‘ಶಿರಸಿ ಸುಪಾರಿ’ಗೆ ಜಿ.ಐ ಮಾನ್ಯತೆ

0
473

ಶಿರಸಿ ಅಡಿಕೆಗೆ ‘ಶಿರಸಿ ಸುಪಾರಿ’ ಎಂಬ ಭೌಗೋಳಿಕ ಸೂಚಿಕೆ (Geographical Indication) ದೊರೆತಿದೆ.

ಶಿರಸಿ: ಶಿರಸಿ ಅಡಿಕೆಗೆ ‘ಶಿರಸಿ ಸುಪಾರಿ’ ಎಂಬ ಭೌಗೋಳಿಕ ಸೂಚಿಕೆ (Geographical Indication) ದೊರೆತಿದೆ.

ಅಡಿಕೆಗೆ ಈ ಮಾನ್ಯತೆ ದೊರೆಯಲು ಇಲ್ಲಿನ ತೋಟಗಾರ್ಸ್ ಕೋ ಆಪರೇಟಿವ್ ಸೇಲ್ ಸೊಸೈಟಿ (ಟಿಎಸ್‌ಎಸ್‌) ಮಹತ್ವದ ಪಾತ್ರ ವಹಿಸಿದೆ.

‘ಜಿ.ಐ.ಗೆ ಅಡಿಕೆ ಸೇರ್ಪಡೆ ಆಗಿರುವುದರಿಂದ ಅಡಿಕೆ ಉತ್ಕೃಷ್ಟವೆಂದು ಸಾಬೀತಾಗುವುದರ ಜತೆಗೆ ಈ ಬೆಳೆಯ ಜನಪ್ರಿಯತೆ ಹೆಚ್ಚಾಗುತ್ತದೆ. ಬೇರೆ ಕಡೆಯಿಂದ ಬರುವ ಕಳಪೆ ಅಡಿಕೆಯನ್ನು ಬೆರೆಸಿ ಮಾರುವ ಪ್ರಕ್ರಿಯೆಗೆ ಕಡಿವಾಣ ಬೀಳಲಿದೆ.

ಜಾಗತಿಕ ಪೈಪೋಟಿಯಲ್ಲಿ ಗುಣಮಟ್ಟದ ಉತ್ಪನ್ನ ಗುರುತಿಸುವ ಸಲುವಾಗಿ 2003ರಲ್ಲಿ ‘ಜಿ.ಐ’ ನೀಡುವ ವ್ಯವಸ್ಥೆ ಜಾರಿಗೆ ಬಂತು. ಇದರಲ್ಲಿ ನೋಂದಣಿಯಾದ ಉತ್ಪನ್ನಗಳ ಪ್ರಾದೇಶಿಕ ಮಹತ್ವ, ಗುಣಮಟ್ಟದ ಬಗ್ಗೆ ವಿವರಗಳಿರುತ್ತವೆ. ಈವರೆಗೆ ದೇಶದ 325 ಉತ್ಪನ್ನಗಳು ನೋಂದಣಿಯಾಗಿವೆ. ಅವುಗಳಲ್ಲಿ 39 ಕರ್ನಾಟಕದ ಉತ್ಪನ್ನಗಳು ಒಳಗೊಂಡಿವೆ’ ಎಂದು ಟಿಎಸ್‌ಎಸ್ ಅಧ್ಯಕ್ಷ ಶಾಂತಾರಾಮ ಹೆಗಡೆ ತಿಳಿಸಿದ್ದಾರೆ.