ವಿಶ್ವ ಮಿಲಿಟರಿ ಕ್ರೀಡಾಕೂಟ : ಭಾರತದ ಆನಂದನ್‌ ಗುಣಶೇಖರನ್‌ ಗೆ ಚಿನ್ನ ‘ಡಬಲ್‌’

0
19

ಭಾರತದ ಪ್ಯಾರಾ ಅಥ್ಲೀಟ್‌ ಆನಂದನ್‌ ಗುಣಶೇಖರನ್‌ ಅವರು ವಿಶ್ವ ಮಿಲಿಟರಿ ಕ್ರೀಡಾಕೂಟದಲ್ಲಿ ಅಕ್ಟೋಬರ್ 22 ರ ಮಂಗಳವಾರ ಎರಡು ಚಿನ್ನದ ಪದಕಗಳಿಗೆ ಮುತ್ತಿಕ್ಕಿದ್ದಾರೆ.

ವುಹಾನ್‌, ಚೀನಾ (ಪಿಟಿಐ): ಭಾರತದ ಪ್ಯಾರಾ ಅಥ್ಲೀಟ್‌ ಆನಂದನ್‌ ಗುಣಶೇಖರನ್‌ ಅವರು ವಿಶ್ವ ಮಿಲಿಟರಿ ಕ್ರೀಡಾಕೂಟದಲ್ಲಿ  ಅಕ್ಟೋಬರ್ 22 ರ  ಮಂಗಳವಾರ ಎರಡು ಚಿನ್ನದ ಪದಕಗಳಿಗೆ ಮುತ್ತಿಕ್ಕಿದ್ದಾರೆ.

ಪುರುಷರ 100 ಮೀಟರ್ಸ್‌ ಓಟವನ್ನು 12.00 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿದ ಆನಂದನ್‌ ಚಿನ್ನಕ್ಕೆ ಕೊರಳೊಡ್ಡಿದರು. ಇದರೊಂದಿಗೆ ಈ ಬಾರಿಯ ಕೂಟದಲ್ಲಿ ಭಾರತದ ಪದಕದ ಖಾತೆ ತೆರೆದರು.

ಪೆರು ದೇಶದ ಕ್ಯಾಸಸ್‌ ಜೋಸ್‌ (12.65 ಸೆ.) ಮತ್ತು ಕೊಲಂಬಿಯಾದ ಫಜಾರ್ಡೊ ಪಾರ್ಡೊ ಟಿಯೊಡಿಸೆಲೊ (12.72ಸೆ.) ಅವರು ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಪಡೆದರು.

ಪುರುಷರ 400 ಮೀಟರ್ಸ್‌ ಐಟಿ–1 ವಿಭಾಗದಲ್ಲೂ 32 ವರ್ಷದ ಆನಂದನ್‌ ಚಿನ್ನದ ಸಾಧನೆ ಮಾಡಿದರು. ಅವರು ನಿಗದಿತ ದೂರ ಕ್ರಮಿಸಲು 53.35 ಸೆಕೆಂಡುಗಳನ್ನು ತೆಗೆದುಕೊಂಡರು.

ಕೊಲಂಬಿಯಾದ ಫಜಾರ್ಡೊ ಪಾರ್ಡೊ ಟಿಯೊಡಿಸೆಲೊ 58.95 ಸೆಕೆಂಡುಗಳಲ್ಲಿ ಗುರಿ ಕ್ರಮಿಸಿ ಬೆಳ್ಳಿಯ ಪದಕ ಜಯಿಸಿದರು. ರಾಂಕಿನ್‌ ಮೈಕಲ್‌ (1:00.31ಸೆ.) ಅವರು ಈ ವಿಭಾಗದ ಕಂಚಿನ ಪದಕ ತಮ್ಮದಾಗಿಸಿಕೊಂಡರು.