ಶಸ್ತ್ರಾಸ್ತ್ರ ಉತ್ಪಾದನೆಗೆ ಖಾಸಗಿ ರಹದಾರಿ

0
261

ರಕ್ಷಣಾ ಸಾಮಗ್ರಿಗಳ ಉತ್ಪಾದನೆಗೆ ಖಾಸಗಿ ವಲಯಗಳಿಗೂ ಅವಕಾಶ ನೀಡಲು ಕೇಂದ್ರ ಸರ್ಕಾರ ಮಾರ್ಗಸೂಚಿ ತಯಾರಿಸಿದೆ. ಹೀಗಾಗಿ ಯುದ್ಧ ಸಾಮಗ್ರಿಗಳ ಉತ್ಪಾದನೆಗೆ ಭಾರತದ ಖಾಸಗಿ ಕಂಪನಿಗಳನ್ನು ಆಯ್ಕೆ ಮಾಡಿಕೊಳ್ಳಲು ವಿದೇಶಿ ಕಂಪನಿಗಳಿಗೆ ಅವಕಾಶ ದೊರೆಯಲಿದೆ.

ನವದೆಹಲಿ: ರಕ್ಷಣಾ ಸಾಮಗ್ರಿಗಳ ಉತ್ಪಾದನೆಗೆ ಖಾಸಗಿ ವಲಯಗಳಿಗೂ ಅವಕಾಶ ನೀಡಲು ಕೇಂದ್ರ ಸರ್ಕಾರ ಮಾರ್ಗಸೂಚಿ ತಯಾರಿಸಿದೆ. ಹೀಗಾಗಿ ಯುದ್ಧ ಸಾಮಗ್ರಿಗಳ ಉತ್ಪಾದನೆಗೆ ಭಾರತದ ಖಾಸಗಿ ಕಂಪನಿಗಳನ್ನು ಆಯ್ಕೆ ಮಾಡಿಕೊಳ್ಳಲು ವಿದೇಶಿ ಕಂಪನಿಗಳಿಗೆ ಅವಕಾಶ ದೊರೆಯಲಿದೆ.

ಮೇಕ್ ಇನ್ ಇಂಡಿಯಾ ಯೋಜನೆ ಅನ್ವಯ ಶಸ್ತ್ರಾಸ್ತ್ರಗಳನ್ನು ಖರೀದಿಸುವಾಗ ತಂತ್ರಜ್ಞಾನ ಹಸ್ತಾಂತರವನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ. ಈವರೆಗೆ ಸರ್ಕಾರಿ ಸ್ವಾಮ್ಯದ ಎಚ್​ಎಎಲ್, ಬಿಇಎಲ್ ಅಥವಾ ಬಿಡಿಎಲ್ ನಂಥ ಕಂಪನಿ ಗಳನ್ನೇ ವಿದೇಶಿ ಕಂಪನಿಗಳು ಪಾಲುದಾರರನ್ನಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದವು.

ರಫೇಲ್ ವಿವಾದದ ಬಳಿಕ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ, ತಂತ್ರಜ್ಞಾನ ಹಸ್ತಾಂತರ ಒಪ್ಪಂದ ಹಾಗೂ ಗುತ್ತಿಗೆ ನೀಡಿಕೆ ಬಗ್ಗೆ ಸ್ಪಷ್ಟನೆ ನೀಡಿದೆ. ಇದರಿಂದ ಭವಿಷ್ಯದ ತಂತ್ರಜ್ಞಾನ ಹಸ್ತಾಂತರ ಹಾಗೂ ಸರ್ಕಾರ-ಸರ್ಕಾರ ನಡುವಿನ ಒಪ್ಪಂದಗಳು ಖಾಸಗಿ ಸಂಸ್ಥೆಗಳಿಗೂ ಸಿಗಲಿದೆ. ಪಾರದರ್ಶಕ ಟೆಂಡರ್​ಗಳ ಮೂಲಕ ರಕ್ಷಣಾ ಇಲಾಖೆಯು ಖಾಸಗಿ ಅಥವಾ ಸರ್ಕಾರಿ ಕಂಪನಿಗಳ ಆಯ್ಕೆ ಮಾಡಲಿದೆ. ಹೀಗಾಗಿ ಸರ್ಕಾರಿ ಕಂಪನಿಗಳು ಸ್ಪರ್ಧೆ ಎದುರಿಸುವ ಸ್ಥಿತಿ ನಿರ್ವಣವಾಗಲಿದೆ.

ಈ ಹಿಂದೆ ಕಾಮೋವ್-226 ಹೆಲಿಕಾಪ್ಟರ್ ಹಾಗೂ ಮೀಡಿಯಂ ಮಲ್ಟಿ ರೋಲ್ ಕಾಂಬಾಟ್ ಏರ್​ಕ್ರಾಫ್ಟ್ ಗುತ್ತಿಗೆಯನ್ನು ಎಚ್​ಎಎಲ್ ನೇರವಾಗಿ ಪಡೆದಿತ್ತು. ಹಾಲಿ ನಿಯಮಗಳ ಪ್ರಕಾರ ಎಚ್​ಎಎಲ್ ಅನಿವಾರ್ಯ ಆಯ್ಕೆಯಾಗಿತ್ತು. ಆದರೆ ಇನ್ನು ಖಾಸಗಿ ವಲಯದ ಕಂಪನಿಗಳು ಸಹ ಗುತ್ತಿಗೆ ಪಡೆಯಲು ಸಾಧ್ಯವಿದೆ.

ಆಯ್ಕೆ ಕೇಂದ್ರದ ಹೆಗಲಿಗೆ

ರಫೇಲ್ ರೀತಿಯ ಗುತ್ತಿಗೆ ಪಡೆದ ಕಂಪನಿಯೇ ಭಾರತದ ಕಂಪನಿಯನ್ನು ಆಯ್ಕೆ ಮಾಡಲು ಅವಕಾಶ ಇರುವುದಿಲ್ಲ. ರಕ್ಷಣಾ ಇಲಾಖೆಯೇ ಭಾರತೀಯ ಕಂಪನಿಗಳನ್ನು ಆಯ್ಕೆ ಮಾಡಲಿದೆ.

ರಕ್ಷಣಾ ಮಾರ್ಗಸೂಚಿ

  • ಕಂಪನಿಯ ಮಾಲೀಕತ್ವವನ್ನು ಭಾರತೀಯರು ಹೊಂದಿರಬೇಕು.
  • ಕಪ್ಪುಪಟ್ಟಿಗೆ ಸೇರಿದ ಸಂಸ್ಥೆ ಆಗಿರಬಾರದು
  • ರಕ್ಷಣಾ ಸಾಮಗ್ರಿಗಳ ಉತ್ಪಾದನಾ ಕಂಪನಿಯಾಗಿರಬೇಕು, ಕೇವಲ ವಾಣಿಜ್ಯ ವಹಿವಾಟು ನಡೆಸುವ ಕಂಪನಿಯಾದರೆ ಸಾಲದು.
  • ಈ ವಲಯದಲ್ಲಿ ಕನಿಷ್ಠ 2 ವರ್ಷದ ಅನುಭವ ಇರಬೇಕು.
  • ಎರಡು ವರ್ಷದ ವಹಿವಾಟು ಯೋಜನಾ ವೆಚ್ಚದ ಶೇ.10ಕ್ಕಿಂತ ಕಡಿಮೆ ಇರಕೂಡದು.
  • ಯೋಜನೆಗಾಗಿ ಕೈಗಾರಿಕೆ ಪರವಾನಗಿ ಹೊಂದಿರಬೇಕು.
  • ಕಂಪನಿಯ ಮೌಲ್ಯ ಯೋಜನಾ ವೆಚ್ಚದಲ್ಲಿ ಕನಿಷ್ಠ ಶೇ.5 ಇರಬೇಕು.
  • ಕಂಪನಿಯ ಯಾವುದೇ ನಿರ್ದೇಶಕರು ಉದ್ದೇಶಪೂರ್ವಕ ಸುಸ್ತಿದಾರ ಆಗಿರಬಾರದು.