ಶಿಷ್ಯ ಭಜರಂಗ್ ಯಶಸ್ಸಿಗಾಗಿ ಕುಸ್ತಿ ತ್ಯಜಿಸಿದ ಯೋಗೇಶ್ವರ್!

0
310

ಮುಂಬರುವ ಟೋಕಿಯೊ ಒಲಿಂಪಿಕ್ಸ್​ನಲ್ಲಿ ಚಿನ್ನದ ಪದಕ ಗೆಲ್ಲುವ ಸಾಮರ್ಥ್ಯ ಹೊಂದಿರುವ ನೆಚ್ಚಿನ ಶಿಷ್ಯ ಭಜರಂಗ್ ಪೂನಿಯಾಗೆ ನೆರವಾಗುವ ಸಲುವಾಗಿ ಕುಸ್ತಿ ಆಟದಿಂದ ನಿವೃತ್ತಿ ಪಡೆದಿರುವೆ ಎಂದು ಲಂಡನ್ ಒಲಿಂಪಿಕ್ಸ್ ಪದಕ ಸಾಧಕ ಪೈಲ್ವಾನ್ ಯೋಗೇಶ್ವರ್ ದತ್ ಹೇಳಿದ್ದಾರೆ.

ಸೋನೆಪತ್: ಮುಂಬರುವ ಟೋಕಿಯೊ ಒಲಿಂಪಿಕ್ಸ್​ನಲ್ಲಿ ಚಿನ್ನದ ಪದಕ ಗೆಲ್ಲುವ ಸಾಮರ್ಥ್ಯ ಹೊಂದಿರುವ ನೆಚ್ಚಿನ ಶಿಷ್ಯ ಭಜರಂಗ್ ಪೂನಿಯಾಗೆ ನೆರವಾಗುವ ಸಲುವಾಗಿ ಕುಸ್ತಿ ಆಟದಿಂದ ನಿವೃತ್ತಿ ಪಡೆದಿರುವೆ ಎಂದು ಲಂಡನ್ ಒಲಿಂಪಿಕ್ಸ್ ಪದಕ ಸಾಧಕ ಪೈಲ್ವಾನ್ ಯೋಗೇಶ್ವರ್ ದತ್ ಹೇಳಿದ್ದಾರೆ.

ಕೆಡಿ ಜಾಧವ್ ಮತ್ತು ಸುಶೀಲ್ ಕುಮಾರ್ ಬಳಿಕ 2012 ರ ಒಲಿಂಪಿಕ್ಸ್ ನ ಕುಸ್ತಿಯಲ್ಲಿ  ಪದಕ ಜಯಿಸಿದ 3ನೇ ಭಾರತೀಯರೆನಿಸಿರುವ ಯೋಗೇಶ್ವರ್, 2014ರ ಕಾಮನ್ವೆಲ್ತ್ ಮತ್ತು ಏಷ್ಯನ್ ಗೇಮ್ಸ್ ಗಳಲ್ಲಿ ಚಿನ್ನದ ಪದಕ ಜಯಿಸಿದ್ದರು. ಶುಕ್ರವಾರ 35ನೇ ಜನ್ಮದಿನದ ಸಂಭ್ರಮ ಆಚರಿಸಿದ ಹರಿಯಾಣದ ಕುಸ್ತಿಪಟು ಯೋಗೇಶ್ವರ್, 2020ರ ಒಲಿಂಪಿಕ್ಸ್ ಸ್ವರ್ಣ ಗೆಲುವಿಗೆ ಭಜರಂಗ್ ಅವರ ಸಿದ್ಧತೆಯತ್ತ ಗಮನ ಹರಿಸಿರುವೆ ಎಂದಿದ್ದಾರೆ. ಯೋಗೇಶ್ವರ್ ಸ್ಪರ್ಧಿಸುತ್ತಿದ್ದ 65 ಕೆಜಿ ವಿಭಾಗದಲ್ಲೇ 24 ವರ್ಷದ ಭಜರಂಗ್ ಈಗ ಸಾಧನೆ ತೋರುತ್ತಿದ್ದು, ಈ ವರ್ಷದ ಕಾಮನ್ವೆಲ್ತ್ ಮತ್ತು ಏಷ್ಯನ್ ಗೇಮ್್ಸ ಗಳಲ್ಲಿ ಸ್ವರ್ಣ ಜಯಿಸಿದ್ದರು.