‘ವೆಟರನ್ ಪಿನ್’ ಪ್ರಶಸ್ತಿ ಸಂಭ್ರಮದಲ್ಲಿ ವೇಗದ ರಾಣಿ “ಪಿ.ಟಿ.ಉಷಾ”

0
54

ಅಂತರರಾಷ್ಟ್ರೀಯ ಅಥ್ಲೆಟಿಕ್ಸ್ ಫೆಡರೇಷನ್‌ (ಐಎಎಎಫ್‌) ನೀಡುವ ‘ವೆಟರನ್ ಪಿನ್’ ಪ್ರಶಸ್ತಿಗೆ ‘ಟ್ರ್ಯಾಕ್‌ ಮತ್ತು ಫೀಲ್ಡ್‌ನ ರಾಣಿ’, ‘ಪಯ್ಯೋಳಿ ಎಕ್ಸ್‌ಪ್ರೆಸ್’ ಎಂದೇ ಖ್ಯಾತರಾಗಿರುವ ಪಿ.ಟಿ.ಉಷಾ ಅವರು ಪಾತ್ರರಾಗಿದ್ದಾರೆ.

ಬೆಂಗಳೂರು: ಅಂತರರಾಷ್ಟ್ರೀಯ ಅಥ್ಲೆಟಿಕ್ಸ್ ಫೆಡರೇಷನ್‌ (ಐಎಎಎಫ್‌) ನೀಡುವ ‘ವೆಟರನ್ ಪಿನ್’ ಪ್ರಶಸ್ತಿಗೆ ‘ಟ್ರ್ಯಾಕ್‌ ಮತ್ತು ಫೀಲ್ಡ್‌ನ ರಾಣಿ’, ‘ಪಯ್ಯೋಳಿ ಎಕ್ಸ್‌ಪ್ರೆಸ್’ ಎಂದೇ ಖ್ಯಾತರಾಗಿರುವ ಪಿ.ಟಿ.ಉಷಾ ಅವರು ಪಾತ್ರರಾಗಿದ್ದಾರೆ.

ಮಿಂಚಿನ ಓಟಗಾರ್ತಿ: ಭಾರತದ ಟ್ರ್ಯಾಕ್ ಮತ್ತು ಫೀಲ್ಡ್‌ನಲ್ಲಿ ಮಿಂಚಿದ್ದ ಉಷಾ 1985ರಲ್ಲಿ ಜಕಾರ್ತದಲ್ಲಿ ನಡೆದಿದ್ದ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿ ಯನ್‌ಷಿಪ್‌ನಲ್ಲಿ 100, 200, 400 ಮೀಟರ್ಸ್ ಓಟ, 400 ಮೀಟರ್ಸ್ ಹರ್ಡಲ್ಸ್ ಮತ್ತು 4×400 ಮೀಟರ್ಸ್ ರಿಲೇಯಲ್ಲಿ ಚಿನ್ನ ಗೆದ್ದಿದ್ದರು. ಮುಂದಿನ ವರ್ಷ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ನಾಲ್ಕು ಚಿನ್ನ ಗಳಿಸಿದ್ದರು. 1984ರ ಒಲಿಂಪಿಕ್ಸ್‌ನ 400 ಮೀಟರ್ಸ್ ಹರ್ಡಲ್ಸ್‌ನಲ್ಲಿ 100ನೇ ಒಂದು ಸೆಕೆಂಡು ಅಂತರದಲ್ಲಿ ಕಂಚಿನ ಪದಕ ಕಳೆದುಕೊಂಡಿದ್ದರು.

ವೆಟರನ್ ಪಿನ್ ಪ್ರಶಸ್ತಿಯನ್ನು ಎರಡು ವರ್ಷಗಳಿಗೊಮ್ಮೆ ನೀಡಲಾಗುತ್ತಿದೆ. ಸೆಪ್ಟೆಂಬರ್‌ನಲ್ಲಿ ಖತಾರ್‌ನಲ್ಲಿ ನಡೆ ಯಲಿರುವ ಐಎಎಎಫ್‌ನ 52ನೇ ಸಮಾವೇಶದಲ್ಲಿ ಈ ಬಾರಿಯ ಪ್ರಶಸ್ತಿ ಪ್ರದಾನ ನಡೆಯಲಿದೆ.

ಕೇರಳದ ಪ್ರತಿಭೆಗಳು

ಈ ಪ್ರಶಸ್ತಿಗೆ ಭಾಜನರಾದ ಭಾರತದ ಇಬ್ಬರೂ ಉತ್ತರ ಕೇರಳದ ಅಥ್ಲೀಟ್‌ಗಳು. 2011ರಲ್ಲಿ ಸಿ.ಕೆ.ವಲ್ಸನ್ ಅವರಿಗೆ ಈ ಪ್ರಶಸ್ತಿ ಸಂದಿತ್ತು. ಅವರು ಈ ಗೌರವಕ್ಕೆ ಪಾತ್ರರಾದ ಮೊದಲ ಭಾರತೀಯ ಅಥ್ಲೀಟ್ ಆಗಿದ್ದರು. ಕಣ್ಣೂರು ಜಿಲ್ಲೆಯ ಮಾಹೆ ಇವರ ಊರು. ಸಮೀಪದ ಜಿಲ್ಲೆಯಾದ ಕೋಯಿಕ್ಕೋಡ್‌ನ ಪಯ್ಯೋಳಿ ಪಿ.ಟಿ.ಉಷಾ ಊರು. ಜಿಲ್ಲೆಯ ಗುಡ್ಡ–ಬೆಟ್ಟಗಳಿಂದೊಡಗೂಡಿದ ಕಿನಾಲೂರಿನ ಬಾಲುಶ್ಶೇರಿಯಲ್ಲಿ ಉಷಾ ಅವರು ಅಥ್ಲೆಟಿಕ್ ಸ್ಕೂಲ್ ನಡೆಸುತ್ತಿದ್ದಾರೆ.