ವಿಶ್ವ ಆರೋಗ್ಯ ಸಂಸ್ಥೆಯ ಅತಿ ಹೆಚ್ಚು ಮಾಲಿನ್ಯಗೊಂಡಿರುವ 15 ನಗರಗಳ ಪಟ್ಟಿಯಲ್ಲಿ : ಕಾನ್ಪುರಕ್ಕೆ ಮೊದಲ ಸ್ಥಾನ

0
560

ಅತಿ ಹೆಚ್ಚು ಮಾಲಿನ್ಯಗೊಂಡಿರುವ ವಿಶ್ವದ 15 ನಗರಗಳಲ್ಲಿ ಭಾರತದ 14 ನಗರಗಳಿವೆ. ನಾಲ್ಕು ಉತ್ತರಪ್ರದೇಶಕ್ಕೆ ಸೇರಿವೆ.

ನವದೆಹಲಿ (ಪಿಟಿಐ):ಅತಿ ಹೆಚ್ಚು ಮಾಲಿನ್ಯಗೊಂಡಿರುವ ವಿಶ್ವದ 15 ನಗರಗಳಲ್ಲಿ ಭಾರತದ 14 ನಗರಗಳಿವೆ. ನಾಲ್ಕು ಉತ್ತರಪ್ರದೇಶಕ್ಕೆ ಸೇರಿವೆ. ಜಗತ್ತಿನಲ್ಲೇ ಕಾನ್ಪುರ ಅತಿ ಹೆಚ್ಚು ಮಾಲಿನ್ಯಗೊಂಡಿರುವ ನಗರವಾಗಿದ್ದು, ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ.2 ನೇ ಸ್ಥಾನ ಫರೀದಾಬಾದ್ ಮೂರನೇ ಸ್ಥಾನ ವಾರಣಾಸಿ ಪಡೆದಿದೆ.

ಜಗತ್ತಿನಲ್ಲೇ ಕಾನ್ಪುರ ಅತಿ ಹೆಚ್ಚು ಮಾಲಿನ್ಯಗೊಂಡಿರುವ ನಗರವಾಗಿದ್ದು, ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ. ಕ್ರಮವಾಗಿ ಕಾನ್ಪುರ ಮತ್ತು ಲಖನೌ ಸಂಸದರು ಆಗಿರುವ ಗೃಹ ಸಚಿವ ರಾಜನಾಥ್‌ ಸಿಂಗ್‌ ಮತ್ತು ಹಿರಿಯ ಬಿಜೆಪಿ ನಾಯಕ ಮುರಳಿ ಮನೋಹರ ಜೋಶಿ ಅವರು ಮಾಲಿನ್ಯ ನಿಯಂತ್ರಣ ವಿಷಯದಲ್ಲಿ ಮೌನವಹಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಲಾಗಿದೆ.

ರಾಜ್ಯ ಸರ್ಕಾರ ಮತ್ತು ಸ್ಥಳೀಯ ಸಂಸ್ಥೆ ಮಾಲಿನ್ಯ ನಿಯಂತ್ರಣಕ್ಕೆ ಕೆಲವು ಕ್ರಮಗಳನ್ನು ಕೈಗೊಂಡಿವೆ. ಆದರೆ, ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಸಂಸದರು, ಸೌಂದರ್ಯ ಮತ್ತು ಮೂಲಸೌಕರ್ಯಕ್ಕೆ ಆದ್ಯತೆ ನೀಡಿದ್ದಾರೆ. ಇದರಿಂದ, ನಗರದಲ್ಲಿ ಕಳಪೆ ವಾಯುಗುಣಮಟ್ಟದ ಸಮಸ್ಯೆ ನಿವಾರಿಸಲು ಸಾಧ್ಯವಾಗಿಲ್ಲ ಎಂದು ಅದು ತಿಳಿಸಿದೆ.

ವಿಶ್ವದಲ್ಲೇ ಅತಿ ಹೆಚ್ಚು ಮಾಲಿನ್ಯಗೊಂಡಿರುವ 15 ನಗರಗಳ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಲೋಕಸಭಾ ಕ್ಷೇತ್ರದ ವಾರಾಣಸಿ ನಗರ ಮೂರನೇ ಸ್ಥಾನ ಪಡೆದಿದೆ.

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ಈ ಪಟ್ಟಿಯನ್ನು ಸಿದ್ಧಪಡಿಸಿದೆ. ವಾರಾಣಸಿಯಲ್ಲಿ ಕಟ್ಟಡಗಳ ನಿರ್ಮಾಣ ಚಟುವಟಿಕೆಯನ್ನು ವ್ಯಾಪಕವಾಗಿ ಕೈಗೊಂಡಿರುವುದರಿಂದ ಉಸಿರಾಟ ಮತ್ತು ಅಲರ್ಜಿ ಸಮಸ್ಯೆಗಳಿಂದ ಬಳಲುತ್ತಿರುವ ನಾಗರಿಕರ ಸಂಖ್ಯೆ ಹೆಚ್ಚುತ್ತಿದೆ ಎಂದು ಡಬ್ಲ್ಯೂಎಚ್‌ಒ ವರದಿ ತಿಳಿಸಿದೆ.

ರಾಜ್ಯ ಸರ್ಕಾರ ಮತ್ತು ಸ್ಥಳೀಯ ಸಂಸ್ಥೆ ಮಾಲಿನ್ಯ ನಿಯಂತ್ರಣಕ್ಕೆ ಕೆಲವು ಕ್ರಮಗಳನ್ನು ಕೈಗೊಂಡಿವೆ. ಆದರೆ, ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಸಂಸದರು, ಸೌಂದರ್ಯ ಮತ್ತು ಮೂಲಸೌಕರ್ಯಕ್ಕೆ ಆದ್ಯತೆ ನೀಡಿದ್ದಾರೆ. ಇದರಿಂದ, ನಗರದಲ್ಲಿ ಕಳಪೆ ವಾಯುಗುಣಮಟ್ಟದ ಸಮಸ್ಯೆ ನಿವಾರಿಸಲು ಸಾಧ್ಯವಾಗಿಲ್ಲ ಎಂದು ಅದು ತಿಳಿಸಿದೆ.

ಗಂಭೀರ ಪರಿಸ್ಥಿತಿಗೆ ತಲುಪಿದ್ದ ನಗರಗಳು

ವಾರಾಣಸಿಯಲ್ಲಿನ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) 2017ರಲ್ಲಿ ಅಪಾಯಕಾರಿ ಮಟ್ಟವಾದ 490ಕ್ಕೆ ತಲುಪಿತ್ತು. 2018ರ ಡಿಸೆಂಬರ್‌ನಲ್ಲಿ 384 ಇತ್ತು.

ದೆಹಲಿಯಲ್ಲಿ ಎಕ್ಯೂಐ 448ಕ್ಕೆ ತಲುಪಿದೆ. ಕಟ್ಟಡ ನಿರ್ಮಾಣ, ತ್ಯಾಜ್ಯ ಸುಡುವುದು, ವಾಹನಗಳ ಮಾಲಿನ್ಯ ಮತ್ತು ಕೃಷಿ ತ್ಯಾಜ್ಯಗಳಿಗೆ ಬೆಂಕಿ ಹಚ್ಚುವುದರಿಂದ ದೆಹಲಿಯಲ್ಲಿ ಮಾಲಿನ್ಯ ಹೆಚ್ಚಾಗಿದೆ ಎಂದು ಡಬ್ಲ್ಯೂಎಚ್‌ಒ ವರದಿ ತಿಳಿಸಿದೆ.

ಜಗತ್ತಿನಲ್ಲೇ ಅತಿ ಹೆಚ್ಚು ಮಾಲಿನ್ಯಗೊಂಡಿರುವ ನಗರಗಳು

1 ನೇ ಸ್ಥಾನ ಕಾನ್ಪುರ  

2 ನೇ ಸ್ಥಾನ  ಫರಿದಾಬಾದ್‌ 

3  ನೇ ಸ್ಥಾನ  ವಾರಾಣಸಿ  

4 ನೇ ಸ್ಥಾನ  ಗಯಾ 

5 ನೇ ಸ್ಥಾನ  ಪಟ್ನಾ  

6 ನೇ ಸ್ಥಾನ ದೆಹಲಿ 

7 ನೇ ಸ್ಥಾನ  ಲಖನೌ 

8 ನೇ ಸ್ಥಾನ ಆಗ್ರಾ 

9 ನೇ ಸ್ಥಾನ  ಮುಜಾಫರ್‌ಪುರ 

10  ನೇ ಸ್ಥಾನ ಶ್ರೀನಗರ 

11 ನೇ ಸ್ಥಾನ ಗುರುಗ್ರಾಮ 

12 ನೇ ಸ್ಥಾನ ಜೈಪುರ 

13 ನೇ ಸ್ಥಾನ ಪಟಿಯಾಲ 

14 ನೇ ಸ್ಥಾನ ಜೋಧಪುರ