ವಿಶ್ವ ಪ್ಯಾರಾ ಅಥ್ಲೆಟಿಕ್ಸ್: ನಿಶಾದ್ ಕುಮಾರ್ ಗೆ ಕಂಚು

0
8

ದುಬೈನಲ್ಲಿ ನಡೆಯುತ್ತಿರುವ ದುಬೈ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನ ಪುರುಷರ ಹೈ ಜಂಪ್ ವಿಭಾಗದಲ್ಲಿ ಭಾರತದ ನಿಶಾದ್ ಕುಮಾರ್ ಅವರು ಎರಡು ಮೀಟರ್ ಜಿಗಿದು ಕಂಚಿನ ಪದಕ ತನ್ನದಾಗಿಸಿಕೊಂಡಿದ್ದಾರೆ. ಇದರೊಂದಿಗೆ 2020ರ ಟೋಕಿಯೊ ಪ್ಯಾರಾಲಿಂಪಿಕ್ಸ್ ಗೆ ಅರ್ಹತೆ ಪಡೆಯುವಲ್ಲಿ ಸಫಲರಾಗಿದ್ದಾರೆ.

ದುಬೈ: ದುಬೈನಲ್ಲಿ ನಡೆಯುತ್ತಿರುವ ದುಬೈ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನ ಪುರುಷರ ಹೈ ಜಂಪ್ ವಿಭಾಗದಲ್ಲಿ ಭಾರತದ ನಿಶಾದ್ ಕುಮಾರ್ ಅವರು ಎರಡು ಮೀಟರ್ ಜಿಗಿದು ಕಂಚಿನ ಪದಕ ತನ್ನದಾಗಿಸಿಕೊಂಡಿದ್ದಾರೆ. ಇದರೊಂದಿಗೆ 2020ರ ಟೋಕಿಯೊ ಪ್ಯಾರಾಲಿಂಪಿಕ್ಸ್ ಗೆ ಅರ್ಹತೆ ಪಡೆಯುವಲ್ಲಿ ಸಫಲರಾಗಿದ್ದಾರೆ.

ಟೋಕಿಯೊ ಒಲಿಂಪಿಕ್ಸ್ ಗೆ ಅರ್ಹತೆ ಪಡೆದ ಭಾರತದ 9ನೇ ಅಥ್ಲಿಟ್ ನಿಶಾದ್ ಕುಮಾರ್ ಆಗಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಚಾಂಪಿಯನ್‍ಶಿಪ್ ನಲ್ಲಿ ಭಾರತಕ್ಕೆ ಮೂರು ಕಂಚಿನ ಪದಕಗಳು ಸೇರಿ ಒಟ್ಟು ಆರು ಪದಕಗಳು ಬಂದಿವೆ. ನಿಶಾದ್ ಮೊದಲ ಬಾರಿ 1.75 ಮೀ. ಹಾಗೂ ನಂತರದ ಪ್ರಯತ್ನದಲ್ಲಿ 1.97 ಮೀ ಜಿಗಿದಿದ್ದರು.

ಅಮೆರಿಕದ ರಿಯೋ ಪ್ಯಾರಾಲಿಂಪಿಕ್ಸ್ ಚಾಂಪಿಯನ್ ಹಾಗೂ ವಿಶ್ವ ದಾಖಲೆಗಾರ ರೋಡ್ರಿಕ್ ಟೌನ್‍ಶೆಂಡ್ ರೋಬರ್ಟ್ ಅವರು 2.03 ಮೀ ಜಿಗಿಯುವ ಮೂಲಕ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ. ಚೀನಾದ ಹಾಂಗ್ಜಿ ಚೆನ್ ಬೆಳ್ಳಿ ಪದಕ ಪಡೆದುಕೊಂಡರು.