ವಿಶ್ವಾದ್ಯಂತ ಮುಂದಿನ 48 ಗಂಟೆಗಳ ಕಾಲ ಇಂಟರ್​ನೆಟ್​ ವ್ಯತ್ಯಯ

0
849

ಮುಂದಿನ 48 ಗಂಟೆಗಳ ಕಾಲ ವಿಶ್ವಾದ್ಯಂತ ಇಂಟರ್​ನೆಟ್​ ಬಳಕೆದಾರರು ನೆಟ್​ವರ್ಕ್​ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ರಷ್ಯಾ ಟುಡೇ ವರದಿ ಮಾಡಿದೆ.

ನವದೆಹಲಿ: ಮುಂದಿನ 48 ಗಂಟೆಗಳ ಕಾಲ ವಿಶ್ವಾದ್ಯಂತ ಇಂಟರ್​ನೆಟ್​ ಬಳಕೆದಾರರು ನೆಟ್​ವರ್ಕ್​ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ರಷ್ಯಾ ಟುಡೇ ವರದಿ ಮಾಡಿದೆ.

ಡೊಮೈನ್​ ನೇಮ್​ ಸಿಸ್ಟಮ್(ಡಿಎನ್​ಎಸ್​)​ ಅಥವಾ ಇಂಟರ್​ನೆಟ್​​ ಅಡ್ರೆಸ್​ ಬುಕ್​ನ್ನು ಕಾಪಾಡುವ ಕ್ರಿಪ್ಟೋಗ್ರಾಫಿಕ್​ ಕೀಯನ್ನು ಬದಲಾಯಿಸುತ್ತಿದ್ದು, ಈ ಸಂದರ್ಭದಲ್ಲಿ ಸರ್ವರ್​ ಡೌನ್​ ಆಗಿ ನೆಟ್​ವರ್ಕ್​ ಸಮಸ್ಯೆಗಳು ಎದುರಾಗಲಿವೆ. ಹೆಚ್ಚುತ್ತಿರುವ ಸೈಬರ್​ ದಾಳಿಗಳಿಗೆ ಕಡಿವಾಣ ಹಾಕಲು ಇದು ಅನಿವಾರ್ಯವಾಗಿದೆ ಎಂದು ಐಸಿಎಎಸ್​ಎನ್​ ತಿಳಿಸಿದೆ.

ಇದರಿಂದ ಕೆಲ ಕಾಲ ಮುಖ್ಯ ಡೊಮೈನ್​ ಸರ್ವರ್​ ಮತ್ತು ಸಂಬಂಧಿಸಿದ ನೆಟ್​ವರ್ಕ್​ ಮೂಲಸೌಕರ್ಯಗಳ ಕಾರ್ಯನಿರ್ವಹಿಸದ ಕಾರಣ ಜಗತ್ತಿನಾದ್ಯಂತ ಅಂತರ್ಜಾಲ ಬಳಕೆದಾರರು ಈ ತೊಂದರೆ ಎದುರಿಸಬೇಕಿದೆ. ಇಂಟರ್​ನೆಟ್​ ಕಾರ್ಪೊರೇಷನ್​ ಆಫ್​ ಅಸೈನ್ಡ್ ನೇಮ್ಸ್​ ಅಂಡ್ ನಂಬರ್ಸ್​ (ಐಸಿಎಎಸ್​ಎನ್​) ಈ ಕಾರ್ಯ ನಡೆಸಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಡಿಎನ್​ಎಸ್​ ರಕ್ಷಣೆ ಮತ್ತು ಬದ್ಧತೆಗೆ ಈ ಕಾರ್ಯ ಅನಿವಾರ್ಯವಾಗಿದೆ. ವೆಬ್​ಪೇಜ್​ ಬಳಕೆದಾರರು ಮತ್ತು ಅಂತರ್ಜಾಲದಲ್ಲಿ ವ್ಯವಹಾರಗಳನ್ನು ಮಾಡುವವರು ಮುಂದಿನ 48 ಗಂಟೆಗಳು ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಕಮ್ಯುನಿಕೇಷನ್​ ರೆಗ್ಯುಲೇಟರಿ ಅಥಾರಿಟಿ ಎಂದು ತಿಳಿಸಿದೆ.

ಇಂಟರ್ನೆಟ್ ಬಳಕೆದಾರರು ವೆಬ್ ಪುಟಗಳನ್ನು ಪ್ರವೇಶಿಸುವಲ್ಲಿ ಅಥವಾ ಮುಂದಿನ 48 ಗಂಟೆಗಳಲ್ಲಿ ಯಾವುದೇ ವ್ಯವಹಾರಗಳನ್ನು ಮಾಡುವಲ್ಲಿ ತೊಂದರೆಗಳನ್ನು ಎದುರಿಸಬಹುದು. ಅಲ್ಲದೆ, ಬಳಕೆದಾರರು ಹಳೆಯ ISP ಅನ್ನು ಬಳಸುತ್ತಿದ್ದರೆ ಜಾಗತಿಕ ಜಾಲಬಂಧವನ್ನು ಪ್ರವೇಶಿಸುವ ಅನಾನುಕೂಲತೆಯನ್ನು ಎದುರಿಸಬಹುದು. (ಏಜೆನ್ಸೀಸ್​)