್ಲಿ ದಾಖಲಾಗಿದ್ದ ಪಿಎಂ 2.5 ಮತ್ತು ಪಿಎಂ 10 ಮಾಲಿನ್ಯಕಾರಕ ಕಣಗಳ ಸಂಖ್ಯೆಯಲ್ಲಿ ಶೇ 20–30ರಷ್ಟು ಕಡಿಮೆ ಮಾಡಲು ಈ ಕಾರ್ಯಕ್ರಮ ರೂಪಿಸಲಾಗಿದೆ. 2019ರಿಂದ 2024ರವರೆಗೆ  ಕಾರ್ಯಕ್ರಮ ಚಾಲ್ತಿಯಲ್ಲಿ ಇರಲಿದೆ. ಕೇಂದ್ರ ಪರಿಸರ ಸಚಿವಾಲಯ ಇದರ ಮೇಲ್ವಿಚಾರಣೆ ನಡೆಸಲಿದೆ. ಐದು ವರ್ಷಗಳ ಈ ಕಾರ್ಯಕ್ರಮಕ್ಕೆ 2,000 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಈಗ 300 ಕೋಟಿ ಮಂಜೂರು ಮಾಡಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ದೂಳು ನಿಯಂತ್ರಣಕ್ಕೆ ಕ್ರಮ

ಈ ನಗರಗಳಲ್ಲಿ ದೂಳಿನ ಪ್ರಮಾಣ ಕಡಿಮೆ ಮಾಡುವ ಮೂಲಕ ವಾಯುಮಾಲಿನ್ಯವನ್ನು ನಿಯಂತ್ರಿಸಲು ಯೋಜನೆ ರೂಪಿಸಲಾಗಿದೆ. ಆಯಾ ನಗರಗಳಿಗೇ ವಿಶಿಷ್ಟವಾದ ಕಾರ್ಯಯೋಜನೆ ರೂಪಿಸಬೇಕಿದೆ. ಆದರೆ ಪ್ರಮುಖವಾಗಿ ಈ ಕೆಳಕಂಡ ಕ್ರಮಗಳನ್ನು ಸೂಚಿಸಲಾಗಿದೆ

l ರಸ್ತೆಯಲ್ಲಿ ದೂಳು ಏಳದಂತೆ ನೀರು ಚಿಮುಕಿಸುವುದು

l ನಿರ್ಮಾಣ–ಕಾಮಗಾರಿ ಸ್ಥಳಗಳಲ್ಲಿ ನೀರು ಚಿಮುಕಿಸುವುದು

l ಸಂಸ್ಕರಿಸಿದ ಕೊಳಚೆ ನೀರನ್ನು ಇದಕ್ಕಾಗಿ ಬಳಸುವುದು

l ರಸ್ತೆಯ ಕಸ ಗುಡಿಸಲು ಯಂತ್ರಗಳನ್ನು ಬಳಸುವುದು

l ಎಲ್ಲಾ ರಸ್ತೆಗಳ ಬದಿಗಳಲ್ಲಿ ಗಿಡ–ಮರಗಳನ್ನು ಬೆಳೆಸುವುದು