ವಿಶ್ವ ಸ್ನೂಕರ್ ಚಾಂಪಿಯನ್‌ಶಿಪ್‌ ನಲ್ಲಿ ಕರ್ನಾಟಕದ ಕೀರ್ತನಾಗೆ ಚಿನ್ನದ ಪದಕ

0
489

ಚಿನ್ನದ ಊರಿನ ಹುಡುಗಿಯ ಚೆಂದದ ಸಾಧನೆ. ಕೋಲಾರದ ಕೆ.ಪಾಂಡ್ಯನ್‌ ಮತ್ತು ಜಯಲಕ್ಷ್ಮಿ ದಂಪತಿಯ ಮಗಳಾದ ಕೀರ್ತನಾ ರಷ್ಯಾದಲ್ಲಿ ಇತ್ತೀಚೆಗೆ ನಡೆದ 16 ವರ್ಷದೊಳಗಿನವರ ವಿಶ್ವ ಸ್ನೂಕರ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗಳಿಸಿದ್ದಾರೆ.

ಚಿನ್ನದ ಊರಿನ ಹುಡುಗಿಯ ಚೆಂದದ ಸಾಧನೆ. ಕೋಲಾರದ ಕೆ.ಪಾಂಡ್ಯನ್‌ ಮತ್ತು ಜಯಲಕ್ಷ್ಮಿ ದಂಪತಿಯ ಮಗಳಾದ ಕೀರ್ತನಾ ರಷ್ಯಾದಲ್ಲಿ ಇತ್ತೀಚೆಗೆ ನಡೆದ 16 ವರ್ಷದೊಳಗಿನವರ ವಿಶ್ವ ಸ್ನೂಕರ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗಳಿಸಿದ್ದಾರೆ.

ಈ ಪಂದ್ಯಾವಳಿಯಲ್ಲಿ 24 ದೇಶಗಳ ಕ್ರೀಡಾಪಟುಗಳು ಭಾಗವಹಿಸಿದ್ದರು.7ನೇ ತರಗತಿ  ಓದುತ್ತಿದ್ದಾಗ ಸ್ನೂಕರ್‌ ಅಭ್ಯಾಸ ಆರಂಭಿಸಿದರು. ಬೆಂಗಳೂರಿನ ಬಿಲಿಯರ್ಡ್ಸ್‌ ಸಂಸ್ಥೆಯಲ್ಲಿ ರವೀಂದ್ರನಾಥ್ ಬಳಿ ತರಬೇತಿ ಪಡೆದರು. ರಾಷ್ಟ್ರೀಯ ಸ್ನೂಕರ್ ಚಾಂಪಿಯನ್‌ಶಿಪ್‌ನಲ್ಲಿ 3 ಚಿನ್ನ,1 ಬೆಳ್ಳಿ ಪದಕ ಗಳಿಸಿದ್ದಾರೆ.

2017ರಲ್ಲಿ ಪುಣೆಯಲ್ಲಿ ನಡೆದಿದ್ದ ರಾಷ್ಟ್ರೀಯ ಬಿಲಿಯರ್ಡ್ಸ್‌ ಸಬ್‌ ಜೂನಿಯರ್‌ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಪಡೆದಿದ್ದರೆ. ಅದಕ್ಕೂ ಮೊದಲು ಚೀನಾದಲ್ಲಿ ನಡೆದ ವಿಶ್ವ ಜೂನಿಯರ್‌ ಸ್ನೂಕರ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಪಡೆದು ಗಮನ ಸೆಳೆದಿದ್ದರು. ರಾಷ್ಟ್ರ ಮಟ್ಟದಲ್ಲಿ 8ನೇ ರ್‍ಯಾಂಕಿಂಗ್‌ ಮತ್ತು ಅಂತರರಾಷ್ಟ್ರೀಯ ಮಟ್ಟದ ಜೂನಿಯರ್‌ ವಿಭಾಗದಲ್ಲಿ 1ನೇ ರ್‍ಯಾಂಕಿಂಗ್‌ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.