ಶಿಮ್ಲಾದಲ್ಲಿ 117 ವರ್ಷಗಳ ಬಳಿಕ ದಾಖಲೆಯ ಮಳೆ

0
24

ಕಳೆದ 117 ವರ್ಷಗಳ ಬಳಿಕ ಶಿಮ್ಲಾದಲ್ಲಿ 2018 ರ ಆಗಸ್ಟ್‌ ತಿಂಗಳಲ್ಲಿ ಸುರಿದ ಮಳೆ ದಾಖಲೆಯ ಪುಟ ಸೇರಿದೆ. ಭಾರತೀಯ ಹವಾಮಾನ ಇಲಾಖೆಯ ಅಂಕಿ ಅಂಶಗಳ ಪ್ರಕಾರ 1901ರಲ್ಲಿ ದಿನವೊಂದರಲ್ಲಿ 277 ಮಿಲಿಮೀಟರ್‌ (ಎಂಎಂ) ಮಳೆ ಸುರಿದಿತ್ತು.

ಶಿಮ್ಲಾ: ಕಳೆದ 117 ವರ್ಷಗಳ ಬಳಿಕ ಶಿಮ್ಲಾದಲ್ಲಿ 2018 ರ ಆಗಸ್ಟ್‌ ತಿಂಗಳಲ್ಲಿ ಸುರಿದ ಮಳೆ ದಾಖಲೆಯ ಪುಟ ಸೇರಿದೆ. 

ಭಾರತೀಯ ಹವಾಮಾನ ಇಲಾಖೆಯ ಅಂಕಿ ಅಂಶಗಳ ಪ್ರಕಾರ 1901ರಲ್ಲಿ ದಿನವೊಂದರಲ್ಲಿ 277 ಮಿಲಿಮೀಟರ್‌ (ಎಂಎಂ) ಮಳೆ ಸುರಿದಿತ್ತು. 

ಆಗಸ್ಟ್ 13 ರ ಸೋಮವಾರ ಬೆಳಗ್ಗೆ 8.30ರ ವರೆಗೆ ಈ ವರೆಗಿನ ಅತಿ ಹೆಚ್ಚು 307 ಎಂಎಂ ಮಳೆ ಶಿಮ್ಲಾದ ಸುಜನ್ಪುರದಲ್ಲಿ ಬಿದ್ದಿರುವುದು ದಾಖಲಾಗಿದೆ. 

ಕಳೆದ 24 ಗಂಟೆಗಳಲ್ಲಿ ಸಾಮಾನ್ಯಕ್ಕಿಂತ 5 ಪಟ್ಟು ಹೆಚ್ಚು ಮಳೆ ಶಿಮ್ಲಾದಲ್ಲಿ ದಾಖಲಾಗಿದೆ. ಆ.13ರಂದು ಒಂದು ದಿನದಲ್ಲಿ 172ಎಂಎಂ ಮಳೆ ಬಿದ್ದಿದ್ದು, ಇದು 2ನೇ ಅತಿ ಹೆಚ್ಚು ಮಳೆ ಬಿದ್ದ ದಾಖಲೆಯಾಗಿದೆ ಎಂದು ಇಲಾಖೆ ಹೇಳಿದೆ. 

ಹಿಮಾಚಲ ಪ್ರದೇಶದಲ್ಲಿ ಆ.13ರಂದು 73.8 ಎಂಎಂ ಮಳೆ ಬಿದ್ದಿರುವುದು ದಾಖಲಾಗಿದ್ದು, ಕಳೆದ 7 ವರ್ಷದಲ್ಲಿ ಅತಿ ಹೆಚ್ಚು ಮಳೆ ಬಿದ್ದ ದಿನವಾಗಿದೆ. 2011ರ ಆ.13ರಂದು 75 ಎಂಎಂ ಮಳೆ ಬಿದ್ದಿರುವುದು ಈ ವರೆಗೆಗಿನ ದಾಖಲೆಯಾಗಿತ್ತು.