ವಿಶ್ವ ಹೂಡಿಕೆ ವರದಿ: ಭಾರತದಲ್ಲಿ ತಗ್ಗಿದ ಎಫ್‌ಡಿಐ ಒಳಹರಿವು ಪ್ರಮಾಣ

0
29

2016ರಲ್ಲಿ ₹ 2.94 ಲಕ್ಷ ಕೋಟಿ ಮೌಲ್ಯದ ಎಫ್‌ಡಿಐ ಹೂಡಿಕೆಯಾಗಿತ್ತು. ಇದು 2017ರಲ್ಲಿ ₹ 2.68 ಲಕ್ಷ ಕೋಟಿಗೆ ಇಳಿಕೆಯಾಗಿದೆ ಎಂದು ವಿಶ್ವಸಂಸ್ಥೆಯು ಬಿಡುಗಡೆ ಮಾಡಿರುವ 2018ರ ವಿಶ್ವ ಹೂಡಿಕೆ ವರದಿಯಲ್ಲಿ ಮಾಹಿತಿ ನೀಡಲಾಗಿದೆ.

ವಿಶ್ವಸಂಸ್ಥೆ: ಭಾರತದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯು (ಎಫ್‌ಡಿಐ) ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ ಎಂದು ವಿಶ್ವಸಂಸ್ಥೆಯ ವರದಿ ತಿಳಿಸಿದೆ.

2016ರಲ್ಲಿ 2.94 ಲಕ್ಷ ಕೋಟಿ ಮೌಲ್ಯದ ಎಫ್‌ಡಿಐ ಹೂಡಿಕೆಯಾಗಿತ್ತು. ಇದು 2017ರಲ್ಲಿ 2.68 ಲಕ್ಷ ಕೋಟಿಗೆ ಇಳಿಕೆಯಾಗಿದೆ ಎಂದು ವಿಶ್ವಸಂಸ್ಥೆಯು ಬಿಡುಗಡೆ ಮಾಡಿರುವ 2018ರ ವಿಶ್ವ ಹೂಡಿಕೆ ವರದಿಯಲ್ಲಿ ಮಾಹಿತಿ ನೀಡಲಾಗಿದೆ.

‘ಎಫ್‌ಡಿಐ ಇಳಿಕೆ ಮತ್ತು ಜಾಗತಿಕ ಮೊತ್ತದಲ್ಲಿನ ಇಳಿಕೆಯು ನೀತಿ ರೂಪಿಸುವವರಿಗೆ ಅದರಲ್ಲೂ ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ’  ಎಂದು ಯುಎನ್‌ಸಿಟಿಎಡಿಯ ಪ್ರಧಾನ ಕಾರ್ಯದರ್ಶಿ ಮುಖಿಸಾ ಕಿಟುಯಿ ಹೇಳಿದ್ದಾರೆ.

‘ಅಮೆರಿಕದ ತೆರಿಗೆ ಸುಧಾರಣೆ ನೀತಿಯಿಂದಾಗಿ ಭವಿಷ್ಯದಲ್ಲಿ ಜಾಗತಿಕ ಮಟ್ಟದಲ್ಲಿ ಹೂಡಿಕೆ ತಗ್ಗುವ ಸಾಧ್ಯತೆ ಇದೆ. ಆಧುನಿಕ ಕೈಗಾರಿಕಾ ನೀತಿಗಳು ವೈವಿಧ್ಯ ಮತ್ತು ಸಂಕೀರ್ಣವಾಗಿರುವುದರಿಂದ ಗಡಿಯಾಚೆಗಿನ ಹೂಡಿಕೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿವೆ’ ಎಂದೂ ಹೇಳಿದ್ದಾರೆ.