ವಿಶ್ವ ಯೂತ್‌ ಚೆಸ್‌ ಚಾಂಪಿಯನ್‌ಷಿಪ್‌: ಭಾರತದ ಪ್ರಗ್ನಾನಂದಗೆ ಸ್ವರ್ಣ ಸಂಭ್ರಮ

0
9

ಭಾರತದ ಆರ್‌.ಪ್ರಗ್ನಾನಂದ, ವಿಶ್ವ ಯೂತ್‌ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ಅಕ್ಟೋಬರ್ 12 ರ ಶನಿವಾರ ಚಿನ್ನದ ಪದಕ ಗೆದ್ದರು. 18 ವರ್ಷದೊಳಗಿನವರ ವಿಭಾಗದಲ್ಲಿ ಅವರು ಈ ಸಾಧನೆ ಮಾಡಿದರು.

ಮುಂಬೈ: ಭಾರತದ ಆರ್‌.ಪ್ರಗ್ನಾನಂದ, ವಿಶ್ವ ಯೂತ್‌ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ಅಕ್ಟೋಬರ್ 12 ರ  ಶನಿವಾರ ಚಿನ್ನದ ಪದಕ ಗೆದ್ದರು. 18 ವರ್ಷದೊಳಗಿನವರ ವಿಭಾಗದಲ್ಲಿ ಅವರು ಈ ಸಾಧನೆ ಮಾಡಿದರು. ಚಾಂಪಿ ಯನ್‌ಷಿಪ್‌ನಲ್ಲಿ ಭಾರತಕ್ಕೆ ಒಟ್ಟು ಏಳು ಪದಕಗಳು (ಒಂದು ಚಿನ್ನ, 3 ಬೆಳ್ಳಿ, ಮೂರು ಕಂಚು) ಒಲಿದವು. 

14 ವರ್ಷದ ಚೆನ್ನೈನ ಗ್ರ್ಯಾಂಡ್‌ ಮಾಸ್ಟರ್‌ ಪ್ರಗ್ನಾನಂದ, 11ನೇ ಹಾಗೂ ಕೊನೆಯ ಸುತ್ತಿನಲ್ಲಿ ಜರ್ಮನಿಯ ವ್ಯಾಲೆಂಟಿನ್‌ ಬಕಲ್ಸ್ ಎದುರು ಡ್ರಾ ಸಾಧಿಸಿದರು. ಒಟ್ಟು 9 ಪಾಯಿಂಟ್ಸ್ ಗಳಿಸಿದರು.

14 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಡಬ್ಲ್ಯೂಐಎಂ ದಿವ್ಯಾ ದೇಶಮುಖ್‌ ಬೆಳ್ಳಿ ಹಾಗೂ ರಕ್ಷಿತಾ ರವಿ ಕಂಚಿನ ಪದಕ ಗೆದ್ದರು. 14 ವರ್ಷದೊಳಗಿನವರ ಮುಕ್ತ ವಿಭಾಗದಲ್ಲಿ ಎಫ್‌ಎಂ ಎಲ್‌. ಆರ್‌. ಶ್ರೀಹರಿ ಬೆಳ್ಳಿ ಹಾಗೂ ಶ್ರೀಶವಾನ್‌ ಮರಲಕ್ಷಿಕಾರಿ ಕಂಚು ತಮ್ಮದಾಗಿಸಿಕೊಂಡರು. 16 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ವಂತಿಕಾ ಅಗರವಾಲ್‌ ಬೆಳ್ಳಿ ಪದಕ ಜಯಿಸಿದರು. 

ಮತ್ತೊಂದು ಕಂಚಿನ ಪದಕ 16 ವರ್ಷದೊಳಗಿನವರ ಮುಕ್ತ ವಿಭಾಗದಲ್ಲಿ ಸಿಎಮ್‌ ಅರಣ್ಯಕ ಘೋಷ್‌ ಗೆದ್ದರು.