ವೇತನ ಮತ್ತು ಭತ್ಯೆ ದಾನ ಮಾಡಲಿರುವ ವಿಧಾನಪರಿಷತ್ ಸದಸ್ಯ “ಬಿ. ಎಂ. ಫಾರೂಕ್”

0
21

ವಿಧಾನಪರಿಷತ್‌ನ ಶ್ರೀಮಂತ ಸದಸ್ಯರಾಗಿರುವ ಜೆಡಿಎಸ್‌ನ ಬಿ. ಎಂ. ಫಾರೂಕ್ ತಮ್ಮ ವೇತನ ಮತ್ತು ಭತ್ಯೆಯನ್ನು ಅಗತ್ಯವಿರುವ ಬಡರೋಗಿಗಳ ಚಿಕಿತ್ಸೆ ಮತ್ತು ನಿರ್ಗತಿಕ ಮಕ್ಕಳಿಗೆ ನೀಡುವುದಾಗಿ ತಿಳಿಸಿದ್ದಾರೆ.

ಬೆಂಗಳೂರು: ವಿಧಾನಪರಿಷತ್‌ನ ಶ್ರೀಮಂತ ಸದಸ್ಯರಾಗಿರುವ ಜೆಡಿಎಸ್‌ನ ಬಿ. ಎಂ. ಫಾರೂಕ್ ತಮ್ಮ ವೇತನ ಮತ್ತು ಭತ್ಯೆಯನ್ನು ಅಗತ್ಯವಿರುವ ಬಡರೋಗಿಗಳ ಚಿಕಿತ್ಸೆ ಮತ್ತು ನಿರ್ಗತಿಕ ಮಕ್ಕಳಿಗೆ ನೀಡುವುದಾಗಿ ತಿಳಿಸಿದ್ದಾರೆ. 

ಮಂಗಳೂರು ಮೂಲದ ಉದ್ಯಮಿ ಫಾರೂಕ್, ಜೆಡಿಎಸ್‌ನಿಂದ ವಿಧಾನಪರಿಷತ್‌ಗೆ ಆಯ್ಕೆಯಾಗಿದ್ದಾರೆ.ಎಂ.ಎಲ್.ಸಿ ಆಗಿ ಅವರು ಪಡೆಯುವ 1 ಲಕ್ಷ ರೂ. ವೇತನ ಮತ್ತು ಇನ್ನಿತರ ಭತ್ಯೆ ಸಹಿತ ಎಲ್ಲವನ್ನು ಅಗತ್ಯವಿರುವವರಿಗೆ ದಾನಮಾಡಲು ನಿರ್ಧರಿಸಿದ್ದಾರೆ. 

ಈಗಾಗಲೇ ಫಾರೂಕ್ ಅವರ ತಾಯಿ ಆಯೀಷಾ ಹೆಸರಿನಲ್ಲಿ ಅನಾಥಾಶ್ರಮ ನಡೆಸುತ್ತಿದ್ದು, ಬಡಹೆಣ್ಣುಮಕ್ಕಳ ಕಲ್ಯಾಣಕ್ಕೆ ನೆರವಾಗುತ್ತಿದ್ದಾರೆ. ಸಾಧ್ಯಾ ಎಜ್ಯುಕೇಷನ್ ಟ್ರಸ್ಟ್‌ ಅನಾಥಾಶ್ರಮವನ್ನು ನಿರ್ವಹಿಸುತ್ತಿದ್ದು, ಹೆಣ್ಣುಮಕ್ಕಳ ಶಿಕ್ಷಣ, ವಸತಿ, ಆಹಾರ ಮತ್ತಿತರ ಅಗತ್ಯಗಳನ್ನು ನೋಡಿಕೊಳ್ಳುತ್ತಿದೆ. ಜತೆಗೆ ಕ್ಯಾನ್ಸರ್, ಹೃದ್ರೋಗ ಮತ್ತಿತರ ಗಂಭೀರ ಸಮಸ್ಯೆಗೆ ಚಿಕಿತ್ಸೆ, ಔಷಧಕ್ಕೆ ಅಗತ್ಯವಿದ್ದಲ್ಲಿ ಅವರಿಗೆ ಚೆಕ್ ನೀಡಲಾಗುತ್ತದೆ ಎಂದು ಫಾರೂಕ್ ತಿಳಿಸಿದ್ದಾರೆ. 

ರಾಜ್ಯಸಭಾ ಚುನಾವಣೆಗೆ ಸ್ಫರ್ಧಿಸಿದ್ದ ಫಾರೂಕ್, ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಅಫಿಡವಿಟ್ ಪ್ರಕಾರ ಅವರು ಮತ್ತು ಪತ್ನಿ ಒಟ್ಟು 770 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. ಇದೀಗ ಎಂಎಲ್‌ಸಿ ವೇತನ ಮತ್ತು ಭತ್ಯೆಯನ್ನು ಅಶಕ್ತರಿಗೆ ನೀಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.