ವಿಶ್ವ ಶ್ರೀಮಂತರ ಪಟ್ಟಿಯಿಂದ ನೀರವ್ ಮೋದಿ ಕೈ ಬಿಟ್ಟ ಪೋರ್ಬ್ಸ್

0
40

ಪೋರ್ಬ್ಸ್ ನಿಯತಕಾಲಿಕೆ ಈ ವರ್ಷದ ವಿಶ್ವ ಶ್ರೀಮಂತರ ಪಟ್ಟಿಯನ್ನು ಪ್ರಕಟಿಸಿದೆ. ಅಮೆಜಾನ್ ಸಿಇ ಒ ಜೆಪ್ ಬೆಜೊಸ್ 100 ಬಿಲಿಯನ್ ಡಾಲರ್ ಆಸ್ತಿ ಹೊಂದುವ ಮೂಲಕ ಪ್ರಪಂಚದ ಮೊದಲ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದಾರೆ.

ಮೈಕ್ರೋಸಾಪ್ಟ್  ಸಹ ಸಂಸ್ಥಾಪಕ 90 ಬಿಲಿಯನ್ ಸಂಪತ್ತು  ಹೊಂದುವ ಮೂಲಕ ಪೋರ್ಬ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ.  ವಾರೆನ್ ಬಪೆಟ್  84 ಬಿಲಿಯನ್ ಡಾಲರ್ ಆಸ್ತಿಪಾಸ್ತಿ ಹೊಂದುವ ಮೂಲಕ ವಿಶ್ವದ ಮೂರನೇ ಶ್ರೀಮಂತನ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.  40.1 ಬಿಲಿಯನ್ ಡಾಲರ್  ಸಂಪತ್ತು ಹೊಂದಿರುವ ಭಾರತದ ಮುಖೇಶ್ ಅಂಬಾನಿ 19 ನೇ ಸ್ಥಾನದಲ್ಲಿದ್ದಾರೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದ ಪ್ರಮುಖ ಆರೋಪಿ ನೀರವ್ ಮೋದಿ ಹೆಸರನ್ನು ಭಾರತದ ಶ್ರೀಮಂತರ ಹೆಸರಿನಿಂದ ಕೈ ಬಿಡಲಾಗಿದೆ. 2017ರಲ್ಲಿ 1.8 ಬಿಲಿಯನ್ ಡಾಲರ್ ಆಸ್ತಿಪಾಸ್ತಿ ಹೊಂದುವ ಮೂಲಕ ಶ್ರೀಮಂತರ ಪಟ್ಟಿಯಲ್ಲಿದ್ದರು. ಆದರೆ. ಈ ಬಾರಿ ಆ ಸ್ಥಾನ ಕಳೆದುಕೊಂಡಿದ್ದಾರೆ.

ಪಾಪ ಜಾನ್ಸ್ ಪಿಜ್ಜಾ ಸ್ಛಾಪಕ ಜಾನ್ ಸ್ಕಾನಾಟರ್, ದಕ್ಷಿಣ ಆಫ್ರಿಕಾದ ಕ್ರಿಸ್ಟೋಪೆಲ್ ವೈಯಿಸ್, ಮತ್ತು ಸೌದಿ ಅರಬೀಯಾದ ಪ್ರಿನ್ಸ್ ಅಲ್ವಾಲೀದ್ ಬಿನ್ ತಲಾಲ್ ಅಲ್ ಸೌದ್  ಸೇರಿದಂತೆ  ಭಾರತದ ನೀರವ್ ಮೋದಿಯನ್ನು ಈ ಬಾರಿಯ ವಿಶ್ವ ಶ್ರೀಮಂತರ ಪಟ್ಟಿಯಿಂದ ಪೋರ್ಬ್ ನಿಯತಕಾಲಿಕೆ ಕೈ ಬಿಟ್ಟಿದೆ.

ಕಳೆದ ವರ್ಷದಲ್ಲಿ ಭಾರತೀಯ ಶ್ರೀಮಂತರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಭಾರತದಲ್ಲಿ 119 ಶ್ರೀಮಂತರಿದ್ದಾರೆ. ಕಳೆದ ವರ್ಷಕ್ಕಿಂತ  ಈ ಬಾರಿ 18 ಶ್ರೀಮಂತರ ಸಂಖ್ಯೆ ಜಾಸ್ತಿಯಾಗಿದೆ. ಒಟ್ಟಾರೇ ಆಸ್ತಿ ಪಾಸ್ತಿ ಮೌಲ್ಯ 440 ಬಿಲಿಯನ್ ಅಮೆರಿಕನ್ ಡಾಲರ್ ಆಗಿದೆ. ಕಳೆದ ವರ್ಷವೊಂದರಲ್ಲೇ 114.6 ಬಿಲಿಯನ್ ಡಾಲರ್ ಹೆಚ್ಚಾಗಿದೆ ಎಂದು ಪೋರ್ಬ್ಸ್ ನಿಯತಕಾಲಿಕೆ ತಿಳಿಸಿದೆ.

ಈ ವರ್ಷದಲ್ಲಿ 2.043 ವಿಶ್ವ ಶ್ರೀಮಂತರು ಸ್ಥಾನ ಪಡೆದಿದ್ದಾರೆ. ಇವರೆಲ್ಲರ ಒಟ್ಟಾರೇ ಆಸ್ತಿಪಾಸ್ತಿ ಮೌಲ್ಯ 9.1 ಟ್ರಿಲಿಯನ್ ಡಾಲರ್ ಆಗಿದ್ದು, ಕಳೆದ ವರ್ಷಕ್ಕಿಂತ ಶೇ.18 ರಷ್ಟು ಹೆಚ್ಚಳಗೊಂಡಿದೆ ಎಂದು ಪೋರ್ಬ್ಸ್ ತಿಳಿಸಿದೆ.