ವಿಶ್ವ ಕುಸ್ತಿ ಚಾಂಪಿಯನ್​ಷಿಪ್​ ಕಂಚು ಗೆದ್ದ ಪೂಜಾ

0
468

ಹರಿಯಾಣದ ಕುಸ್ತಿಪಟು ಪೂಜಾ ಧಂಡಾ, ವಿಶ್ವ ಕುಸ್ತಿ ಚಾಂಪಿಯನ್​ಷಿಪ್​ನಲ್ಲಿ ಕಂಚಿನ ಪದಕ ಜಯಿಸಿದ್ದಾರೆ. ಇದು ವಿಶ್ವ ಕುಸ್ತಿಯ ಮಹಿಳಾ ವಿಭಾಗದಲ್ಲಿ ಭಾರತ 6 ವರ್ಷಗಳ ಬಳಿಕ ಗೆದ್ದ ಮೊದಲ ಪದಕವೆನಿಸಿದ್ದು, ಒಟ್ಟಾರೆ ವಿಶ್ವ ಚಾಂಪಿಯನ್​ಷಿಪ್​ನಲ್ಲಿ ಪದಕ ಗೆದ್ದ ಭಾರತದ ನಾಲ್ಕನೇ ಮಹಿಳಾ ರೆಸ್ಲರ್ ಎನ್ನುವ ಶ್ರೇಯ ಇವರದಾಗಿದೆ.

ಬುಡಾಪೆಸ್ಟ್(ಹಂಗೇರಿ): ಹರಿಯಾಣದ ಕುಸ್ತಿಪಟು ಪೂಜಾ ಧಂಡಾ, ವಿಶ್ವ ಕುಸ್ತಿ ಚಾಂಪಿಯನ್​ಷಿಪ್​ನಲ್ಲಿ ಕಂಚಿನ ಪದಕ ಜಯಿಸಿದ್ದಾರೆ. ಇದು ವಿಶ್ವ ಕುಸ್ತಿಯ ಮಹಿಳಾ ವಿಭಾಗದಲ್ಲಿ ಭಾರತ 6 ವರ್ಷಗಳ ಬಳಿಕ ಗೆದ್ದ ಮೊದಲ ಪದಕವೆನಿಸಿದ್ದು, ಒಟ್ಟಾರೆ ವಿಶ್ವ ಚಾಂಪಿಯನ್​ಷಿಪ್​ನಲ್ಲಿ ಪದಕ ಗೆದ್ದ ಭಾರತದ ನಾಲ್ಕನೇ ಮಹಿಳಾ ರೆಸ್ಲರ್ ಎನ್ನುವ ಶ್ರೇಯ ಇವರದಾಗಿದೆ.

24 ವರ್ಷದ ಪೂಜಾ 57ಕೆ.ಜಿ ವಿಭಾಗದ ಫ್ರೀ ಸ್ಟೈಲ್ ವಿಭಾಗದ ಕಂಚಿನ ಪದಕ ಹೋರಾಟದಲ್ಲಿ 2017ರ ಯುರೋಪಿಯನ್ ಚಾಂಪಿಯನ್ ನಾರ್ವೆಯ ಗ್ರೇಸ್ ಬುಲೆನ್​ರನ್ನು 10-7ರಿಂದ ಸೋಲಿಸಿದರು. 2006ರಲ್ಲಿ ಅಲ್ಕಾ ತೋಮರ್ ಮತ್ತು 2012ರಲ್ಲಿ ಗೀತಾ ಪೋಗಟ್, ಬಬಿತಾ ಪೋಗಟ್ ಕಂಚಿನ ಪದಕ ಜಯಿಸಿದ್ದರು. ಇದು ಪೂಜಾಗೆ ವೃತ್ತಿಜೀವನದ 2ನೇ ಪ್ರತಿಷ್ಠಿತ ಪದಕವಾಗಿದ್ದು, ಕಳೆದ ಗೋಲ್ಡ್​ಗೋಸ್ಟ್ ಕಾಮನ್ವೆಲ್ತ್ ಗೇಮ್್ಸ ಬೆಳ್ಳಿ ಪದಕ ಜಯಿಸಿದ್ದರು. ಇದು ಹಾಲಿ ಟೂರ್ನಿಯಲ್ಲಿ ಭಾರತ ಗೆದ್ದ 2ನೇ ಪದಕ. ಇದಕ್ಕೂ ಮುನ್ನ ಭಜರಂಗ್ ಪೂನಿಯಾ ಬೆಳ್ಳಿ ಜಯಿಸಿದ್ದರು.

ಸೆಣಸಾಟದಲ್ಲಿ ಉತ್ತಮ ಆರಂಭ ಕಂಡ ಪೂಜಾ 4-1ರ ಮುನ್ನಡೆ ಸಾಧಿಸಿದ್ದರು. ಎದುರಾಳಿಯಿಂದ ಪ್ರತಿಹೋರಾಟ ಎದುರಿಸಿದ ನಡುವೆಯೂ ಪೂಜಾ ಮೊದಲ ಅವಧಿಯ ಅಂತ್ಯಕ್ಕೆ ಮುನ್ನಡೆಯನ್ನು 6-1ಕ್ಕೆ ಏರಿಸಿದರು. 2014ರ ಯೂತ್ ಒಲಿಂಪಿಕ್ಸ್ ಸ್ವರ್ಣ ಪದಕ ವಿಜೇತೆ 21 ವರ್ಷದ ಗ್ರೇಸ್ ಅಂತಿಮ ಹಂತದಲ್ಲಿ ಪ್ರತಿರೋಧ ನೀಡಿದರು ಪೂಜಾ 3 ಅಂಕಗಳ ಮುನ್ನಡೆಯೊಂದಿಗೆ ಗೆದ್ದು ಸಂಭ್ರಮಿಸಿದರು.