ವೇತನದಾರರ ತೆರಿಗೆ ಹೊರೆ ಇಳಿಕೆ(2.5 ಲಕ್ಷದಿಂದ ₹5 ಲಕ್ಷಕ್ಕೆ ಏರಿಕೆ, ಮೌಲ್ಯ ನಿರ್ಧಾರಿತ ಬಾಡಿಗೆ ಮೇಲಿನ ತೆರಿಗೆ ಕಡಿತ)

0
390

ಕೇಂದ್ರ ಸರ್ಕಾರ ಮಧ್ಯಂತರ ಬಜೆಟ್‌ನಲ್ಲಿ ಮಧ್ಯಮವರ್ಗದ ತೆರಿಗೆ ಹೊರೆಯನ್ನು ತಗ್ಗಿಸಿದೆ. ವೈಯಕ್ತಿಕ ಆದಾಯ ತೆರಿಗೆ ಮಿತಿಯನ್ನು ₹2.5 ಲಕ್ಷದಿಂದ ₹ 5 ಲಕ್ಷಕ್ಕೆ ಹೆಚ್ಚಿಸಲಾಗಿದ್ದು, ಮುಂದಿನ ಹಣಕಾಸು ವರ್ಷದಿಂದ ಈ ಪ್ರಯೋಜನ ದೊರೆಯಲಿದೆ.

ನವದೆಹಲಿ (ಪಿಟಿಐ): ಕೇಂದ್ರ ಸರ್ಕಾರ ಮಧ್ಯಂತರ ಬಜೆಟ್‌ನಲ್ಲಿ ಮಧ್ಯಮವರ್ಗದ ತೆರಿಗೆ ಹೊರೆಯನ್ನು ತಗ್ಗಿಸಿದೆ. ವೈಯಕ್ತಿಕ ಆದಾಯ ತೆರಿಗೆ ಮಿತಿಯನ್ನು 2.5 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸಲಾಗಿದ್ದು, ಮುಂದಿನ ಹಣಕಾಸು ವರ್ಷದಿಂದ ಈ ಪ್ರಯೋಜನ ದೊರೆಯಲಿದೆ.

ಈ ನಿರ್ಧಾರದಿಂದ ದೇಶದಲ್ಲಿನ ಅಂದಾಜು 3 ಕೋಟಿಯಷ್ಟು ವೇತನ ವರ್ಗ, ಪಿಂಚಣಿದಾರರು, ಸ್ವ ಉದ್ಯೋಗ ನಡೆಸುತ್ತಿರುವವರು, ಸಣ್ಣ ಉದ್ದಿಮೆ ಹಾಗೂ ಸಣ್ಣ ವರ್ತಕರು, ಹಿರಿಯ ನಾಗರಿಕರಿಗೆ ಮುಂದಿನ  ವರ್ಷಕ್ಕೆ 
18,500 ಕೋಟಿಗಳಷ್ಟು ತೆರಿಗೆ ಉಳಿತಾಯವಾಗಲಿದೆ ಎಂದು ಅಂದಾಜು ಮಾಡಲಾಗಿದೆ.

ತೆರಿಗೆ ಹಂತ ಮತ್ತು ಪ್ರಮಾಣದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.  5 ಲಕ್ಷದಿಂದ  10 ಲಕ್ಷದವರೆಗಿನ ಆದಾಯಕ್ಕೆ ಶೇ 20ರಷ್ಟು, 10 ಲಕ್ಷಕ್ಕಿಂತ ಅಧಿಕ ವರಮಾನಕ್ಕೆ ಶೇ 30ರಷ್ಟು ತೆರಿಗೆಯೇ ಇರಲಿದೆ.

ಯಾವುದಕ್ಕೆಲ್ಲ ವಿನಾಯ್ತಿ: ಬ್ಯಾಂಕ್‌ ಮತ್ತು ಅಂಚೆ ಕಚೇರಿ ಠೇವಣಿಗಳ ಮೇಲೆ ಪಡೆಯುವ ಬಡ್ಡಿ ವರಮಾನಕ್ಕೆ ಇದ್ದ ತೆರಿಗೆ ವಿನಾಯ್ತಿ ಮೊತ್ತವನ್ನು 10 ಸಾವಿರದಿಂದ 40 ಸಾವಿರಕ್ಕೆ ಹೆಚ್ಚಿಸಲಾಗಿದೆ. ಇದರಿಂದ ಸಣ್ಣ ಹೂಡಿಕೆದಾರರು ಮತ್ತು ಗೃಹಿಣಿಯರಿಗೆ ಅನುಕೂಲವಾಗಲಿದೆ.

ತೆರಿಗೆ ಪಾವತಿದಾರರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಮೌಲ್ಯ ನಿರ್ಧಾರಿತ ಬಾಡಿಗೆ ಮೇಲಿನ ತೆರಿಗೆ ಕಡಿತವನ್ನು ಈಗಿರುವ  1.80 ಲಕ್ಷದಿಂದ  2.40 ಲಕ್ಷಕ್ಕೆ ಹೆಚ್ಚಿಸಲುನಿರ್ಧರಿಸಲಾಗಿದೆ.

ಮಾರಾಟವಾಗದೇ ಉಳಿದಿರುವ ವಸತಿ ನಿವೇಶನಗಳಿಗೆ ಎರಡು ವರ್ಷಗಳವರೆಗೆ ತೆರಿಗೆ ವಿನಾಯ್ತಿಯನ್ನು ಪ್ರಸ್ತಾಪಿಸಲಾಗಿದೆ. ಸದ್ಯಕ್ಕೆ ಒಂದು ವರ್ಷದವರೆಗೆ ವಿನಾಯ್ತಿ ಇದೆ.

2020ರ ಮಾರ್ಚ್‌ 31ರವರೆಗೆ ಗೃಹ ಯೋಜನೆಗೆ ಒಪ್ಪಿಗೆ ಪಡೆದಿದ್ದರೆ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80–ಐಬಿಎ ಅಡಿ ತೆರಿಗೆ ಪ್ರಯೋಜನ ಸಿಗಲಿದೆ.

‘ಆದಾಯ ತೆರಿಗೆ ಬಗ್ಗೆ ಸಾಕಷ್ಟು ಜನರಿಗೆ ಗೊಂದಲ ಉಂಟಾಗಿದೆ. ಇಲ್ಲಿ ಒಂದು ಮಾತು ನೆನಪಿನಲ್ಲಿಡಿ.   ಬಜೆಟ್‌ನಲ್ಲಿ ತೆರಿಗೆ ವಿನಾಯ್ತಿ ನೀಡಲಾಗಿದೆಯೇ ಹೊರತು ತೆರಿಗೆ ಮಿತಿಗಳನ್ನು ಬದಲಾಯಿಸಿಲ್ಲ. ಇದರಂತೆ 5 ಲಕ್ಷ ವರೆಗಿನ ನಿವ್ವಳ ಆದಾಯ ಹೊಂದಿರುವವರು ಯಾವುದೇ ತೆರಿಗೆ ಪಾವತಿಸಬೇಕಿಲ್ಲ. 5 ಲಕ್ಷಕ್ಕಿಂತ ಹೆಚ್ಚು ನಿವ್ವಳ ಆದಾಯ ಹೊಂದಿದ್ದರೆ ತೆರಿಗೆ ಪಾವತಿಸಬೇಕಾಗುತ್ತದೆ.  5 ಲಕ್ಷದ ವರೆಗಿನ ಆದಾಯ ಹೊಂದಿರುವವರಿಗೆ ತೆರಿಗೆ ವಿನಾಯ್ತಿ ನೀಡುವುದರಿಂದ  12,500 ತೆರಿಗೆ ಉಳಿತಾಯವಾಗಲಿದೆ.  5 ಲಕ್ಷದ ವರೆಗಿನ ಆದಾಯದ ಜತೆಗೆ 50 ಸಾವಿರದ ಸ್ಟ್ಯಾಂಡರ್ಡ್ ಡಿಡಕ್ಷನ್ , ಸೆಕ್ಷನ್ 80 ಸಿ ಅಡಿಯಲ್ಲಿ  1.5 ಲಕ್ಷ, 80 ಡಿ ಅಡಿಯಲ್ಲಿ ಆರೋಗ್ಯ ವಿಮೆಯ ಲಾಭ, ಸೆಕ್ಷನ್ 80 ಸಿಸಿಡಿ ( 1 ಬಿ) ಅಡಿಯಲ್ಲಿ ರಾಷ್ಟ್ರೀಯ ಪಿಂಚಣಿ ಯೋಜನೆ ಅಡಿಯಲ್ಲಿ 50 ಸಾವಿರ ವಿನಾಯ್ತಿ, ಗೃಹ ಸಾಲದ ಬಡ್ಡಿ ಮೇಲೆ ವಿನಾಯ್ತಿ ಸಿಗಲಿದೆ.  5 ಲಕ್ಷ ಮೇಲ್ಪಟ್ಟು ಆದಾಯ ಇರುವವರಿಗೆ ಈ ಹಿಂದೆ ಇದ್ದ ತೆರಿಗೆ ಮಿತಿಗಳು ಮುಂದುವರಿಯಲಿದೆ.

ಬಾಡಿಗೆ ಮನೆಗೆ ವಿನಾಯ್ತಿ

ಒಂದಕ್ಕಿಂತ ಹೆಚ್ಚು ಮನೆಗಳಲ್ಲಿ ವಾಸವಿದ್ದರೆ, ಅಂದರೆ ಕುಟುಂಬ ಒಂದು ಕಡೆ ನೆಲೆಸಿದ್ದು, ಯಜಮಾನ ಕೆಲಸಕ್ಕಾಗಿ ಬೇರೆ ಕಡೆ ಮನೆ ಮಾಡಿದ್ದರೆ ಎರಡೂ ಮನೆಗೂ ಬಾಡಿಗೆ ಮೇಲಿನ ತೆರಿಗೆಯಿಂದ ವಿನಾಯ್ತಿ ಸಿಗಲಿದೆ.

ಸ್ಥಿರಾಸ್ತಿ ಮಾರಾಟದಿಂದ ಬರುವ   2 ಕೋಟಿ ಬಂಡವಾಳ ಗಳಿಕೆಯನ್ನು ಎರಡು ಮನೆಗಳ ಖರೀದಿಗೆ ಹೂಡಿಕೆ ಮಾಡಬಹುದು. ಒಬ್ಬ ವ್ಯಕ್ತಿ ತನ್ನ ಜೀವಮಾನದಲ್ಲಿ ಒಂದು ಬಾರಿಗೆ ಮಾತ್ರ ಇದರ ಪ್ರಯೋಜನ ಪಡೆದುಕೊಳ್ಳಬಹುದು.