ವಿಶ್ವ ಮಹಿಳಾ ಬಾಕ್ಸಿಂಗ್​ ಚಾಂಪಿಯನ್ಸ್​ಶಿಪ್​ನಲ್ಲಿ ಮೇರಿ ಕೋಮ್​ಗೆ ಆರನೇ ಚಿನ್ನದ ಪದಕ

0
401

ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್​​ಶಿಪ್​​​​ನಲ್ಲಿ ಭಾರತದ ಬಾಕ್ಸಿಂಗ್ ತಾರೆ ಮೇರಿ ಕೋಮ್ ಆರನೇ ಬಾರಿಗೆ ಚಿನ್ನದ ಪದಕ ಜಯಿಸಿದ್ದಾರೆ. ಈ ಮೂಲಕ ಅವರು, ಆರು ಬಾರಿ ಚಿನ್ನದ ಪದಕ ಗೆದ್ದ ಭಾರತದ ಏಕೈಕ ಬಾಕ್ಸಿಂಗ್​ ಪಟು ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ನವದೆಹಲಿ:  ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್​​ಶಿಪ್​​​​ನಲ್ಲಿ ಭಾರತದ ಬಾಕ್ಸಿಂಗ್ ತಾರೆ ಮೇರಿ ಕೋಮ್ ಆರನೇ ಬಾರಿಗೆ ಚಿನ್ನದ ಪದಕ ಜಯಿಸಿದ್ದಾರೆ. ಈ ಮೂಲಕ ಅವರು, ಆರು ಬಾರಿ ಚಿನ್ನದ ಪದಕ ಗೆದ್ದ ಭಾರತದ ಏಕೈಕ ಬಾಕ್ಸಿಂಗ್​ ಪಟು ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

48 ಕೆ.ಜಿ. ವಿಭಾಗದಲ್ಲಿ ಇಂದು(ನವೆಂಬರ್ 24) ನಡೆದ ಅಂತಿಮ ಫೈನಲ್ ಹಣಾಹಣಿಯಲ್ಲಿ ಉಕ್ರೇನಿನ ಹನ್ನಾ ಒಕ್​​​ಹುಟಾರನ್ನು 5-0 ಅಂತರದಿಂದ ಸೋಲಿಸಿದ ಮೇರಿಕೋಮ್​, 6ನೇ ಬಾರಿ ಸ್ವರ್ಣ ಪದಕ ಗೆದ್ದರು. ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಮೇರಿ ಕೋಮ್​ ಅವರಿಗೆ ಇದು ಆರನೇ ದಿಗ್ವಿಜಯ. ಇದಕ್ಕೂ ಮೊದಲು ಕೋಮ್ ಅವರು 5 ಚಿನ್ನ ಹಾಗೂ ಒಂದು ಬೆಳ್ಳಿ ತಮ್ಮದಾಗಿಸಿದ್ದರು.

ಶುಕ್ರವಾರ ನಡೆದ ಸೆಮಿ ಫೈನಲ್ ಕಾದಾಟದಲ್ಲಿ ಮೇರಿ ಕೋಮ್ ಅವರು ಉ. ಕೊರಿಯಾದ ಕಿಮ್ ಹ್ಯಾಂಗ್​ ಮಿ ಅವರನ್ನು 5-0 ಅಂಕದಿಂದ ಸೋಲಿಸಿದ್ದರು. ಈ ಹಿಂದೆ 2001-2010ರ ಅವಧಿಯಲ್ಲಿ 48 ಕೆ.ಜಿ., 45 ಕೆ.ಜಿ. ಹಾಗೂ 46 ಕೆ.ಜಿ. ವಿಭಾಗಗಳ ಸ್ಪರ್ಧೆಯಲ್ಲಿ ಕೋಮ್ ಜಯಿಸಿದ್ದರು.

ಚಾಂಪಿಯನ್​ಶಿಪ್​ನಲ್ಲಿ ಗೆದ್ದ ಮೇರಿಕೋಮ್​ ಅವರನ್ನು ಪ್ರಧಾನಿ ನರೇಂದ್ರ ಮೋದಿ ಟ್ವಿಟರ್​ ಮೂಲಕ ಅಭಿನಂದಿಸಿದ್ದಾರೆ.