ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ : ಸ್ವರ್ಣ ಗೆದ್ದ ಸಿಂಧು

0
100

ಬಿ.ಡಬ್ಲ್ಯು.ಎಫ್. ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ಭಾರತದ ಪಿ.ವಿ. ಸಿಂಧು ಅವರು ಸ್ವರ್ಣ ಪದಕ ಗೆದ್ದಿದ್ದಾರೆ.

ಬಸೆಲ್ (ಸ್ವಿಜರ್ಲೆಂಡ್): ಬಿ.ಡಬ್ಲ್ಯು.ಎಫ್. ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ಭಾರತದ ಪಿ.ವಿ. ಸಿಂಧು ಅವರು ಸ್ವರ್ಣ ಪದಕ ಗೆದ್ದಿದ್ದಾರೆ. ಇಂದು ನಡೆದ ಫೈನಲ್ ಕಾದಾಟದಲ್ಲಿ ವಿಶ್ವದ 5ನೇ ಶ್ರೇಯಾಂಕಿತ ಆಟಗಾರ್ತಿಯಾಗಿರುವ ಸಿಂಧು ಅವರು ವಿಶ್ವದ ನಾಲ್ಕನೇ ಶ್ರೇಯಾಂಕಿತೆ ಜಪಾನಿನ ನೊಜೊಮಿ ಒಕುಹರಾ ಅವರನ್ನು ಸೋಲಿಸುವ ಮೂಲಕ ಈ ಸಾಧನೆಯನ್ನು ಮಾಡಿದರು.

5ನೇ ಶ್ರೇಯಾಂಕಿತೆ ಸಿಂಧು ಆಗಸ್ಟ್ 25 ರ ಭಾನುವಾರ ನಡೆದ ಫೈನಲ್​ ಕಾದಾಟದಲ್ಲಿ ಜಪಾನಿನ ನಜೊಮಿ ಒಕುಹಾರ ಅವರನ್ನು  21-7, 21-7 ನೇರ ಸೆಟ್ ಗಳಲ್ಲಿ ಸೋಲಿಸಿ ಇತಿಹಾಸ ನಿರ್ಮಿಸಿದರು. ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ಸಿಂಧು ಅವರು 2013 ಮತ್ತು 2014ರಲ್ಲಿ ಕಂಚಿನ ಪದಕ ಗೆದ್ದಿದ್ದರು. 2017 ಹಾಗೂ 2018ರಲ್ಲಿ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟುಕೊಂಡಿದ್ದರು. ಆದರೆ ಈ ಬಾರಿ ಇಲ್ಲಿ ಭರ್ಜರಿಯಾಗಿ ಗೆಲ್ಲುವ ಮೂಲಕ ಪಿ ವಿ ಸಿಂಧು ಅವರು ಚಿನ್ನದ ನಗೆ ಬೀರಿದ್ದಾರೆ!ಇದು ಭಾರತೀಯ ಆಟಗಾರರೊಬ್ಬರು ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಗೆದ್ದ ಮೊತ್ತ ಮೊದಲ ಸ್ವರ್ಣವಾಗಿದೆ.

ಸಿಂಧು ಅವರು ಆಗಸ್ಟ್ 24 ರ ಶನಿವಾರ ನಡೆದ ಉಪಾಂತ್ಯದ ಕಾದಾಟದಲ್ಲಿ ಆಲ್ ಇಂಗ್ಲೆಂಡ್ ಚಾಂಪಿಯನ್ ಚೀನಾದ ಚೆನ್ ಯೂ ಫೀ ಅವರನ್ನು 21-7, 21-14 ನೇರ ಗೇಮ್​ಗಳಿಂದ ಕೇವಲ 40 ನಿಮಿಷಗಳಲ್ಲಿ ಮಣಿಸಿ ಮಣಿಸಿ ಫೈನಲ್​ಗೇರಿದ್ದರು.

‘ಇವತ್ತು ನನ್ನ ತಾಯಿಯ ಜನ್ಮದಿನ. ಹಾಗಾಗಿ ನಾನು ಈ ಸ್ವರ್ಣ ಪದಕವನ್ನು ತಾಯಿಗೆ ಅರ್ಪಿಸುತ್ತಿದ್ದೇನೆ’ – ಎಂದು ಸಿಂಧು ಅವರು ತನ್ನ ಈ ಐತಿಹಾಸಿಕ ಗೆಲುವಿನ ಬಳಿಕ ಹೆಳಿದರು. ಇನ್ನು ತನ್ನ ಈ ಗೆಲುವಿನ ಹಿಂದನ ರೂವಾರಿ ತನ್ನ ತರಬೇತುದಾರ ಪುಲ್ಲೇಲ ಗೋಪಿಚಂದ್ ಅವರ ಶ್ರಮವನ್ನು ನೆನಪಿಸಿಕೊಳ್ಳಲು ಸಿಂಧು ಮರೆಯಲಿಲ್ಲ. ಗೋಪಿಚಂದ್ ಮತ್ತು ತನ್ನ ಬೆಂಬಲ ಸಿಬ್ಬಂದಿಗಳಿಗೂ ಸಹ ಸಿಂಧು ಕೃತಜ್ಞತೆ ಸಲ್ಲಿಸಿದ್ದಾರೆ.