ವೇತನವನ್ನೆಲ್ಲಾ ಪ್ರಧಾನಿ ಪರಿಹಾರ ನಿಧಿಗೆ ನೀಡಿದ ಸಚಿನ್‌

0
13

ಹಿರಿಯ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌ ಅವರ ರಾಜ್ಯಸಭಾ ಸದಸ್ಯತ್ವ ಅವಧಿ ಇತ್ತೀಚಿಗೆ ಮುಗಿದಿದ್ದು, ಅವರು ಸಂಸದರ ವೇತನ ಹಾಗೂ ಭತ್ಯೆಯನ್ನೆಲ್ಲಾ ಪ್ರಧಾನಿ ಪರಿಹಾರ ನಿಧಿಗೆ ನೀಡಿದ್ದಾರೆ.

ನವದೆಹಲಿ : ಹಿರಿಯ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌ ಅವರ ರಾಜ್ಯಸಭಾ ಸದಸ್ಯತ್ವ ಅವಧಿ ಇತ್ತೀಚಿಗೆ ಮುಗಿದಿದ್ದು, ಅವರು ಸಂಸದರ ವೇತನ ಹಾಗೂ ಭತ್ಯೆಯನ್ನೆಲ್ಲಾ ಪ್ರಧಾನಿ ಪರಿಹಾರ ನಿಧಿಗೆ ನೀಡಿದ್ದಾರೆ.

ಆರು ವರ್ಷದಲ್ಲಿ ತೆಂಡೂಲ್ಕರ್‌ ಅವರು 90 ಲಕ್ಷ ವೇತನ ಹಾಗೂ ಇತರೆ ಮಾಸಿಕ ಭತ್ಯೆ ಪಡೆದಿದ್ದರು.

ಸಚಿನ್‌ ಅವರಿಂದ ವೇತನದ ಹಣ ಪಡೆದಿರುವುದನ್ನು ಪ್ರಧಾನಮಂತ್ರಿ ಕಾರ್ಯಾಲಯ ಕೂಡ ಇತ್ತೀಚೆಗೆ ದೃಢಪಡಿಸಿತ್ತು. ‘ಪ್ರಧಾನಿಯವರು  ಸಚಿನ್‌ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಅವರು ನೀಡಿರುವ ಹಣವು ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ನೆರವಾಗುತ್ತದೆ’ ಎಂದು ಕಾರ್ಯಾಲಯದ ಪತ್ರದಲ್ಲಿ ತಿಳಿಸಲಾಗಿತ್ತು. ‌