ಶಸ್ತ್ರಾಸ್ತ್ರ ಆಮದು : ಭಾರತಕ್ಕೆ 2 ನೇ ಸ್ಥಾನ

0
700

: ವಿಶ್ವದಲ್ಲೇ ಅತಿಹೆಚ್ಚು ಶಸ್ತ್ರಾಸ್ತ್ರ ಆಮದು ಮಾಡಿಕೊಳ್ಳುವ ರಾಷ್ಟ್ರ ಎಂಬ ಹಣೆಪಟ್ಟಿ ಕಳಚಿಕೊಂಡಿರುವ ಭಾರತ, ಈಗ ಎರಡನೇ ಸ್ಥಾನಕ್ಕೆ ಇಳಿದಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಮೇಕ್ ಇನ್ ಇಂಡಿಯಾ ಕಾರ್ಯಕ್ರಮ ಇದಕ್ಕೆ ಕಾರಣ.

ನವದೆಹಲಿ: ವಿಶ್ವದಲ್ಲೇ ಅತಿಹೆಚ್ಚು ಶಸ್ತ್ರಾಸ್ತ್ರ ಆಮದು ಮಾಡಿಕೊಳ್ಳುವ ರಾಷ್ಟ್ರ ಎಂಬ ಹಣೆಪಟ್ಟಿ ಕಳಚಿಕೊಂಡಿರುವ ಭಾರತ, ಈಗ ಎರಡನೇ ಸ್ಥಾನಕ್ಕೆ ಇಳಿದಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಮೇಕ್ ಇನ್ ಇಂಡಿಯಾ ಕಾರ್ಯಕ್ರಮ ಇದಕ್ಕೆ ಕಾರಣ.

ಸ್ಟಾಕ್‌ಹೋಮ್ ಇಂಟರ್‌ನ್ಯಾಷನಲ್ ಪೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಪ್ರಕಟಿಸಿರುವ ಇತ್ತೀಚಿನ ವರದಿಯಲ್ಲಿ ಈ ಅಂಶಗಳು ಬಹಿರಂಗವಾಗಿದೆ. 

ಭಾರತದ ಶಸ್ತ್ರಾಸ್ತ್ರ ಆಮದಿನ ಪ್ರಮಾಣ 2014ರಿಂದ 2018ರ ಅವಧಿಯಲ್ಲಿ ಶೇ.24ಕ್ಕೆ ತಗ್ಗಿದೆ.

ಭಾರತ ಅನೇಕ ರಾಷ್ಟ್ರಗಳ ಜತೆ ರಕ್ಷಣಾ ಸಾಮಗ್ರಿ ಖರೀದಿಗೆ ಒಪ್ಪಂದ ಮಾಡಿಕೊಂಡಿದ್ದರೂ ಇವುಗಳ ತಯಾರಿಕೆ ಭಾರತದಲ್ಲೇ ಆಗಬೇಕು ಎಂಬ ಕರಾರು ಹಾಕಿದೆ. ಹೀಗಾಗಿ ಭಾರತ ಶಸ್ತ್ರಾಸ್ತ್ರ ವಿಚಾರದಲ್ಲಿ ಸ್ವಾವಲಂಬಿ ಹಾದಿಯಲ್ಲಿ ಸಾಗುತ್ತಿದೆ.

ಶಸ್ತ್ರಾಸ್ತ್ರ ಖರೀದಿಯಲ್ಲಿ ಜಾಗತಿಕವಾಗಿ ಸೌದಿ ಅರೇಬಿಯಾ ಮೊದಲ ಸ್ಥಾನದಲ್ಲಿದ್ದು, 3 ಮತ್ತು 4ನೇ ಸ್ಥಾನಗಳಲ್ಲಿ ಈಜಿಪ್ಟ್ ಹಾಗೂ ಆಸ್ಟ್ರೇಲಿಯಾ ಇವೆ ಎಂದು ಶಸ್ತ್ರಾಸ್ತ್ರ ಖರೀದಿ ಬಗ್ಗೆ ನಿಗಾ ಇರಿಸುವ ಸ್ಟಾಕ್​ಹೋಂನ ಅಂತಾರಾಷ್ಟ್ರೀಯ ಶಾಂತಿ ಸಂಶೋಧನಾ ಸಂಸ್ಥೆ (ಎಸ್​ಐಪಿಆರ್​ಐ- ಸಿಪ್ರಿ) ತಿಳಿಸಿದೆ. ಇದರಲ್ಲಿ ಫ್ರಾನ್ಸ್​ನಿಂದ ಖರೀದಿಸಲಾಗುತ್ತಿರುವ 36 ರಫೇಲ್ ಯುದ್ಧ ವಿಮಾನ, ರಷ್ಯಾದಿಂದ ಕೊಂಡುಕೊಳ್ಳುತ್ತಿರುವ ಎಸ್-400 ಟ್ರಯಂಫ್ ಕ್ಷಿಪಣಿ ವ್ಯವಸ್ಥೆ ಮಾಹಿತಿ ಸೇರಿಲ್ಲ.

ರಷ್ಯಾದಿಂದ ಹೆಚ್ಚು ಆಮದು

ಭಾರತ ಹೆಚ್ಚಿನ ರಕ್ಷಣಾ ಸಾಮಗ್ರಿಗಳನ್ನು ರಷ್ಯಾದಿಂದ (ಶೇ.58) ಖರೀದಿಸುತ್ತದೆ. ಇಸ್ರೇಲ್ (ಶೇ. 15), ಅಮೆರಿಕ (ಶೇ. 12) ಕೂಡ ಭಾರತಕ್ಕೆ ಶಸ್ತ್ರಾಸ್ತ್ರ ಪೂರೈಕೆ ಮಾಡುವ ಪ್ರಮುಖ ರಾಷ್ಟ್ರಗಳು. ಶಸ್ತ್ರಾಸ್ತ್ರ ರಫ್ತು ಮಾಡುವ ದೇಶಗಳ ಪೈಕಿ ಮೊದಲ ಐದು ಸ್ಥಾನಗಳಲ್ಲಿ ಅಮೆರಿಕ, ರಷ್ಯಾ, ಫ್ರಾನ್ಸ್, ಜರ್ಮನಿ, ಚೀನಾ ಇವೆ. ಚೀನಾ ರಕ್ಷಣಾ ವಿಷಯಕ್ಕೆ ಸಂಬಂಧಿಸಿದ 153 ಸರಕುಗಳನ್ನು 13 ರಾಷ್ಟ್ರಗಳಿಗೆ ಪೂರೈಸುತ್ತದೆ. ಚೀನಾದಿಂದ ಅತಿ ಹೆಚ್ಚು ರಕ್ಷಣಾ ಸಾಮಗ್ರಿ ಖರೀದಿಸುವ ರಾಷ್ಟ್ರಗಳ ಪೈಕಿ ಪಾಕಿಸ್ತಾನ ಮೊದಲ ಸ್ಥಾನದಲ್ಲಿದೆ.