ವಿಷಯ ಪರಿಶೀಲನೆಗೆ ಸ್ವತಂತ್ರ ಘಟಕ ರಚನೆ :ಸಾಮಾಜಿಕ ಜಾಲತಾಣ “ಫೇಸ್‌ಬುಕ್‌” ಘೋಷಣೆ

0
221

ಪ್ರಮುಖ ಸಾಮಾಜಿಕ ಜಾಲತಾಣ ಫೇಸ್‌ಬುಕ್‌, ಬಳಕೆದಾರರು ಪೋಸ್ಟ್‌ ಮಾಡುವ ವಿಷಯ ಪರಿಶೀಲನೆಗಾಗಿ ಸ್ವತಂತ್ರ ಘಟಕವೊಂದನ್ನು ರಚಿಸುವುದಾಗಿ ಘೋಷಿಸಿದೆ.

ಸ್ಯಾನ್‌ ಫ್ರಾನ್ಸಿಸ್ಕೊ (ಎಎಫ್‌ಪಿ): ಪ್ರಮುಖ ಸಾಮಾಜಿಕ ಜಾಲತಾಣ ಫೇಸ್‌ಬುಕ್‌, ಬಳಕೆದಾರರು ಪೋಸ್ಟ್‌ ಮಾಡುವ ವಿಷಯ ಪರಿಶೀಲನೆಗಾಗಿ ಸ್ವತಂತ್ರ ಘಟಕವೊಂದನ್ನು ರಚಿಸುವುದಾಗಿ ಘೋಷಿಸಿದೆ.

ಫೇಸ್‌ಬುಕ್‌ನಲ್ಲಿ ಪ್ರಚೋದನಕಾರಿ, ದ್ವೇಷ ಬಿತ್ತುವ, ಅಸಂಬದ್ಧ ಹಾಗೂ ಅವಹೇಳನಕಾರಿ ವಿಷಯಗಳನ್ನು ಪೋಸ್ಟ್‌ ಮಾಡುತ್ತಿರುವ ಬಗ್ಗೆ ಹಲವಾರು ರಾಷ್ಟ್ರಗಳಿಂದ ದೂರುಗಳು ಕೇಳಿ ಬಂದಿದ್ದವು. ಇಂತಹ ವಿಷಯಗಳನ್ನು ಪೋಸ್ಟ್‌ ಮಾಡುವುದರ ಮೇಲೆ ನಿಷೇಧ ಹೇರಬೇಕು ಎಂಬ ಒತ್ತಡವೂ ಹೆಚ್ಚಿದ ಕಾರಣ, ಫೇಸ್‌ಬುಕ್‌ ಈ ಕ್ರಮಕ್ಕೆ ಮುಂದಾಗಿದೆ.

‘ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಸುರಕ್ಷಿತತೆ ಬಗ್ಗೆ ನಾವು ನಮ್ಮಷ್ಟಕ್ಕೇ ತರಹೇವಾರಿ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು ಎಂಬ ನಂಬಿಕೆ ನನ್ನದು’ ಎಂದು ಫೇಸ್‌ಬುಕ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಾರ್ಕ್‌ ಝುಕರ್‌ಬರ್ಗ್‌ ಹೇಳಿದ್ದಾರೆ.

‘ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಲಾಗುವ ವಿಷಯಗಳಲ್ಲಿ ಯಾವುದನ್ನು ಕೂಡಲೇ ತೆಗೆದು ಹಾಕಲಾಗುವುದು’ ಎಂದೂ ಅವರು ಹೇಳಿದ್ದಾರೆ.

ಜನರ ಧ್ವನಿಯಾಗುವುದು ಹಾಗೂ ಅವರ ಸುರಕ್ಷತೆ ವಿಷಯದಲ್ಲಿ ಸಮತೋಲನ ಕಾಪಾಡಿಕೊಳ್ಳುವುದು ಮುಖ್ಯ ಎಂದು ಮಾರ್ಕ್‌ ಝುಕರ್‌ಬರ್ಗ್‌ ಹೇಳಿದ್ದಾರೆ.