ವಿಶ್ವ ಟಿ-10 ಲೀಗ್‌ಗೆ ಸೆಹ್ವಾಗ್, ಆಫ್ರಿದಿ, ಮೆಕಲಮ್ ಐಕಾನ್

0
633

ಎರಡನೇ ಆವೃತ್ತಿಯ ಟ್ವೆಂಟಿ-20 ಲೀಗ್ ನವೆಂಬರ್ 23ರಂದು ಶಾರ್ಜಾದಲ್ಲಿ ನಡೆಯಲಿದೆ. ಇದರಂತೆ ವಿಶ್ವದ ಚೊಚ್ಚಲ ಟಿ-10 ಲೀಗ್‌ಗೆ ಭಾರತದ ಮಾಜಿ ಸ್ಫೋಟಕ ಆರಂಭಿಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಜೊತೆಗೆ ಪಾಕಿಸ್ತಾನ ಮಾಜಿ ನಾಯಕ ಶಾಹೀದ್ ಆಫ್ರಿದಿ ಮತ್ತು ನ್ಯೂಜಿಲೆಂಡ್‌ನ ಬ್ರೆಂಡನ್ ಮೆಕಲಮ್ ಐಕಾನ್ ಆಗಿ ಆಯ್ಕೆಗೊಂಡಿದ್ದಾರೆ.

ದುಬೈ: ಎರಡನೇ ಆವೃತ್ತಿಯ ಟ್ವೆಂಟಿ-20 ಲೀಗ್ ನವೆಂಬರ್ 23ರಂದು ಶಾರ್ಜಾದಲ್ಲಿ ನಡೆಯಲಿದೆ. ಇದರಂತೆ ವಿಶ್ವದ ಚೊಚ್ಚಲ ಟಿ-10 ಲೀಗ್‌ಗೆ ಭಾರತದ ಮಾಜಿ ಸ್ಫೋಟಕ ಆರಂಭಿಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಜೊತೆಗೆ ಪಾಕಿಸ್ತಾನ ಮಾಜಿ ನಾಯಕ ಶಾಹೀದ್ ಆಫ್ರಿದಿ ಮತ್ತು ನ್ಯೂಜಿಲೆಂಡ್‌ನ ಬ್ರೆಂಡನ್ ಮೆಕಲಮ್ ಐಕಾನ್ ಆಗಿ ಆಯ್ಕೆಗೊಂಡಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಅನುಮೋದನೆಯೊಂದಿಗೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಮಾನ್ಯತೆಯಲ್ಲಿ ಟಿ-10 ಲೀಗ್‌ ಆಯೋಜಿಸಲಾಗುತ್ತಿದೆ. 
2018ನೇ ಆವೃತ್ತಿಯು 10 ದಿನಗಳ ಪರ್ಯಂತ ನಡೆಯಲಿದ್ದು, ಒಟ್ಟು 29 ಪಂದ್ಯಗಳು ನಡೆಯಲಿದೆ. ಕಳೆದ ಬಾರಿ ನಾಲ್ಕು ದಿನಗಳು ಮಾತ್ರ ಟೂರ್ನಿ ಆಯೋಜನೆಯಾಗಿತ್ತು. 

ಮೊದಲ ಆವೃತ್ತಿಯಲ್ಲಿ ದೊರಕಿದ ಯಶಸ್ಸಿನಿಂದ ಉತ್ಸಾಹಿತರಾಗಿರುವ ಆಯೋಜಕರು ಅನೇಕ ಬದಲಾವಣೆಗಳನ್ನು ತಂದಿದ್ದಾರೆ. ಅನುಭವಿ ಸಿಒಇ ಜೊತೆಗೆ ಹೊಸ ಆಡಳಿತ ಮಂಡಳಿಯನ್ನು ರೂಪಿಸಿದೆ. ಹಾಗೆಯೇ ಐಸಿಸಿ ಪ್ಯಾನೆಲ್ ಅಂಪೈರ್‌ಗಳನ್ನು ನೇಮಕ ಮಾಡಲಾಗಿದೆ. ಇನ್ನು ತಾಂತ್ರಿಕ ಸಮಿತಿಯ ಅಧ್ಯಕ್ಷರಾಗಿ ರೋಶನ್ ಮಹಾನಾಮ ಹಾಗೂ ವಾಸೀಂ ಅಕ್ರಂ ಅವರನ್ನು ನೇಮಕ ಮಾಡಲಾಗಿದೆ. 

ಭಾಗವಹಿಸುವ ಎಂಟು ತಂಡಗಳು: ಕೇರಳ ಕಿಂಗ್ಸ್, ಪಂಜಾಬ್ ಲೆಜೆಂಡ್ಸ್, ಮರಾಠ ಅರಬೀಯನ್ಸ್, ಬಂಗಾಳ ಟೈಗರ್ಸ್, ದಿ ಕರಾಚಿಯನ್ಸ್, ರಜಪೂತ್ಸ್, ನಾಥರ್ನ್ ವಾರಿಯರ್ಸ್ ಮತ್ತು ಪಾಕ್ತೂನ್ಸ್. 

ದಿನಾಂಕ: ನ. 23ರಿಂದ ಡಿ. 02ರ ವರೆಗೆ 
ಸ್ಥಳ: ಶಾರ್ಜಾ ಕ್ರಿಕೆಟ್ ಮೈದಾನ 
ಹೊಸದಾಗಿ ಸೇರ್ಪಡೆಯಾದ ತಂಡಗಳು: ಕರಾಚಿಯನ್ಸ್ ಮತ್ತು ನಾಥರ್ನ್ ವಾರಿಯರ್ಸ್.