ವಿಶ್ವ ರ‍್ಯಾಂಕಿಂಗ್‌ ಪಟ್ಟಿ: ಎರಡನೇ ಸ್ಥಾನಕ್ಕೇರಿದ ಕ್ವಿಟೋವಾ

0
15

ಜೆಕ್‌ ಗಣರಾಜ್ಯದ ಟೆನಿಸ್‌ ಆಟಗಾರ್ತಿ ಪೆಟ್ರಾ ಕ್ವಿಟೋವಾ, ಏಪ್ರೀಲ್ 28 ರ ಸೋಮವಾರ ಬಿಡುಗಡೆಯಾಗಿರುವ ಮಹಿಳಾ ಸಿಂಗಲ್ಸ್‌ ವಿಭಾಗದ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ.

ಪ್ಯಾರಿಸ್‌ (ಎಎಫ್‌ಪಿ): ಜೆಕ್‌ ಗಣರಾಜ್ಯದ ಟೆನಿಸ್‌ ಆಟಗಾರ್ತಿ ಪೆಟ್ರಾ ಕ್ವಿಟೋವಾ, ಏಪ್ರೀಲ್ 28 ರ ಸೋಮವಾರ ಬಿಡುಗಡೆಯಾಗಿರುವ ಮಹಿಳಾ ಸಿಂಗಲ್ಸ್‌ ವಿಭಾಗದ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ.

ಭಾನುವಾರ ನಡೆದಿದ್ದ ಸ್ಟಟ್‌ಗರ್ಟ್‌ ಓಪನ್‌ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದ ಕ್ವಿಟೋವಾ ಅವರು ರುಮೇನಿಯಾದ ಸಿಮೊನಾ ಹಲೆಪ್‌ ಅವರನ್ನು ಹಿಂದಿಕ್ಕಿದ್ದಾರೆ.

ಕ್ವಿಟೋವಾ ಖಾತೆಯಲ್ಲಿ ಒಟ್ಟು 6,015 ಪಾಯಿಂಟ್ಸ್‌ ಇದೆ. ಹಲೆಪ್‌ ಅವರು 5,682 ಪಾಯಿಂಟ್ಸ್‌ ಹೊಂದಿ
ದ್ದಾರೆ. ಜಪಾನ್‌ನ ನವೊಮಿ ಒಸಾಕ ಅಗ್ರಸ್ಥಾನ ಉಳಿಸಿಕೊಂಡಿದ್ದಾರೆ. ಅವರು 6,151 ಪಾಯಿಂಟ್ಸ್‌ ಗಳಿಸಿದ್ದಾರೆ.

ಜರ್ಮನಿಯ ಏಂಜಲಿಕ್‌ ಕೆರ್ಬರ್‌, ಜೆಕ್‌ ಗಣರಾಜ್ಯದ ಕ್ಯಾರೋಲಿನಾ ಪ್ಲಿಸ್ಕೋವಾ, ಉಕ್ರೇನ್‌ನ ಎಲಿನಾ ಸ್ವಿಟೋಲಿನಾ, ನೆದರ್ಲೆಂಡ್ಸ್‌ನ ಕಿಕಿ ಬರ್ಟೆನ್ಸ್‌, ಅಮೆರಿಕದ ಸ್ಲೋನ್‌ ಸ್ಟೀಫನ್ಸ್‌, ಆಸ್ಟ್ರೇಲಿಯಾದ ಆ್ಯಷ್ಲೆ ಬಾರ್ಟಿ ಮತ್ತು ಬೆಲಾರಸ್‌ನ ಅರಿನಾ ಸಬಲೆಂಕಾ ಅವರು ಕ್ರಮವಾಗಿ ನಾಲ್ಕರಿಂದ ಹತ್ತನೇ ಸ್ಥಾನಗಳಲ್ಲಿದ್ದಾರೆ.

ಅಮೆರಿಕದ ಸೆರೆನಾ ವಿಲಿಯಮ್ಸ್‌ 11ನೇ ಸ್ಥಾನ ಹೊಂದಿದ್ದಾರೆ. ಅವರು 3,461 ಪಾಯಿಂಟ್ಸ್‌ ಸಂಗ್ರಹಿಸಿ
ದ್ದಾರೆ. ಸ್ಪೇನ್‌ನ ಗಾರ್ಬೈನ್‌ ಮುಗುರುಜಾ ಒಂದು ಸ್ಥಾನ ಕಳೆದುಕೊಂಡಿದ್ದು, 20ಕ್ಕೆ ಇಳಿದಿದ್ದಾರೆ.

ಪುರುಷರ ಸಿಂಗಲ್ಸ್‌ನಲ್ಲಿ ಸರ್ಬಿಯಾದ ನೊವಾಕ್‌ ಜೊಕೊವಿಚ್‌ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಸ್ಪೇನ್‌ನ ರಫೆಲ್‌ ನಡಾಲ್‌, ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್‌ ಮತ್ತು ಸ್ವಿಟ್ಜರ್‌ಲೆಂಡ್‌ನ ರೋಜರ್‌ ಫೆಡರರ್‌ ಅವರು ಕ್ರಮವಾಗಿ ಎರಡರಿಂದ ನಾಲ್ಕನೇ ಸ್ಥಾನಗಳಲ್ಲಿದ್ದಾರೆ.