ಶಾಸಕ ಸ್ಥಾನಕ್ಕೆ ಉಮೇಶ್​ ಜಾಧವ್​ ರಾಜೀನಾಮೆ

0
418

ಕಲಬುರಗಿಯ ಚಿಂಚೋಳಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಉಮೇಶ್​ ಜಾಧವ್​ ತಮ್ಮ ಶಾಸಕ ಸ್ಥಾನಕ್ಕೆ ಮಾರ್ಚ್ 4 ರ ಸೋಮವಾರ ರಾಜೀನಾಮೆ ನೀಡಿದ್ದಾರೆ.

ಕೋಲಾರ: ಕಲಬುರಗಿಯ ಚಿಂಚೋಳಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಉಮೇಶ್​ ಜಾಧವ್​ ತಮ್ಮ ಶಾಸಕ ಸ್ಥಾನಕ್ಕೆ ಮಾರ್ಚ್ 4 ರ ಸೋಮವಾರ ರಾಜೀನಾಮೆ ನೀಡಿದ್ದಾರೆ.

ಕೋಲಾರದ ಶ್ರೀನಿವಾಸಪುರದ ಅಡ್ಡಗಲ್​ನಲ್ಲಿರುವ ಸ್ಪೀಕರ್​ ರಮೇಶ್​ ಕುಮಾರ್​ ಅವರ ನಿವಾಸಕ್ಕೆ ಮಾರ್ಚ್ 4 ರ ಸೋಮವಾರ ಬೆಳಗ್ಗೆ ತೆರಳಿದ ಉಮೇಶ್​ ಜಾಧವ್​ ರಾಜೀನಾಮೆ ಪತ್ರ ಸಲ್ಲಿಸಿದರು. 

ಉಮೇಶ್​ ಜಾಧವ್​ ಅವರು ಚಿಂಚೋಳಿ ಕ್ಷೇತ್ರದಿಂದ ಕಾಂಗ್ರೆಸ್​ ಶಾಸಕರಾಗಿ ಆಯ್ಕೆಯಾಗಿದ್ದರು. ಗೋಕಾಕ ಶಾಸಕ ರಮೇಶ್​ ಜಾರಕಿಹೊಳಿ ನೇತೃತ್ವದಲ್ಲಿ ಸರ್ಕಾರದ ವಿರುದ್ಧ ಬಂಡಾಯ ಎದ್ದು, ಮುಂಬೈಗೆ ತೆರಳಿದ್ದ ಭಿನ್ನಮತೀಯ ಕಾಂಗ್ರೆಸ್​ ಶಾಸಕರ ಜತೆ ಜಾಧವ್​ ಅವರೂ ಗುರುತಿಸಿಕೊಂಡಿದ್ದರು. ಇವರ ಅನರ್ಹತೆಗೆ ಕಾಂಗ್ರೆಸ್​ ಈಗಾಗಲೇ ಸ್ಪೀಕರ್​ಗೆ ದೂರು ನೀಡಿದೆ. 

ಸದ್ಯ ಉಮೇಶ್​ ಜಾಧವ್​ ಅವರು ಬಿಜೆಪಿ ಸೇರಲಿದ್ದಾರೆ ಎನ್ನಲಾಗಿದೆ. ಕಲಬುರಗಿ ಲೋಕಸಭೆ ಕ್ಷೇತ್ರದಿಂದ ಕಾಂಗ್ರೆಸ್​ನ ಲೋಕಸಭಾ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಬಿಜೆಪಿ ಕಣಕ್ಕಿಳಿಸುವ ಸಾಧ್ಯತೆ ಇರುವುದಾಗಿ ಹೇಳಲಾಗುತ್ತಿದೆ.

ಇನ್ನೊಂದೆಡೆ, ಅವರ ವಿರುದ್ಧ ಸಲ್ಲಿಕೆಯಾಗಿರುವ ಅನರ್ಹತೆ ದೂರಿನ ಹಿನ್ನೆಲೆಯಲ್ಲಿ ಸ್ಪೀಕರ್​ ಅವರು ಜಾಧವ್​ ಅವರ ರಾಜೀನಾಮೆ ಅಂಗೀಕರಿಸುವರೇ ಅಥವಾ ಇಲ್ಲವೇ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.